ಧಾರಾವಾಹಿ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿಂಚುವ ಭರವಸೆ ಮೂಡಿಸಿರುವ ನಟಿಯರು

  • ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆ ಮಾತಾಗಿರುವ ವೈಷ್ಣವಿ ಗೌಡ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಲ್ಲಿ ಭರವಸೆಯ ನಟಿ ಹಾಗುವುದರಲ್ಲಿ ಅನುಮಾನವಿಲ್ಲ. ಇವರಿಗೆ ಹೀಗಾಗಲೇ ಅಭಿಮಾನಿಗಳ ಸಂಘಗಳು ಹುಟ್ಟಿಕೊಂಡಿದ್ದು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾ ಜನ ಇವರನ್ನು ಫಾಲೋ ಮಾಡುತ್ತಿದ್ದಾರೆ.

Sannidhi

  • ಆಕ್ಟರ್ ಪಲ್ಲವಿ, ನಟಿಸಿದ್ದು ಕೆಲವೊಂದು ಧಾರಾವಾಹಿಗಳಲ್ಲಿ ಆದರೂ ಕನ್ನಡ ಭಾಷೆಗಿಂತ ತೆಲುಗಿನ ಧಾರಾವಾಹಿಯಲ್ಲಿ ಹೆಚ್ಚು ಛಾಪು ಮೂಡಿಸಿದ್ದಾರೆ. ೨೦೧೪ (೬-೫ = ೨) ಚಿತ್ರದ ಮೂಲಕ ಪಾದಾರ್ಪಣೆ ಮಾಡಿ ನಂತರ, ೨೦೧೫ ರಲ್ಲಿ “ಕ” ಚಿತ್ರದಲ್ಲಿ ನಟಿಸಿದ್ದರು. ಇತ್ತೀಚಿಗೆ “ಕಿಡಿ” ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Palllavi

  • ನೇಹಾ ಗೌಡ ಅಲಿಯಾಸ್ ಬೋಂಬೆ, ಲಕ್ಷ್ಮಿ ಬಾರಮ್ಮ ಧಾರಾವಾಹಿ ನ ನಾಯಕಿಯಾಗಿ ನಟಿಸಿರುವ ಇವರು ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಅದ್ಯಾಕೋ ಇದುವರೆಗೂ ಇವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇವರು ಒಪ್ಪಿದ್ದೆ ಆದಲ್ಲಿ ಆಫರ್ ಗಳ ಸುರಿಮಳೆ ಗ್ಯಾರಂಟಿ ಮತ್ತು ಸ್ಯಾಂಡೆಲ್ ವುಡ್ನಲ್ಲಿ ಪೈಪೋಟಿ ಹೆಚ್ಚಾಗುವುದು ಖಂಡಿತ.

Neha Gowda

  • ಕವಿತಾ ಗೌಡ ಅಲಿಯಾಸ್ ಚಿನ್ನು, ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಮನೆ ಮಾತಾದ ಇವರು ಕೆಲವು ದಿನಗಳ ಹಿಂದೆ ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿ ತಾವು ಯಶಸ್ವಿ ನಾಯಕಿ ಆಗುತ್ತೇನೆ ಎಂದು ಭರವಸೆ ಮೂಡಿಸಿ ಅಭಿಮಾನಿಗಳನ್ನು ಸೆಳೆದಿದ್ದಾರೆ.

Kavitha Gowda

  • ಕರ್ನಾಟಕದ ಮನೆ ಮಗಳು ಈ ರಾಧಾ ರಾಮಣ ಖ್ಯಾತಿಯ ಶ್ವೇತ ಪ್ರಸಾದ್. ಪ್ರತಿ ಮನೆಯಲ್ಲೂ ರಾತ್ರಿ ೯ ಗಂಟೆಗೆ ಟಿವಿ ಅಲ್ಲಿ ಬಂದರು ಮನೆಗೆ ನಿಜವಾಗಿ ಬಂದಿರುವೆ ಎಂಬ ಭಾವನೆಯನ್ನು ಉಂಟು ಮಾಡಿ ಬೆಳಗಿನಿಂದ ಕೆಲಸ ಮಾಡಿ ದಣಿದಿರುವ ಗೃಹಿಣಿಯರ ಮನವನ್ನು ತಂಪುಮಾಡುತ್ತಾರೆ. ಇವರು ನಟಿಸಿದ ಧಾರಾವಾಹಿಗಳೆಲ್ಲವೂ ಹಿಟ್ ಆಗಿವೆ.  ಮನೆ ಮಾತಾಗಿರುವ ಈ ಪ್ರತಿಭೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಲ್ಲಿ ಟಾಪ್ ಹೆರೋಯಿನ್ ಗಳಿಗೆ ಮತ್ತೊಂದು ಪೈಪೋಟಿ ಆಗುವುದು ಖಂಡಿತ.

Swetha

ಮನೆ ಮಾತಾಗಿರುವ ಈ ಪ್ರತಿಭೆಗಳು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಲ್ಲಿ ಟಾಪ್ ಹೆರೋಯಿನ್ ಗಳಿಗೆ  ಪೈಪೋಟಿ ಆಗುವುದು ಖಂಡಿತ.

Post Author: