ಕೊರೋನಾ ವೈರಸ್ ವಿರುದ್ಧ ತೊಡೆ ತಟ್ಟಲು ಸಿದ್ಧವಾದ ಸ್ವಯಂ ವೈದ್ಯರು ಎಷ್ಟು ಗೊತ್ತಾ? ಮಾನವೀಯತೆ ಮೆರೆದ ನಿವೃತ್ತ ಸಿಬ್ಬಂದಿಗಳು !

ಕೊರೋನಾ ವೈರಸ್ ವಿರುದ್ಧ ತೊಡೆ ತಟ್ಟಲು ಸಿದ್ಧವಾದ ಸ್ವಯಂ ವೈದ್ಯರು ಎಷ್ಟು ಗೊತ್ತಾ? ಮಾನವೀಯತೆ ಮೆರೆದ ನಿವೃತ್ತ ಸಿಬ್ಬಂದಿಗಳು !

ನಮಸ್ಕಾರ ಸ್ನೇಹಿತರೇ, ಭಾರತದಲ್ಲಿ ಇದೀಗ ದಿನೇದಿನೇ ಕೋರೋನ ವೈರಸ್ ಹಾವಳಿ ಹೆಚ್ಚಾಗುತ್ತಿದೆ. ಇನ್ನು ಒಂದು ವೇಳೆ ಅಮೆರಿಕ ಹಾಗೂ ಇಟಲಿ ಅಂತಹ ಪರಿಸ್ಥಿತಿ ಭಾರತದಲ್ಲಿ ಎದುರಾದರೇ ಸಂಖ್ಯೆಗಳು ಕೋಟಿಗಳ ಲೆಕ್ಕದಲ್ಲಿ ಇರುತ್ತದೆ ಎಂಬುದನ್ನು ಎಲ್ಲರೂ ಚೆನ್ನಾಗಿಯೇ ತಿಳಿದಿದ್ದಾರೆ.

ಅಂತಹ ವಿಶ್ವದ ದೊಡ್ಡಣ್ಣ ಅಮೆರಿಕಾ ದೇಶದಲ್ಲಿ ಇದೀಗ ವೆಂಟಿಲೇಟರ್ ಗಳ ಅಭಾವ ಕಾಡುತ್ತಿದ್ದು, ಇಟಲಿ, ಸ್ಪೇನ್ ಹಾಗೂ ಬ್ರಿಟನ್ ದೇಶಗಳಲ್ಲಿಯೂ ಕೂಡ ವೈದ್ಯಕೀಯ ಉಪಕರಣಗಳ ಹಾಗೂ ವೈದ್ಯರ ಅಭಾವ ಕಾಡುತ್ತಿದೆ. ಹಲವಾರು ದೇಶಗಳಲ್ಲಿಯೂ ಕೂಡ ಇದೇ ಪರಿಸ್ಥಿತಿ ಎದುರಾಗಿದೆ. ವೈದ್ಯಕೀಯ ಪರಿಕರಗಳನ್ನು ಆಮದು ಮಾಡಿಕೊಳ್ಳೋಣ ಎಂದರೆ ಕುತಂತ್ರಿ ಚೀ – ನಾ ಇದರಲ್ಲಿಯೂ ಕೂಡ ತನ್ನ ನಕಲಿ ಆಟವನ್ನು ಆಡಲು ಆರಂಭಿಸಿ ಕೋಟ್ಯಾಂತರ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ನಕಲು ಮಾಡಿ ಕಳುಹಿಸುತ್ತಿದೆ.

ಇನ್ನು ವೈದ್ಯರ ಅಭಾವ ಹಲವಾರು ದೇಶಗಳಲ್ಲಿ ಕಾಡತೊಡಗಿದೆ, ಇದನ್ನೇ ಮುಂದಾಲೋಚನೆ ನಡೆಸಿದ ಕೇಂದ್ರ ಮಾರ್ಚ್ 25 ನೇ ತಾರೀಖಿನಂದು ಯಾರಾದರೂ ವೈದ್ಯಕೀಯ ವಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರೇ ಹಾಗೂ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರು ಮುಂದೆ ಬರಬೇಕು ಎಂದು ಮನವಿ ಮಾಡಿಕೊಂಡಿತ್ತು. ಇದಕ್ಕೆ ಇದೀಗ ಸ್ಪಂದಿಸಿರುವ ಸರ್ಕಾರದ ನಿವೃತ್ತಿ ಪಡೆದ ವೈದ್ಯರು, ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಸಿಬ್ಬಂದಿಗಳು ಹಾಗೂ ವೈದ್ಯರು, ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಖಾಸಗಿ ವೈದ್ಯರು ಮುಂದೆ ಬಂದಿದ್ದು ಬರೋಬ್ಬರಿ ಮೂವತ್ತು ಸಾವಿರಕ್ಕೂ ಹೆಚ್ಚು ಜನ ಸ್ವಯಂ ಸೇವಕರಾಗಿ ವೈದ್ಯರಾಗಿ ಮತ್ತೊಮ್ಮೆ ಕಾರ್ಯ ನಿರ್ವಹಿಸಲು ಸಿದ್ಧವಾಗಿದ್ದೇವೆ ಎಂದು ಸಹಿ ಹಾಕಿದ್ದಾರೆ. ಈ ಕುರಿತು ಅಂಕಿ-ಅಂಶಗಳನ್ನು ಇದೀಗ ಕೇಂದ್ರ ಅಧಿಕಾರಿಗಳು ಬಿಡುಗಡೆ ಮಾಡಿದ್ದು ವೈದ್ಯರ ದೊಡ್ಡ ಮನಸ್ಸಿಗೆ ಭಾರಿ ಪ್ರಶಂಸೆಗಳು ವ್ಯಕ್ತವಾಗಿವೆ.