“ಭಾರತದಲ್ಲಿ ಅಷ್ಟು ಬಡತನ ವಿದ್ದರೂ ನೀವ್ಯಾಕೆ ಕ್ಷಿಪಣಿಗಳಿಗೆ ಮತ್ತು ಪರಮಾಣು ಬಾಂಬುಗಳಿಗಂತ ಅಷ್ಟು ಹಣ ಖರ್ಚು ಮಾಡ್ತಿರ?” ಅಂತ ಅಮೆರಿಕಾದ ಹುಡುಗನೊಬ್ಬ ಕೇಳಿದಾಗ ಅಬ್ದುಲ್ ಕಲಾಂ ರವರು ಕೊಟ್ಟ ಉತ್ತರವೇನು ಗೊತ್ತಾ..??

ಕಡು ಬಡ ಕುಟುಂಬದಿಂದ ಬಂದ ಹುಡುಗ ಆವುಲ್ ಫಕೀರ್ ಜಲಾಲುದ್ದೀನ್ ಮುಂದೆ ಬೆಳೆದು ನಿಂತು ಅನನ್ಯ ಸಾಧನೆಗಳನ್ನ ಮಾಡಿ ಡಾ|| ಎಪಿಜೆ ಅಬ್ದುಲ್ ಕಲಾಂ ಅಬ್ದುಲ್ ಕಲಾಂ ಎಂದೇ ಪ್ರಸಿದ್ಧರಾದರು.

ದೇಶದ ‘ಮಿಸೈಲ್ ಮ್ಯಾನ್ ‘ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಲಾಂ, ಭಾರತದಲ್ಲಿ ವೈಜ್ಞಾನಿಕ ಕ್ರಾಂತಿಗೆ ನಾಂದಿ ಹಾಡಿದವರು. ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ದೇಶದ ಉನ್ನತಿಗೆ ನಿರಂತರವಾಗಿ ದುಡಿದವರು.

ತನ್ನಲ್ಲಿರುವ ಜ್ಞಾನವನ್ನು ಮುಂದಿನ ಪೀಳಿಗೆಗೆ ನೀಡಬೇಕೆಂಬ ಅದಮ್ಯ ಉತ್ಸಾಹ ಹೊತ್ತು ಅದನ್ನು ಸದಾ ಪಾಲಿಸಿಕೊಂಡು ಬಂದ ಕಲಾಂ ಇಂದಿನ ಯುವಕರಿಗೆ ಆಶಾಕಿರಣವಾಗಿದ್ದಾರೆ.

ಅವರ ಜೀವನದ ಒಂದು ವೃತ್ತಾಂತವನ್ನ ಇಲ್ಲಿ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಕೆ ಇಷ್ಟಪಡ್ತೀನಿ.

ಅಂದು 28 ಸೆಪ್ಟೆಂಬರ್ 2011, ಅಬ್ದುಲ್ ಕಲಾಂ ಅವರು ‘Leadership,Youth and Global Engagement’ ಎಂಬ ವಿಷಯದ ಮೇಲೆ

Harvard ಮತ್ತು MIT ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ್ದರು, ಅಮೇರಿಕಾದಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ವಿವಿಧ ಖಂಡಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಲಾಂ ಅವರ ಭಾಷಣ ಮುಕ್ತಾಯವಾದ ನಂತರ ವಿದ್ಯಾರ್ಥಿಗಳು ತಂಡೋಪತಂಡವಾಗಿ ಕಲಾಂರನ್ನ ಅನೇಕ ಪ್ರಶ್ನೆಗಳನ್ನ ಕೇಳಿದರು.

ಅದರಲೊಬ್ಬ ಅಮೆರಿಕಾದ ವಿದ್ಯಾರ್ಥಿ ಕಲಾಂರಿಗೆ ”ನಿಮ್ಮ ರಾಷ್ಟ್ರದದಲ್ಲಿ ಬಡತನ ನಿವಾರಣೆ, ಮೂಲಭೂತ ಸೌಕರ್ಯಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಅಗತ್ಯವಿರುವಾಗ, ನೀವ್ಯಾಕೆ ಅಷ್ಟೊಂದು ಹಣ ಕ್ಷಿಪಣಿಗಳು ಮತ್ತು ಪರಮಾಣು ಬಾಂಬುಗಳು ತಯಾರಿಕೆಗೆ ಖರ್ಚು ಮಾಡುತ್ತೀರಿ??” ಎಂದು ಕೇಳುತ್ತಾನೆ.

ಅದಕ್ಕೆ ಕಲಾಂರು ಹೇಳುತ್ತಾರೆ,

“ನೀವು ಭಾರತದ 5000 ವರ್ಷಗಳ ಇತಿಹಾಸವನ್ನು ಅಧ್ಯಯನ ಮಾಡಿದರೆ, ಅದರಲ್ಲಿ 600 ವರ್ಷಗಳ ಕಾಲ ಮಾತ್ರ ಭಾರತೀಯರು ಭಾರತವನ್ನು ಆಳ್ವಿಕೆ ಮಾಡಿದ್ದಾರೆ, ಉಳಿದ ಕಾಲದಲ್ಲಿ, ವಿವಿಧ ದೇಶಗಳಿಂದ ಬಂದ ಅನೇಕ ರಾಜ ಮನೆತನಗಳಿಂದ ನಾವು ಆಕ್ರಮಣಕ್ಕೆ ಒಳಪಟ್ಟಿದ್ದೇವೆ.

ಅವುಗಳ ಪೈಕಿ ಕಡೆಯದಾಗಿ ಬ್ರಿಟಿಷರು ಭಾರತವನ್ನ 300 ವರ್ಷಗಳ ಕಾಲ ಆಕ್ರಮಿಸಿಕೊಂಡಿದ್ದರು.

90 ವರ್ಷಗಳ ಹೋರಾಟದ ನಂತರ ನಾವು ನಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡೆವು. ಆದ್ದರಿಂದ, ಇತಿಹಾಸವು ನಮಗೆ ಕನಿಷ್ಟ ಸಮರ್ಪಕ ಶಸ್ತ್ರಸಜ್ಜಿತ ಪಡೆಗಳನ್ನು ಹೊಂದಿರಬೇಕೆಂದು ಕಲಿಸಿದೆ, ಇದರಿಂದಾಗಿ ಭಾರತ ತನ್ನ ಹೋರಾಟ ಸಂಘರ್ಷ,ಲಕ್ಷಾಂತರ ಕ್ರಾಂತಿಕಾರಿಗಳ ಬಲಿದಾನದ ಮೂಲಕ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬಹುದು ಮತ್ತು ಸಮೃದ್ಧತೆ ಮತ್ತು ಶಾಂತಿಗೆ ಉಳಿಸಿಕೊಳ್ಳಬಹುದು.

ನಮ್ಮ ಭಾರತ ಅನೇಕ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರಗಳಿಂದ ಸುತ್ತುವರಿಯಲ್ಪಟ್ಟಾಗ, ನಾವು ನಮ್ಮ ಕನಿಷ್ಠ ಶಕ್ತಿಯನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇದೆ.

ಈ ಸಿದ್ಧಾಂತವು ಒಂದೇ ರೀತಿಯ ಭೌಗೋಳಿಕ ಪರಿಸ್ಥಿತಿ ಹೊಂದಿದ ಎಲ್ಲಾ ರಾಷ್ಟ್ರಗಳಿಗೆ ಅನ್ವಯಿಸುತ್ತದೆ.”

ಹೌದು, ಒಂದು ದೇಶದ ಅಭಿವೃದಿಗೆ ರಕ್ಷಣೆ ಬಹುಮುಖ್ಯ ಪಾತ್ರ ವಹಿಸುತ್ತದೆ, ಮತ್ತು ವಸಹಾತುಶಾಹಿ ದೇಶದಲ್ಲಿ ಬರದಂತೆ ಕಾಪಾಡುತ್ತದೆ.

ವಿಶ್ವದ ದೊಡ್ಡಣ್ಣ ರಾಷ್ತ್ರ ಅಮೇರಿಕಾದಲ್ಲಿ ಈಗಲೂ 12% ಬಡತನ ಇದೆ ಅದರೂ ಪ್ರತಿಶತ 36% ಹಣ ತಮ್ಮ ರಕ್ಷಣೆಗೆ ವ್ಯಯ ಮಾಡುತ್ತಾರೆ,
ಇದರರ್ಥ ರಕ್ಷಣೆಗೆ ಮೊದಲ ಆದ್ಯತೆ ಕೊಡಬೇಕು ಅನ್ನುವುದು.

DRDO, HAL, NAL, BEL ನಂತಹ ರಕ್ಷಣಾ ಸಂಶೋಧನೆ ಕೇಂದ್ರಗಳು ಭಾರತದಲ್ಲಿಇನ್ನು ಹೆಚ್ಚೆಚ್ಚು ಸ್ಥಾಪನೆಯಾಗಬೇಕು ಹಾಗು ದೇಶದ ರಕ್ಷಣೆಗೆ ಸಹಾಯವಾಗಬೇಕು.

ಒಂದು ದೇಶ ಶಾಸ್ತ್ರವನ್ನಷ್ಟೇ ಇಟ್ಟುಕೊಂಡು ತನ್ನನ್ನ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ, ಶಾಸ್ತ್ರವನ್ನ ರಕ್ಷಿಸಲು ಶಸ್ತ್ರದ ಅತ್ಯಗತ್ಯವಿದೆ, ಕ್ಷತ್ರಿಯ ಕುಲದ ಮೂಲ ಪಾಲನೆಯು ಇದೇ ಆಗಿದೆ.

✍ ಪ್ರಭಾಕರ್ ಜವಳಿ

 

 

Comments (0)
Add Comment