ಭಾರತದ ಅತ್ಯಂತ ಪ್ರತಿಭಾವಂತ ಯುವ ಆಟಗಾರ ಯಾರು ಎಂದು ಕೇಳಿದ ಪ್ರಶ್ನೆಗೆ ಕ್ರಿಕೆಟ್ ದಿಗ್ಗಜ ಟಾಮ್ ಮೂಡಿ ಆಯ್ಕೆ ಮಾಡಿದ ಯುವ ಆಟಗಾರ ಯಾರು ಗೊತ್ತಾ?

ಭಾರತದ ಅತ್ಯಂತ ಪ್ರತಿಭಾವಂತ ಯುವ ಆಟಗಾರ ಯಾರು ಎಂದು ಕೇಳಿದ ಪ್ರಶ್ನೆಗೆ ಕ್ರಿಕೆಟ್ ದಿಗ್ಗಜ ಟಾಮ್ ಮೂಡಿ ಆಯ್ಕೆ ಮಾಡಿದ ಯುವ ಆಟಗಾರ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಮಾಜಿ ಆಸ್ಟ್ರೇಲಿಯಾ ಆಟಗಾರ, ಕೋಚ್ ಹಾಗೂ ಮಾಜಿ ಸನ್ರೈಸರ್ಸ್ ಕ್ರಿಕೆಟ್ ತಂಡದ ತರಬೇತುದಾರ ಟಾಮ್ ಮೂಡಿರವರು ಟ್ವಿಟರ್ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಟ್ವೀಟ್ ಮಾಡಿದರು.

ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಟಾಮ್ ಮೂಡಿ ರವರಿಗೆ ಅಭಿಮಾನಿಗಳಿಂದ ಹಲವಾರು ಪ್ರಶ್ನೆಗಳು ಎದುರಾದವು. ಹೀಗೆ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುವ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಭಾರತದಲ್ಲಿ ಹಲವಾರು ಯುವ ಪ್ರತಿಭೆಗಳು ಇದ್ದಾರೆ, ಆದರೆ ಆ ಎಲ್ಲಾ ಯುವ ಪ್ರತಿಭೆಗಳಲ್ಲಿ ಹೆಚ್ಚು ಭರವಸೆ ನಿಮಗೆ ಯಾರ ಮೇಲಿದೆ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರ ನೀಡಿರುವ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ರವರು ಭಾರತದಲ್ಲಿ ಅನೇಕ ಪ್ರತಿಭಾವಂತ ಯುವಕರು ಇದ್ದಾರೆ, ಅದರಲ್ಲಿ ಶುಭಮ್ ಗಿಲ್ ರವರು ಹೆಚ್ಚು ಭರವಸೆ ಮೂಡಿಸಿದ್ದಾರೆ. 20 ರ ವಯಸ್ಸಿನಲ್ಲಿ ಅವರು ಈಗಾಗಲೇ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ್ದು ನ್ಯೂಜಿಲೆಂಡ್ ತಂಡದ ಟೆಸ್ಟ್ ಸರಣಿಯಲ್ಲಿ ತಂಡದಲ್ಲಿ ಇದ್ದರೂ ಕೂಡ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಖಂಡಿತ ಮುಂದೊಂದು ದಿನ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶುಭಮ್ ಗಿಲ್ ರವರ ಹೆಸರು ಎದ್ದು ಕಾಣುತ್ತದೆ ಎಂಬ ನಂಬಿಕೆ ನನಗಿದೆ ಎಂದು ಉತ್ತರಿಸಿದ್ದಾರೆ.,