ಸಿಯಾಚಿನ್ ನಲ್ಲಿ ಭಾರತೀಯ ಸೈನಿಕರು ಎಂತಹ ಪರಿಸ್ಥಿತಿಯಲ್ಲಿ ತಮ್ಮ ಜೀವ ಪಣಕ್ಕಿಟ್ಟು ನಮ್ಮ ರಕ್ಷಣೆ ಮಾಡುತ್ತಿದ್ದಾರೆ ಗೊತ್ತಾ?

ಸಿಯಾಚಿನ್ ನಲ್ಲಿ ನಮ್ಮ ಸೈನಿಕರು ಎಷ್ಟು ಕಷ್ಟ ಪಟ್ಟ ದೇಶ ರಕ್ಷಣೆ ಮಾಡುತ್ತಿದ್ದಾರೆ ಗೊತ್ತಾ?

ನಾನಿದನ್ನ ಬರೆಯುವಾಗ ಸಮಯ ರಾತ್ರಿ 9 ಗಂಟೆಯಾಗಿತ್ತು, ಚಳಿಗಾಲದ ಸಮಯವಾದ್ದರಿಂದ ಒಂದು ಕಂಬಳಿ ಹೊದ್ದುಕೊಂಡು ಕೂತು ನಮ್ಮ ಸೈನಿಕನ ಸಿಯಾಚಿನ್ ಸ್ಥಿತಿಯ ಬಗ್ಗೆ ಬರೆಯುತ್ತಿದ್ದೆ.

ಸಮಯ ರಾತ್ರಿ 9 ಅನ್ನೋಷ್ಟೊತ್ತಿಗೇ ಭಯಂಕರ ಚಳಿಯಿಂದ ಗಡಗಡ ನಡುಗಲಾರಂಭಿಸಿದೆ, ಆದರೆ ಸಿಯಾಚಿನ್ ಎಂಬ ಪ್ರದೇಶ, ಅಲ್ಲಿನ ಹವಾಮಾನ ಹಾಗು ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಅಲ್ಲಿ ದೇಶ ಕಾಯುತ್ತಿರುವ ನಮ್ಮ ಸೈನಿಕನ ಬಗ್ಗೆ ನೆನೆದ ನಂತರ ನನಗಂಟಿದ್ದ ಕೇವಲ 18 ಡಿಗ್ರಿ ಯಾವ ಲೆಕ್ಕಕ್ಕೂ ಇಲ್ಲ ಅಂತನ್ನಿಸಿ ಬರೆಯೋಕೆ ಶುರು ಮಾಡಿದೆ.

ಸಿಯಾಚಿನ್ ಎಂಬುದು ಭಾರತ ಮತ್ತು ಪಾಕಿಸ್ತಾನ ಗಡಿಪ್ರದೇಶ, ಪಾಕಿಸ್ತಾನಿಗಳು ನಮ್ಮ ದೇಶಕ್ಕೆ ನುಗ್ಗೋಕೆ ಸಾಧ್ಯವಾಗೋ ಒಂದೇ ಒಂದು ಜಾಗ ಅಂದ್ರೆ ಸಿಯಾಚಿನ್. ನಮ್ಮ ಸೈನಿಕರು ಇವತ್ತು ಅಲ್ಲಿ ಕಾವಲು ನಿಂತು ನಮ್ಮನ ಕಾಪಾಡ್ತಿದಾರೆ.

ಆದ್ರೆ ಸಿಯಾಚಿನ್ನಲ್ಲಿ ಕಾವಲು ಕಾಯೋದು ಅಷ್ಟು ಸುಲಭ ಅಲ್ಲ. ಯಾಕೆ ಅಷ್ಟು ಕಷ್ಟಾನಾ?

ಸಿಯಾಚಿನ್ ಪ್ರದೇಶದ ಬಗ್ಗೆ ಕೆಳಗೆ ಉಲ್ಲೇಖಿಸಿರುವ ವಿವರಗಳನ್ನೊಮ್ಮೆ ಓದಿ, ಒಂದು ನಿಮಿಷ ನಿಮ್ಮ ಜೀವ ಬಾಯಿಗೆ ಬಂದಂತಾಗೋದಂತೂ ಸತ್ಯ.

1. ಪ್ರಪಂಚದ ಅತಿ ಎತ್ತರದ, ಭಯಾನಕ ಯುದ್ಧ ಭೂಮಿ ಸಿಯಾಚಿನ್ ಹಿಮಾಲಯ ಪರ್ವತದ ಕಾರಾಕೋರಂ ಸಾಲಿನ ಪೂರ್ವದಲ್ಲಿರೋ ಸಿಯಾಚಿನ್ ಭಾರತ ಮತ್ತು ಪಾಕಿಸ್ತಾನದ ಗಡಿ(ಲೈನ್ ಆಫ್ ಕಂಟ್ರೋಲ್).

Indian Army

2. ಸಿಯಾಚಿನ್ ಪ್ರದೇಶ ಸಮುದ್ರಮಟ್ಟದಿಂದ ಸುಮಾರು 5400 ಮೀಟರ್ ನಷ್ಟು ಎತ್ತರದಲ್ಲಿದೆ. ಲಡಾಕ್ ಮತ್ತೆ ಕಾರ್ಗಿಲ್ ಗಳಿಗಿಂತ ಎರಡರಷ್ಟು ಎತ್ತರ ಇದರದ್ದು. ಅಷ್ಟು ಎತ್ತರ ಜಾಗದ ಪರಿಸರಕ್ಕೆ ನಮ ದೇಹ ಅಡ್ಜಸ್ಟ್ ಆಗೋದೆಂದರೆ ಮನುಷ್ಯನ ಜೀವಕ್ಕೆ ಕುತ್ತೇ ಸರಿ.

3. ಸಿಯಾಚಿನ್ ನಲ್ಲಿ ವರ್ಷಕ್ಕೆ ಸುಮಾರು 36 ಅಡಿ(ft) ಹಿಮಪಾತ ಆಗುತ್ತೆ.ಪ್ರಪಂಚದ ಅತಿದೊಡ್ಡ ಹಿಮಪಾತದ ಜಾಗ ಇದು.

Indain Army

4. ಇಲ್ಲಿ ಉಸಿರಾಡೋಕೆ ಸಿಗೋದು ಬರೀ 10% ಆಮ್ಲಜನಕ

5. ಈ ಜಾಗದಲ್ಲಿ ನಮ್ಮ. ಸೈನಿಕರು -50 ರಿಂದ -60 ಡಿಗ್ರಿ ಚಳೀಲಿ ನಿಂತು ನಮ್ಮ ದೇಶವನ್ನ ಪಾಪಿ ಪಾಕಿಸ್ತಾನದಿಂದ ಕಾಪಾಡುತ್ತಾರೆ.

ಇಂಥ ಭಯಾನಕ ಚಳೀಲಿ ನಮ್ಮ ಸೈನಿಕರು ವರ್ಷಪೂರ್ತಿ ನಿಲ್ತಾರೆ. ಬೆಟ್ಟ ಹತ್ತೋರು ವಾತಾವರಣ ಚೆನ್ನಾಗಿದ್ರೆ ಮಾತ್ರ ಹತ್ತೋಕ್ಕೆ ಹೋಗೋದು. ಅದನ್ನ ಬಿಟ್ಟರೆ ನಮ್ಮ ಸೈನಿಕರೇ ಅಲ್ಲಿ ಯಾವಾಗ್ಲೂ ಇರೋದು.

6. ಎಷ್ಟೋ ಜನ ಸೈನಿಕರು ಸಿಯಾಚಿನ್ ನ ಚಳಿ ತಾಳದೆ ಪ್ರಾಣ ತ್ಯಜಿಸಿದ ಉದಾಹರಣೆಗಳೂ ಇವೆ. -50 ರಿಂದ -60 ಡಿಗ್ರಿ ಚಳಿ ಇರುವ ಕಾರಣ ಬರಿಗೈಯಲ್ಲಿ ಕಬ್ಬಿಣ ಮುಟ್ಟಿದ್ರೆ 15 ಸೆಕೆಂಡೊಳಗಡೆ ಕೈಬೆರಳು ಕಟ್ಟಾಗಿಬಿಡತ್ತೆ. ಅಪ್ಪಿತಪ್ಪಿ ಯಾಮಾರಿ ಗನ್ನಿನ ಟ್ರಿಗರನ್ನ ಬರಿಗಯ್ಯಲ್ಲಿ ಮುಟ್ಟಿದ್ರೆ ಕೈಬೆರಳನ್ನೇ ಕಳೆದುಕೊಳ್ಳಬೇಕಾಗುತ್ತೆ. ಆ ಚಳಿಯನ್ನ ನಮಗಾಗಲಿ, ನಮ್ಮ ದೇಹಕ್ಕಾಗಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

Indian Army
7. ಸಿಯಾಚಿನ್ ನಲ್ಲಿ ಗನ್ ಗಳನ್ನ ತಕ್ಷಣ ಕುದಿಯೋ ನೀರಲ್ಲಿ ತೊಳೆಯಬೇಕು ಇಲ್ಲ ಅಂದ್ರೆ ಗನ್ ಹಾಳಾಗಿಬಿಡತ್ತೆ. 

8. 1984 ರ ಮುಂಚೆ ಇಲ್ಲಿ ಯಾವ ಸೈನಿಕರು ಇರಲಿಲ್ಲ. ಈಗಲೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜಾಗದಲ್ಲಿ ಸೈನಿಕರನ್ನ deploy ಮಾಡಿ ಈ ಸಿಯಾಚಿನ್ ಪ್ರದೇಶದ ಪಹರೆಯಿಂದ ಮುಕ್ತಗೊಳಿಸೋಣ ಅಂತ ಎರಡೂ ದೇಶಗಳು ಸುಮಾರ್ ಸಲ ಪ್ರಯತ್ನ ಪಟ್ಟರು. ಆದರೆ ಪಾಕಿಸ್ತಾನದ ಸೈನಿಕರು, ಭಯೋತ್ಪಾದಕರ ಒಳನುಸುಳುವಿಕೆಯಿಂದ ಈ ಮಾತುಕತೆ ಫಲಿಸಲಿಲ್ಲ.

9. ಸಿಯಾಚಿನ್ನಲ್ಲಿ 80% ಸಮಯ ಸೈನಿಕರನ್ನ ತಯಾರಿ ಮಾಡೋಕ್ಕೆ ಬೇಕಾಗುತ್ತೆ.

siachen

10. ಸಿಯಾಚಿನ್ ನಲ್ಲಿ ತಾಜಾ ಆಹಾರ, ರುಚಿಕರ ಆಹಾರ ನಮ್ಮ ಸೈನಿಕರಿಗೆ ಬರಿ ಕನಸು. ನಮ್ಮ ಸೈನಿಕರಿಗೆ ಸೇಬು, ಕಿತ್ತಳೆಹಣ್ಣು ಮಾತ್ರ ಅಲ್ಲಿ ಸಿಗೋದು. ಆದರೆ ಇವುಗಳನ್ನೂ ತಿನ್ನೋಕ್ಕೆ ಆಗಲ್ಲ. ಯಾಕಂದ್ರೆ ಆ ಚಳಿಗೆ ಈ ಹಣ್ಣುಗಳು ಕ್ರಿಕೆಟ್ ಬಾಲ್ ನಷ್ಟು ಗಟ್ಟಿ ಆಗ್ಬಿಡುತ್ವೆ.

11. ಇಲ್ಲಿಗೆ ಊಟ ತಲುಪಿಸೋದಕ್ಕೆ ಸೇನಾ ಹೆಲಿಕ್ಯಾಪ್ಟರ್ರಿಗೆ ಇರೋ ಸಮಯ ಕೇವಲ 20 ರಿಂದ30 ಸೆಕೆಂಡುಗಳು ಮಾತ್ರ, ಅಷ್ಟರೊಳಗೆ ಊಟ ತಲುಪಿಸಬೇಕು ಇಲ್ಲವಾದರೆ ಹೆಲಿಕಾಪ್ಟರ್ ಕೂಡ ಅಲ್ಲಿನ ಚಳಿಗೆ ಕೆಲಸ ಮಾಡೋದನ್ನ ನಿಲ್ಲಿಸಿಬಿಡತ್ತೆ. 21000 ಅಡಿ ಎತ್ತರಕ್ಕೆ ಹೋಗಿ ಊಟ ತಲುಪಿಸೋದು ಸಿಕ್ಕಾಪಟ್ಟೆ ಕಷ್ಟ.

“ಚೀತಾ” ಅನ್ನೋ ಹೆಲಿಕ್ಯಾಪ್ಟರ್ ನ್ನ ಇದಕ್ಕೆ ಅಂತಾನೇ ತಯಾರು ಮಾಡಿದ್ದಾರೆ. ವಾತಾವರಣ ಚೆನ್ನಾಗಿಲ್ಲ ಅಂದ್ರೆ ಅರ್ಧ ಊಟ ಹಿಮದ ಪಾಲಾಗಿರುತ್ತೆ.

12. ಸಿಯಾಚಿನ್ ನಲ್ಲಿರೋ ಸೈನಿಕರಿಗೆ ಸ್ನಾನ ತಿಂಗಳಿಗೆ ಒಂದೇ ಸಾರಿ ಡಿ.ರ್.ಡಿ.ಓ ಕಟ್ಟಿರೋ ಸ್ಪೆಷಲ್ ಬಚ್ಚಲುಮನೆಲ್ಲಿ ಇವರು ತಿಂಗಳಿಗೆ ಒಂದು ಬಾರಿ ಸ್ನಾನ ಮಾಡ್ತಾರೆ.

13. ಇಲ್ಲಿರೋ ಸೈನಿಕರಿಗೆ ಸಾಕಷ್ಟು ಅರೋಗ್ಯ ತೊಂದರೆಗಳು ಆಗುತ್ತೆ. ಸರಿಯಾಗಿ ನಿದ್ದೆ ಬರೋಲ್ಲ, ಸಿಕ್ಕಾಪಟ್ಟೆ ತೂಕ ಕಡಿಮೆ ಆಗೋದು, ಮಾತಾಡಕ್ಕಾಗಲ್ಲ, ಮರೆವು.ಈ ಸಮಸ್ಯೆಗಳು ಅಲ್ಲಿ ಕಾರ್ಯನಿರ್ವಹಿಸುವ ಮುಕ್ಕಾಲುಭಾಗ ಸೈನಿಕರಿಗೆ ಕಾಡುತ್ತವೆ.

14. ಕಳೆದ 30 ವರ್ಷದಲ್ಲಿ ನಾವು 846 ಸೈನಿಕರನ್ನ ಸಿಯಾಚಿನ್ ನಲ್ಲಿರುವ ಅಲ್ಲಿನ ಪ್ರತಿಕೂಲ ಪರಿಸ್ಥಿತಿಯಿಂದಾಗಿ ಕಳಕೊಂಡಿದ್ದೇವೆ.

Indian Army

ಇಲ್ಲಿ ಕಾವಲು ಕಾಯೋದಕ್ಕಿಂತ ಯುದ್ಧದಲ್ಲಿ ಗುದ್ದಾಡೋದು ಸುಲಭ. ಅದಕ್ಕೇ ಸಿಯಾಚಿನ್ ನಲ್ಲಿ ಕಾರ್ಯನಿರ್ವಹಿಸುವಾಗ ಸಂಭವಿಸುವ ಸೈನಿಕರ ಸಾವುಗಳನ್ನ “ವೀರಮರಣ” ಅಂತ ಗೌರವಿಸಲಾಗುತ್ತದೆ.

ಇಷ್ಟೆಲ್ಲಾ ಕಷ್ಟ ಇದ್ರೂ, ಭಯ ಬೀಳಿಸೋ ಚಳಿ ಇದ್ರೂ, ದೇಶಕ್ಕಾಗಿ, ನಮಗಾಗಿ, ಛಲಬಿಡದೆ ನಮ್ಮನ್ನ ಕಾಯುತ್ತಿರೋರು ನಮ್ಮ ಹೆಮ್ಮೆಯ, ಕೆಚ್ಚೆದೆಯ ಭಾರತೀಯ ಸೈನಿಕರು.

ನಾವು ಪ್ರತಿರಾತ್ರಿ ನೆಮ್ಮದಿಯಿಂದ ರಗ್ ಹೊದ್ದುಕೊಂಡು ಮಲಗ್ತಿದೀವಿ ಅಂದ್ರೆ ಅದಕ್ಕೆ ಕಾರಣನೇ ನಮ್ಮ ಭಾರತೀಯ ಸೇನೆ ಹಾಗು ನಮ್ಮ ಸೈನಿಕರು.

ನಮ್ಮ ದೇಶದ ಜನರಿಗೆ ನಮ್ಮ ಸೈನಿಕರ ಇಂತಹ ಪರಿಸ್ಥಿತಿಯ ಬಗ್ಗೆ ಇನ್ನೂ ತಿಳಿದಿಲ್ಲ, ಭಾರತೀಯ ಸೈನಿಕರೆಂದರೆ ಎಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಿ ನಮ್ಮನ್ನ ಕಾಪಾಡುತ್ತಾರೆಂದು ನಿಮಗೂ ಗರ್ವವಾದರೆ ಈ ಮಾಹಿತಿಯನ್ನ ನೀವೂ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳಿ.ಭಾರತೀಯ ಸೈನಿಕ ಧೀರರಿಗೆ ನಮ್ಮದೊಂದು ಸೆಲ್ಯೂಟ್!!!