ರಶ್ಮಿಕಾ ಮಂದಣ್ಣ– ಈ ಕೊಡಗಿನ ಬೆಡಗಿಯ ಬಗ್ಗೆ ನಿಮಗೆಷ್ಟು ಗೊತ್ತು?

“ಕಿರಿಕ್ ಪಾರ್ಟಿ”, ಡಿಸೆಂಬರ್ ೨೯, ೨೦೧೬ ಈ ದಿನ ತೆರೆ ಕಂಡ ಚಿತ್ರವಿದು. ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಅಲ್ಲಿ ಭರ್ಜರಿ ಸೌಂಡ್ ಮಾಡಿದ್ದ ಈ ಚಿತ್ರದಲ್ಲಿ ಮೊದಲನೇ ನಾಯಕಿ ಆಗಿ ಕಾಣಿಸಿಕೊಂಡ ಈ ಚೆಲುವಿನ ಹುಡುಗಿ ತಮ್ಮ ಸಾನ್ವಿ ಪಾತ್ರದ ಮೂಲಕ ಪಡ್ಡೆ ಹುಡುಗರ ಮನಸ್ಸನ್ನು ಕಾಡಿದಲ್ಲದೆ, ಕರ್ನಾಟಕದ ಮನೆ ಮಾತಾಗಿದ್ದರು.

ಹುಟ್ಟಿದ್ದು, ಬೆಳದದ್ದು ಹಾಗೂ ಪ್ರಾಥಮಿಕ ಶಿಕ್ಷಣ ಕೊಡಗಿನಲ್ಲಿ, ಪಿ ಯು ಓದಿದ್ದು ಮೈಸೂರಿನಲ್ಲಿ, ಕೊನೆಗೆ ಬೆಂಗಳೂರಿನಲ್ಲಿ ಮ್.ಸ್ ರಾಮಯ್ಯ ಕಾಲೇಜು ಆಫ್ ಆರ್ಟ್ಸ್,ಕಾಮರ್ಸ್ ಅಂಡ್ ಸೈನ್ಸ್ ಕಾಲೇಜಿನಿಂದ ಜರ್ನಲಿಸಂ, ಇಂಗ್ಲಿಷ್ ಲಿಟರೇಚರ್ ಹಾಗೂ ಸೈಕಾಲಜಿ  ವಿಷಯಗಳಲ್ಲಿ ಪದವಿ ಪಡೆದುಕೊಂಡರು.

Rashmika

೨೦೧೪ ರಲ್ಲಿ ಮಾಡೆಲ್ಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದ ಇವರು, “ಕ್ಲೀನ್ ಅಂಡ್ ಕ್ಲಿಯರ್” ಫೇಸ್ ಆ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಅದೇ ಬ್ರಾಂಡ್ ನ ಬ್ರಾಂಡ್ ಅಂಬಾಸೆಡರ್ ಆದರು. ಕಿರಿಕ್ ಪಾರ್ಟಿ ಅಲ್ಲಿ ಚಾನ್ಸ್ ಪಡೆದಿದ್ದು ಕೂಡ ಈ “ಕ್ಲೀನ್ ಅಂಡ್ ಕ್ಲಿಯರ್ ” ಫೇಸ್ ನ ಫೋಟೋ ಗಳ್ಳನ್ನು ನೋಡಿಯೇ. ೨೦೧೫ ರಲ್ಲಿ ಟಿವಿಸಿ ಇನ್ ಲ್ಯಾಮೊದೆ ಬೆಂಗಳೂರು ಟಾಪ್ ಮಾಡೆಲ್ ಪ್ರಶಸ್ತಿಯನ್ನು ಗೆದ್ದರು.

Rashmika-Mandanna

ಇನ್ನು ಹೇಳಬೇಕ?, ಕಿರಿಕ್ ಪಾರ್ಟಿ ಚಿತ್ರದಲ್ಲಿ ಚಾನ್ಸ್ ಸಿಕ್ಕಿದ್ದೇ ತಡ, ಹಿಂತಿರುಗಿ ನೋಡಲೇ ಇಲ್ಲ. ಫಿಲ್ಮ್ ರಿಲೀಸ್ ನಂತರ ಕನ್ನಡದ  ಟಾಪ್ ಹೀರೋ ಗಳ ಜೊತೆ ನಟಿಸಲು ಅವಕಾಶಗಳ ಮೇಲೆ ಅವಕಾಶಗಳು ಸಿಕ್ಕಿದ್ದವು ಕೆಲವೊಂದನ್ನು ಡೇಟ್ ಸಮಸ್ಯೆಯಿಂದಾಗಿ ದೂರ ಮಾಡಿದ್ದು ಉಂಟು. ಇಷ್ಟೇ ಅಲ್ಲ ತೆಲುಗಿನ ಅಲ್ಲು ಅರ್ಜುನ್ ಜೊತೆ ಕೂಡ ಚಾನ್ಸ್ ಸಿಕ್ಕಿತ್ತು ಎಂದು ಕೆಲವೊಂದು ಸುದ್ದಿ ಗಳು ಓಡಾಡಿದ್ದುಂಟು. ತೆಲುಗಿನ “ಚಲೋ” ಫಿಲಂ ನಲ್ಲಿ ಅವಕಾಶ ಪಡೆದ ಈ ಚೆಲುವೆಗೆ ತೆಲುಗಿನಲ್ಲಿ ಬಹಳ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಕೇವಲ ಕೆಲವು ಚಿತ್ರ ಗಳಲ್ಲಿಯೇ ಬಹು ದೊಡ್ಡ ಹೆಸರು ಮಾಡಿದ್ದರೆ ಈ ಚೆಂದುಳ್ಳಿ ಚೆಲುವೆ.

Complete List of Film as per 1-01-2018:

               ಕನ್ನಡ – ಕಿರಿಕ್ ಪಾರ್ಟಿ, ಅಂಜನೀಪುತ್ರ, ಚಮಕ್, ಪೊಗರು, ಚಲೋ

Rashmika

ತನ್ನದೇ ಆದ ಛಾಪು ಮೂಡಿಸಿದ ಈ ಕೊಡಗಿನ ಬೆಡಗಿಯ ಬಗ್ಗೆ ಹೇಳಲು ದಿನವೆಲ್ಲ ಸಾಕಾಗುವುದಿಲ್ಲ.

 

Post Author: