ಚೀನಾ ದೇಶಕ್ಕೆ ಮೊದಲ ಗುದ್ದು ನೀಡಲು ಸಿದ್ಧವಾದ ಬ್ರಿಟನ್ ಪ್ರಧಾನಿ ಬೋರಿಸ್ ! ಏನು ಗೊತ್ತಾ?

ಚೀನಾ ದೇಶಕ್ಕೆ ಮೊದಲ ಗುದ್ದು ನೀಡಲು ಸಿದ್ಧವಾದ ಬ್ರಿಟನ್ ಪ್ರಧಾನಿ ಬೋರಿಸ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ವಿಶ್ವದ ಎಲ್ಲೆಡೆ ಕೊರೊನ ವೈರಸ್ ತಾಂಡವ ವಾಡುತ್ತಿದ್ದು ಎಲ್ಲಾ ದೇಶಗಳು ಚೀನಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಆಲೋಚನೆಯಲ್ಲಿ ತೊಡಗಿ ಕೊಂಡಿವೆ.

ಆದರೆ ಅದ್ಯಾಕೋ ಗೊತ್ತಿಲ್ಲ ಇಲ್ಲಿಯವರೆಗೂ ಕೂಡ ಯಾವ ರಾಷ್ಟ್ರಗಳು ಇನ್ನೂ ಕಠಿಣ ಕ್ರಮದ ಆದೇಶ ಹೊರಡಿಸಿಲ್ಲ. ಇನ್ನು ವಿಶ್ವದ ದೊಡ್ಡಣ್ಣ ಅಮೆರಿಕಾ ದೇಶದಲ್ಲಿ ಈ ಲೇಖನ ಬರೆಯುವ ಸಮಯದ ಆಧಾರಿತ ಮೇಲೆ ಬರೋಬ್ಬರಿ ಒಂದು ಲಕ್ಷದ 75 ಸಾವಿರ ಮಂದಿ ಸೋಂಕಿಗೆ ಈಡಾಗಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ರವರು ಕೇವಲ ಮಾತುಗಳಲ್ಲಿ ಮಾತ್ರ ಚೀನಾ ವಿರುದ್ಧ ತೊಡೆ ತಟ್ಟಿದ್ದು ಯಾವುದೇ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಇನ್ನು ಭಾರತ ಸರ್ಕಾರದಿಂದ ಇದರ ಕುರಿತು ಇನ್ನೂ ಆಲೋಚನೆ ನಡೆದಿದೆಯೇ ಇಲ್ಲವೋ ಎಂಬುದು ಕೂಡ ತಿಳಿದಿಲ್ಲ. ಫ್ರಾನ್ಸ್, ಇಟಲಿ, ಸೇರಿದಂತೆ ಇತರ ದೇಶಗಳು ಕೂಡ ಕಠಿಣ ಕ್ರಮ ಕೈಗೊಳ್ಳುವ ಮುನ್ಸೂಚನೆ ತೋರಿದ್ದಾರೆ.

ಈ ಎಲ್ಲಾ ದೇಶಗಳು ಚರ್ಚೆ ಮಾಡುವ ಸಂದರ್ಭದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಬ್ರಿಟನ್ ದೇಶದ ಪ್ರಧಾನಿ ಬೋರಿಸ್ ರವರು ಮೊದಲ ಹಂತವಾಗಿ ಚೀನಾ ದೇಶದ ಟೆಕ್ನಾಲಜಿ ದಿಗ್ಗಜ ಹುವಾಯ್ ಕಂಪನಿಗೆ ಬ್ರಿಟನ್ ದೇಶದಲ್ಲಿ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ನೀಡಿರುವ ಆದೇಶವನ್ನು ವಾಪಸ್ ಪಡೆಯುವ ಮೂಲಕ ಒಮ್ಮೆಲೆ ಸಾವಿರಾರು ಕೋಟಿಯಷ್ಟು ಒಪ್ಪಂದವನ್ನು ರದ್ದುಪಡಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ನಾವು ನಿಮಗೆ ಬುದ್ಧಿ ಕಲಿಸಲೇ ಬಿಡುವುದಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇನ್ನು ಇಲ್ಲಿನ ಪ್ರಧಾನಿ
ಬೋರಿಸ್ ರವರು ಕೂಡ ಸೋಂಕಿಗೆ ತುತ್ತಾಗಿದ್ದಾರೆ.