ಚಾಹಲ್ ರವರನ್ನು ಮಹಡಿಯ ಮೇಲೆ ನೇತುಹಾಕಿದ್ದ ಕ್ರಿಕೆಟಿಗನ ಕುರಿತು ಪ್ರತಿಕ್ರಿಯೆ ನೀಡಿದ ರವಿಶಾಸ್ತ್ರಿ, ಚಾಹಲ್ ಬೆಂಬಲಕ್ಕೆ ನಿಂತು ಹೇಳಿದ್ದೇನು ಗೊತ್ತೇ??

ಚಾಹಲ್ ರವರನ್ನು ಮಹಡಿಯ ಮೇಲೆ ನೇತುಹಾಕಿದ್ದ ಕ್ರಿಕೆಟಿಗನ ಕುರಿತು ಪ್ರತಿಕ್ರಿಯೆ ನೀಡಿದ ರವಿಶಾಸ್ತ್ರಿ, ಚಾಹಲ್ ಬೆಂಬಲಕ್ಕೆ ನಿಂತು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಐಪಿಎಲ್ ಆರಂಭವಾದ ಮೇಲೆ ಐಪಿಎಲ್ ಪಂದ್ಯ ಗಳಿಗಿಂತ ಹೆಚ್ಚಾಗಿ ಚಹಾಲ್ ರವರು ಇತ್ತೀಚಿಗಷ್ಟೇ ನೀಡಿರುವಂತಹ ಹೇಳಿಕೆ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಕುರಿತಂತೆ ಹಲವಾರು ಚರ್ಚೆಗಳು ಹಾಗೂ ಪರ-ವಿರೋಧ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯಜುವೇಂದ್ರ ಚಹಾಲ್ ರವರು ಐಪಿಎಲ್ ನಲ್ಲಿ ಆಡುವ ಮೂಲಕ ಪ್ರವರ್ಧಮಾನಕ್ಕೆ ಬಂದವರು. ಮೊದಲಿಗೆ ಮುಂಬೈ ಇಂಡಿಯನ್ಸ್ ನಲ್ಲಿ ಆಡುವ ಇವರು ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕ ಅದ್ಭುತವಾದ ಬೌಲಿಂಗ್ ಪ್ರದರ್ಶನವನ್ನು ಮಾಡಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಕೂಡ ಸ್ಥಾನವನ್ನು ಸಂಪಾದಿಸಿಕೊಳ್ಳುತ್ತಾರೆ.

ಆದರೆ ಹಲವಾರು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ಯಜುವೇಂದ್ರ ಚಹಾಲ್ ರವರು ಈ ವರ್ಷ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಯ್ಕೆಯಾಗುತ್ತಾರೆ. ಈ ಸಂದರ್ಭದಲ್ಲಿ ಅಂದರೆ ಇದೇ ಏಪ್ರಿಲ್ 7ರಂದು ಅವರು ಆರ್ ಅಶ್ವಿನ್ ರವರ ಜೊತೆಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಆಶ್ಚರ್ಯಕರ ಸುದ್ದಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಇದುವರೆಗೂ ಇಡಿಯ ಐಪಿಎಲ್ ಇತಿಹಾಸದಲ್ಲಿ ಇದರ ಕುರಿತಂತೆ ಯಜುವೇಂದ್ರ ಚಹಾಲ್ ಸೇರಿದಂತೆ ಯಾವ ಕ್ರಿಕೆಟಿಗರು ಕೂಡ ಬಾಯಿಬಿಟ್ಟಿರಲಿಲ್ಲ. ಹಾಗಿದ್ದರೆ ಅದು ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದಾಗ ಯಜುವೇಂದ್ರ ಚಹಾಲ್ ರವರು ಅನುಭವಿಸಿದ ಕಹಿ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದ ನಂತರ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಗೆಟ್ ಟುಗೆದರ್ ಆಗಿದ್ದರು. ಈ ಸಂದರ್ಭದಲ್ಲಿ ಒಬ್ಬ ಖ್ಯಾತ ಕ್ರಿಕೆಟಿಗ ಅಂದರೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಮದ್ಯದ ನ’ಶೆಯಲ್ಲಿದ್ದ. ಆತ ಆಗಷ್ಟೇ ಯುವ ಉದಯೋನ್ಮುಖ ಆಟಗಾರನಾಗಿದ್ದ ಯಜುವೇಂದ್ರ ಚಹಲ ರವರನ್ನು ತನ್ನ ಬಳಿ ಕರೆಯುತ್ತಾನೆ. ಕರೆದ ನಂತರ ಚಹಲ್ ರವರನ್ನು 15ನೇ ಫ್ಲೋರ್ ನಿಂದ ಬಾಲ್ಕನಿಯಲ್ಲಿ ನೇತಾಡಿ ಸುತ್ತಾನೆ.

ಈ ವಿಚಾರವನ್ನು ಸ್ವತಃ ಚಹಾಲ್ ರವರೇ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ. ನಂತರ ಕೂಡಲೇ ಇದನ್ನು ನೋಡಿದಂತಹ ಉಳಿದ ಆಟಗಾರರು ಬಂದು ಚಹಾಲ್ ರವರನ್ನು ರಕ್ಷಿಸುತ್ತಾರೆ. ನಂತರ ಆ ಸಂದರ್ಭದಲ್ಲಿ ಯಜುವೇಂದ್ರ ಚಹಾಲ್ ರವರು ಮೂರ್ಛೆ ತಪ್ಪಿ ಕೂಡ ಬೀಳುತ್ತಾರೆ. ಇದಾದ ನಂತರ ತಮ್ಮ ಜವಾಬ್ದಾರಿ ತಮ್ಮದೇ ಆಗಿದ್ದು ಜಾಗೃತಿಯಾಗಿ ಇರಬೇಕು ಎನ್ನುವುದಾಗಿ ಕಲಿತುಕೊಂಡೆ ಎಂಬುದಾಗಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಆ ಕ್ರಿಕೆಟಿಗ ಯಾರು ಎನ್ನುವುದನ್ನು ಯಜುವೇಂದ್ರ ಚಹಾಲ್ ರವರು ಬಿಟ್ಟುಕೊಟ್ಟಿಲ್ಲ. ಇನ್ನು ಇದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಟೀಮ್ ಮ್ಯಾನೇಜ್ಮೆಂಟ್ ಕುರಿತಂತೆ ಎಲ್ಲರೂ ಕೂಡ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಖ್ಯಾತನಾಮ ಕ್ರಿಕೆಟಿಗರು ಕೂಡ ಈ ಕುರಿತಂತೆ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಆ ಆಟಗಾರನಿಗೆ ಸರಿಯಾದ ಶಿ’ಕ್ಷೆಯನ್ನು ನೀಡಬೇಕು ಎನ್ನುವುದಾಗಿ ಆಗ್ರಹಿಸಿದ್ದಾರೆ.

ಈ ಕುರಿತಂತೆ ವೀರೇಂದ್ರ ಸೆಹ್ವಾಗ್ ಹಾಗೂ ಮಾಜಿ ಆಟಗಾರ ಹಾಗೂ ಕೋಚ್ ಆಗಿರುವ ರವಿಶಾಸ್ತ್ರಿ ಅವರು ಕೂಡ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಅದರಲ್ಲೂ ವಿಶೇಷವಾಗಿ ರವಿಶಾಸ್ತ್ರಿ ರವರು ಆ ಆಟಗಾರನಿಗೆ ಸರಿಯಾದ ಶಾಸ್ತಿ ಯನ್ನು ಮಾಡಬೇಕು, ಮಾತ್ರವಲ್ಲದೆ ಆಟಗಾರನು ಇನ್ನೊಮ್ಮೆ ಕ್ರಿಕೆಟ್ ಮೈದಾನಕ್ಕೆ ಕಾಲಿಡಬಾರದು ಅಂತಹ ಶಿ’ಕ್ಷೆಯನ್ನು ನೀಡಬೇಕು ಆತನಿಗೆ ಅಜೀವ ನಿಷೇಧವನ್ನು ಹೇರಬೇಕು ಎನ್ನುವುದಾಗಿ ಹೇಳಿದ್ದಾರೆ. ಖಂಡಿತವಾಗಿ ಇಂತಹ ದುರ್ವರ್ತನೆಯನ್ನು ತೋರಿರುವ ಆ ಆಟಗಾರನಿಗೆ ಜೀವನದಲ್ಲಿ ಇನ್ನೊಮ್ಮೆ ಇಂತಹ ದುಸ್ಸಾಹಸವನ್ನು ಮಾಡುವಂತಹ ಧೈರ್ಯವನ್ನು ಕೂಡ ಮಾಡಬಾರದು ಅಂತಹ ಕ್ರಮವನ್ನು ಕೈಗೊಳ್ಳಬೇಕು. ಇನ್ನು ಆ ಆಟಗಾರ ಯಾರಿರಬಹುದು ಎಂಬುದರ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.