ಜೈ ಶ್ರೀರಾಮ್: ಹನುಮಾನ್ ಜನ್ಮ ದಿವಸ್ ಪ್ರಯುಕ್ತ ಲೋಗೋ ಬಿಡುಗಡೆಗೊಳಿಸಿದ ರಾಮಜನ್ಮಭೂಮಿ ಟ್ರಸ್ಟ್ ! ಹೇಗಿದೆ ಗೊತ್ತಾ ಲೋಗೋ??

ಜೈ ಶ್ರೀರಾಮ್: ಹನುಮಾನ್ ಜನ್ಮ ದಿವಸ್ ಪ್ರಯುಕ್ತ ಲೋಗೋ ಬಿಡುಗಡೆಗೊಳಿಸಿದ ರಾಮಜನ್ಮಭೂಮಿ ಟ್ರಸ್ಟ್ ! ಹೇಗಿದೆ ಗೊತ್ತಾ ಲೋಗೋ??

ನಮಸ್ಕಾರ ಸ್ನೇಹಿತರೇ ಇಂದು ನಿಮಗೆಲ್ಲರಿಗೂ ತಿಳಿದಿರುವಂತೆ ಹನುಮಾನ್ ಜನ್ಮ ದಿವಸ್. ಅಂದುಕೊಂಡಂತೆ ಎಲ್ಲಾ ನಡೆದಿದ್ದರೆ ಇಷ್ಟೊತ್ತಿಗಾಗಲೇ ಪುಣ್ಯಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಬೇಕಿತ್ತು.

ಆದರೆ ಕೊರೊನ ಲಾಕ್ಡೌನ್ ಇರುವ ಕಾರಣ ಶಂಕು ಪ್ರತಿಸ್ಥಾಪನೆ ಕೆಲಸ ಮುಂದಕ್ಕೆ ಹೋಗಿದೆ. ಆದರೂ ಕೂಡ ಇಂದು ಅಯೋಧ್ಯೆಯಲ್ಲಿ ಯಾವುದೇ ಅಭಿಮಾನಿಗಳು ಇಲ್ಲದೇ ಹನುಮಾನ್ ಜನ್ಮ ದಿವಸ್ ಪ್ರಯುಕ್ತ ರಾಮ ಮಂದಿರ ನಿರ್ಮಾಣದ ಟ್ರಸ್ಟ್ ಆದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತನ್ನ ಅಧಿಕೃತ ಲಾಂಛನ ಅಥವಾ ಲೋಗೋ ಅನ್ನು ಬಿಡುಗಡೆಗೊಳಿಸಿದೆ. ಈ ಲೋಗೋವನ್ನು ಈ ಕೆಳಗಡೆ ಲಗತ್ತಿಸಲಾಗಿದೆ, ಒಮ್ಮೆ ನೋಡಿ.

ಈ ಲೋಗೋ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಇದರಲ್ಲಿ ಶ್ರೀ ರಾಮಚಂದ್ರ ಪ್ರಭು ಮಧ್ಯದಲ್ಲಿ ಇದ್ದರೆ ಸುತ್ತಲೂ ಕೆಂಪು, ಹಳದಿ ಹಾಗೂ ಕೇಸರಿ ಬಣ್ಣಗಳಿಂದ ತಯಾರು ಮಾಡಲಾಗಿದೆ. ಲಾಂಛನದಲ್ಲಿ ರಾಮ ಬಂಟ ಹನುಮನಿಗೆ ಕೂಡ ಸ್ಥಾನ ನೀಡಿದ್ದು ಶ್ರೀ ರಾಮಚಂದ್ರ ಪ್ರಭುಗೆ ನಮಸ್ಕರಿಸುವಂತೆ ಹನುಮಂತನ ಫೋಟೋ ಡಿಸೈನ್ ಮಾಡಲಾಗಿದೆ. ಕೊರೊನ ಲಾಕ್ಡೌನ್ ಇರುವ ಕಾರಣ ಅಭಿಮಾನಿಗಳು ಇಲ್ಲದೆ ಬಿಡುಗಡೆ ಮಾಡಿ, ಮಾಧ್ಯಮಗಳಿಗೆ ತದನಂತರ ಸುದ್ದಿ ರವಾನೆ ಮಾಡಲಾಗಿದೆ.