ಮಹತ್ವದ ಜವಾಬ್ದಾರಿ ಹೊತ್ತುಕೊಂಡು ಮತ್ತೊಮ್ಮೆ ಕೊಲ್ಕತ್ತಾ ಜನರ ಕೈಹಿಡಿದ ಸೌರವ್ ಗಂಗೂಲಿ !

ಮಹತ್ವದ ಜವಾಬ್ದಾರಿ ಹೊತ್ತುಕೊಂಡು ಮತ್ತೊಮ್ಮೆ ಕೊಲ್ಕತ್ತಾ ಜನರ ಕೈಹಿಡಿದ ಸೌರವ್ ಗಂಗೂಲಿ !

ನಮಸ್ಕಾರ ಸ್ನೇಹಿತರೇ, ಪಕ್ಷಿಮ ಬಂಗಾಳದ ಜನರು ಸೌರವ್ ಗಂಗೂಲಿಯವರನ್ನು ಯಾವ ರೀತಿ ಗೌರವಿಸುತ್ತಾರೆ ಎಂಬುದರ ಬಗ್ಗೆ ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ. ಕ್ರಿಕೆಟ್ ಲೋಕದಲ್ಲಿ ಅದ್ವಿತೀಯ ಸಾಧನೆಯ ಮೂಲಕ ಕೊಲ್ಕತ್ತಾ ಜನರಿಗೆ ಹತ್ತಿರವಾದ ಗಂಗೂಲಿ ಅವರು ಸದಾ ಕೊಲ್ಕತ್ತಾ ಜನತೆಯ ಜೊತೆಯಲ್ಲಿ ನಿಲ್ಲುತ್ತಾರೆ.

ಅದೇ ರೀತಿ ಜನರು ಕೂಡ ಸೌರವ್ ಗಂಗೂಲಿ ರವರನ್ನು ಬಹಳ ಗೌರವದಿಂದ ಕಾಣುತ್ತಾರೆ, ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಕೆಲವು ವರ್ಷಗಳ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ತಂಡದಿಂದ ಸೌರವ್ ಗಂಗೂಲಿ ರವರನ್ನು ಕೈಬಿಟ್ಟಾಗ ಕೊಲ್ಕತ್ತಾದಲ್ಲಿ ನಡೆದ ಐಪಿಎಲ್ ಪಂದ್ಯಗಳ ಟಿಕೆಟ್ ಮಾರಾಟ ನಿಂತುಹೋಗಿತ್ತು. ಇತರ ತಂಡಗಳ ಅಭಿಮಾನಿಗಳು ಮಾತ್ರ ಕ್ರೀಡಾಂಗಣಕ್ಕೆ ತೆರಳುತ್ತಿದ್ದರು, ಅಲ್ಲಿನ ಕ್ರೀಡಾ ಸಂಸ್ಥೆ ಕೇವಲ ಒಂದು ರೂಗೆ ಒಂದು ಟಿಕೆಟ್ ಮಾರುತ್ತೇವೆ ಎಂದರೂ ಕೂಡ ಕೊಲ್ಕತ್ತಾ ಜನತೆ ತಿರುಗಿ ಕೂಡ ನೋಡಿರಲಿಲ್ಲ. ತದನಂತರ ಸೌರವ್ ಗಂಗೂಲಿ ರವರೇ ಮನವಿ ಮಾಡಿದ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯಗಳಿಗೆ ಜನರು ಕ್ರೀಡಾಂಗಣಕ್ಕೆ ತೆರಳಲು ಆರಂಭಿಸಿದರು.

ಪಕ್ಷಿಮ ಬಂಗಾಳದ ಜನತೆಯ ಜೊತೆ ಇಷ್ಟೆಲ್ಲಾ ಅವಿನಾಭಾವ ಸಂಬಂಧವನ್ನು ಹೊಂದಿರುವ ಸೌರವ್ ಗಂಗೂಲಿರವರು ಲಾಕ್ಡೌನ್ ಆದೇಶ ಹೊರಡಿಸಿದ ತಕ್ಷಣ 50 ಲಕ್ಷ ಮೌಲ್ಯದ ಅಕ್ಕಿ ವಿತರಣೆ ಮಾಡಿದ್ದರು, ಆದರೆ ಇಷ್ಟು ಸಾಲದು ಎಂಬುದನ್ನು ಅರಿತುಕೊಂಡಿರುವ ಸೌರವ್ ಗಂಗೂಲಿ ರವರು ಇದೀಗ ಇಸ್ಕಾನ್ ಸಂಸ್ಥೆಯ ಜೊತೆ ಕೈಜೋಡಿಸಲು ಸಿದ್ದವಾಗಿದ್ದು, ಪ್ರತಿನಿತ್ಯ ಪ್ರತಿ ಹೊತ್ತಿಗೆ ತನ್ನ ಸ್ವಂತ ಹಣದಿಂದ 10,000 ಜನರಿಗೆ ಊಟ ನೀಡಲು ನಿರ್ಧರಿಸಿದ್ದಾರೆ. ಈ ಮೊದಲು ಇಸ್ಕಾನ್ ಸಂಸ್ಥೆಯು ಪಕ್ಷಿಮ ಬಂಗಾಳದಲ್ಲಿ 10,000 ಜನರಿಗೆ ಊಟ ನೀಡುತ್ತಿತ್ತು, ಇದೀಗ ಗಂಗೂಲಿ ರವರು ಕೈ ಜೋಡಿಸಿರುವ ಕಾರಣ ಒಟ್ಟು ಇಪ್ಪತ್ತು ಸಾವಿರ ಜನರಿಗೆ ಊಟ ನೀಡುವುದಾಗಿ ಘೋಷಣೆ ಮಾಡಿದೆ. ಇದು ಸೌರವ್ ಗಂಗೂಲಿ ರವರ ಅತ್ಯುತ್ತಮ ಇನ್ನಿಂಗ್ಸ್ ಎಂದು ಇಸ್ಕಾನ್ ಸಂಸ್ಥೆ ಹಾಡಿಹೊಗಳಿದೆ.