ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ ಇಸ್ರೇಲ್ ಪ್ರಧಾನಿ ! ಉಭಯ ನಾಯಕರು ಹೊಸ ಒಪ್ಪಂದ ! ಏನು ಗೊತ್ತಾ?

ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ ಇಸ್ರೇಲ್ ಪ್ರಧಾನಿ ! ಉಭಯ ನಾಯಕರು ಹೊಸ ಒಪ್ಪಂದ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತದ ಪರಮಾಪ್ತ ರಾಷ್ಟ್ರಗಳಲ್ಲಿ ಮೊದಲನೇ ಸಾಲಿನಲ್ಲಿ ನಿಲ್ಲುವ ಇಸ್ರೇಲ್ ದೇಶವು ಸದಾ ಅಂತರಾಷ್ಟ್ರೀಯ ವಿಚಾರಗಳಿಂದ ಹಿಡಿದು ಚಿಕ್ಕ ಚಿಕ್ಕ ರಾಷ್ಟ್ರೀಯ ವಿಚಾರಗಳಲ್ಲಿಯೂ ಭಾರತದ ಪರ ನಿಲ್ಲುತ್ತದೆ.

ಈ ಎರಡು ದೇಶಗಳು ಪ್ರತಿಯೊಂದು ಸಮಯದಲ್ಲಿಯೂ ಒಟ್ಟಾಗಿ ನಿಲ್ಲುವ ಮೂಲಕ ಹಲವಾರು ಸವಾಲುಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಎದುರಿಸಿ ಗೆದ್ದಿವೆ. ರಕ್ಷಣಾ ವ್ಯವಸ್ಥೆ, ಮೂಲಭೂತ ಸೌಕರ್ಯ, ಕೃಷಿ ಹೀಗೆ ಹಲವಾರು ವ್ಯವಸ್ಥೆಗಳಲ್ಲಿ ಪರಸ್ಪರ ಒಪ್ಪಂದಗಳ ಮೂಲಕ ಇಸ್ರೇಲ್ ದೇಶ ಭಾರತದ ಪರಮಾಪ್ತ ರಾಷ್ಟ್ರವಾಗಿದೆ. ಇದೀಗ ಚೀನಾ ವೈರಸ್ ತಡೆಗಟ್ಟಲು ಎರಡು ದೇಶಗಳು ಪರಸ್ಪರ ಹಲವಾರು ಒಪ್ಪಂದಗಳಿಗೆ ಒಪ್ಪಿಕೊಂಡಿವೆ.

ವಿಶೇಷ ಏನು ಗೊತ್ತಾ, ಯಾವುದೇ ಕಡತಗಳಿಗೆ ಸಹಿ ಹಾಕದೇ ನರೇಂದ್ರ ಮೋದಿ ಹಾಗೂ ಇಸ್ರೇಲ್ ದೇಶದ ಪ್ರಧಾನಿ ಬೆಂಜಿಮಿನ್ ನೆತನ್ಯಾಹು ರವರು ದೂರವಾಣಿ ಸಂಭಾಷಣೆಯಲ್ಲಿ ಮಾತನಾಡಿ ಎಲ್ಲ ರೀತಿಯ ವೈದ್ಯಕೀಯ ಉಪಕರಣಗಳು, ಔಷಧಿಗಳು ಸೇರಿದಂತೆ ವೈದ್ಯಕೀಯ ಸೌಲಭ್ಯಗಳು, ತಂತ್ರಜ್ಞಾನ ಹಾಗೂ ಔಷಧಿ ಕಂಡುಹಿಡಿಯುವ ಬಗ್ಗೆ ನಡೆದಿರುವಂತಹ ಎಲ್ಲಾ ರೀತಿಯ ಇನ್ಫರ್ಮೇಶನ್ ಗಳನ್ನು ಹಂಚಿಕೊಳ್ಳಲು ಎರಡು ದೇಶಗಳ ಪ್ರಧಾನಿಗಳು ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆ ನೀಡಿದೆ. ಈ ಮೂಲಕ ಚೀನಾ ವೈರಸ್ ಅನ್ನು ತಡೆಗಟ್ಟಲು ಒಟ್ಟಾಗಿ ಮುಂದುವರೆಯೋಣ ಎಂಬ ಸ್ಪಷ್ಟ ಸಂದೇಶ ಸಾರಿದ್ದಾರೆ. ಈಗಾಗಲೇ ಎರಡು ದೇಶಗಳು ಔಷಧಿ ಕಂಡುಹಿಡಿಯುವಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕಾರಣ ಕೆಲವೇ ದಿನಗಳಲ್ಲಿ ಔಷಧಿ ಸಿದ್ಧಪಡಿಸಿದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ.