ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಏಳು ಬ್ಯಾಟ್ಸ್ಮನ್ ಗಳನ್ನು ಘೋಷಿಸಿದ ಮೈಕಲ್ ಕ್ಲಾರ್ಕ್ ! ಇಬ್ಬರು ಭಾರತೀಯರು ಸೇರಿದಂತೆ ಪಟ್ಟಿಯಲ್ಲಿರುವ ಆಟಗಾರರು ಯಾರ್ಯಾರು ಗೊತ್ತಾ?

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಏಳು ಬ್ಯಾಟ್ಸ್ಮನ್ ಗಳನ್ನು ಘೋಷಿಸಿದ ಮೈಕಲ್ ಕ್ಲಾರ್ಕ್ ! ಇಬ್ಬರು ಭಾರತೀಯರು ಸೇರಿದಂತೆ ಪಟ್ಟಿಯಲ್ಲಿರುವ ಆಟಗಾರರು ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಆಸ್ಟ್ರೇಲಿಯ ತಂಡದ ಪ್ರಮುಖ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿದ್ದ ಮೈಕಲ್ ಕ್ಲಾರ್ಕ್ ರವರು ಇದೀಗ ವಿಶ್ವದ ಶ್ರೇಷ್ಠ 7 ಬ್ಯಾಟ್ಸ್ಮನ್ ಗಳನ್ನು ಘೋಷಣೆ ಮಾಡಿದ್ದಾರೆ.

ಈ ಪಟ್ಟಿಯನ್ನು ಆಯ್ಕೆ ಮಾಡಿರುವ ಬಗ್ಗೆ ತಿಳಿಸಿರುವ ಮೈಕಲ್ ಕ್ಲಾರ್ಕ್ ಅವರು ನಾನು ಕೆಲವರೊಂದಿಗೆ ಆಟವಾಡಿದ್ದೇನೆ. ಇನ್ನೂ ಕೆಲವರ ಜೊತೆ ಆಟವಾಡಿಲ್ಲ, ಆದರೆ ವಿಶ್ವವೇ ಕಂಡ ಸಾರ್ವಕಾಲಿಕ ಶ್ರೇಷ್ಠ ಏಳು ಬ್ಯಾಟ್ಸ್ಮನ್ಗಳು ಇವರಾಗಿದ್ದಾರೆ, ಈ ಆಯ್ಕೆ ನನ್ನ ವೈಯಕ್ತಿಕ ಎಂದು ಹೇಳಿ ಇಬ್ಬರು ಭಾರತೀಯರು, ಇಬ್ಬರು ಸೌತ್ ಆಫ್ರಿಕನ್ ಕ್ರಿಕೆಟರ್, ಒಬ್ಬರು ಶ್ರೀಲಂಕಾ, ಒಬ್ಬರು ಆಸ್ಟ್ರೇಲಿಯ ಹಾಗೂ ಒಬ್ಬರು ವೆಸ್ಟ್ ಇಂಡೀಸ್ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಮೈಕಲ್ ಕ್ಲಾರ್ಕ್ ರವರ ಪಟ್ಟಿ ಈ ಕೆಳಗಿನಂತಿದ್ದು, ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಮೊದಲಿಗೆ ಕ್ರಿಕೆಟ್ ದಂತಕಥೆ ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿರುವ ಮೈಕಲ್ ಕ್ಲಾರ್ಕ್ ಅವರು, ಎರಡನೆಯದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಅವರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಆಟಗಾರನಾಗಿ ಕಿಂಗ್ ಕೊಹ್ಲಿ ರವರನ್ನು ಆಯ್ಕೆ ಮಾಡಿ, ತದ ನಂತರದ ಸ್ಥಾನದಲ್ಲಿ ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನುಳಿದಂತೆ ಮತ್ತೊಬ್ಬ ಸೌತ್ ಆಫ್ರಿಕಾ ಕ್ರಿಕೆಟಿಗ ವಿಶ್ವದ ಅತ್ಯುತ್ತಮ ಆಲ್ರೌಂಡರ್ ಎಂದೇ ಖ್ಯಾತಿ ಪಡೆದುಕೊಂಡಿದ್ದ ಜಾಕ್ ಕಾಲಿಸ್ ಅವರು ಆಯ್ಕೆಯಾಗಿದ್ದರೇ, ತದನಂತರದ ಸ್ಥಾನದಲ್ಲಿ ಆಸ್ಟ್ರೇಲಿಯ ತಂಡದ ಬಲಾಡ್ಯ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ. ಕೊನೆಯದಾಗಿ ಶ್ರೀಲಂಕಾ ಕ್ರಿಕೆಟ್ ಆಟಗಾರ ಸಂಗಕ್ಕರರನ್ನು ಆಯ್ಕೆ ಮಾಡಿ, ಇದು ನನ್ನ ಪ್ರಕಾರ ಜಗತ್ತು ಕಂಡ ವಿಶ್ವಶ್ರೇಷ್ಠ 7 ಬ್ಯಾಟ್ಸ್ಮನ್ಗಳ ಪಟ್ಟಿ ಎಂದಿದ್ದಾರೆ.