ಚೀನಾ ದೇಶಕ್ಕೆ ಮರ್ಮಾಘಾತ ! ಸ್ಪೇನ್, ಜೆಕ್ ರಿಪಬ್ಲಿಕ್ ಆದವೂ ಇದೀಗ ಭಾರತ ಹಾಗೂ ಇನ್ನುಳಿದ 4 ದೇಶಗಳ ಸರದಿ. ಮಾಡಲು ಹೊರಟಿರುವುದು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶವು ಕೊರೊನ ವೈರಸ್ ನಿಂದ ವಿಶ್ವದೆಲ್ಲೆಡೆ ಸೃಷ್ಟಿಯಾಗಿರುವ ಪರಿಸ್ಥಿತಿಯನ್ನು ಲಾಭವಾಗಿ ಪರಿವರ್ತಿಸಲು ಕಳಪೆ ಗುಣ ಮಟ್ಟದ ಮಾಸ್ಕ್ ಗಳು, ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡುತ್ತಿದೆ.

ಆದರೆ ಇದನ್ನು ಕೂಡಲೇ ಕಂಡು ಕೊಂಡ ಸ್ಪೇನ್ ಹಾಗೂ ಜೆಕ್ ರಿಪಬ್ಲಿಕ್ ದೇಶಗಳು ನಿಮಗೆಲ್ಲರಿಗೂ ತಿಳಿದಿರುವಂತೆ ಕೋಟ್ಯಂತರ ರೂ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ವಾಪಸ್ಸು ಕಳುಹಿಸಿದ್ದವು. ಕೇವಲ ಒಂದು ಸ್ಪೇನ್ ದೇಶಕ್ಕೆ ಬರೋಬ್ಬರಿ 6,40,000 ನಕಲಿ ಪರೀಕ್ಷಾ ಕಿಟ್ ಗಳು ತಲುಪಿದ್ದವು ಎಂದರೆ ಅಂದಾಜು ಮಾಡಿಕೊಳ್ಳಿ, ಇಂತಹ ಪರಿಸ್ಥಿತಿಯಲ್ಲಿ ಚೀನಾ ದೇಶ ಯಾವ ರೀತಿ ಲಾಭ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದೆ ಎಂದು.

ಇದು ಇಷ್ಟಕ್ಕೇ ನಿಲ್ಲಲಿಲ್ಲ, ಜೆಕ್ ಗಣರಾಜ್ಯದಲ್ಲಿ ಕೂಡ 3 ಲಕ್ಷ ಪರೀಕ್ಷಾ ಕಿಟ್ ಗಳಲ್ಲಿ ಶೇ 80 ರಷ್ಟು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂಬುದು ತಿಳಿದು ಬಂದಿತು, ಕೂಡಲೇ ಈ ಎರಡು ದೇಶಗಳು ಚೀನಾ ದೇಶದ ಸಾಮಗ್ರಿಗಳನ್ನು ವಾಪಸು ಕಳುಹಿಸಲು ನಿರ್ಧಾರ ಮಾಡಿ ಆದೇಶ ಹೊರಡಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ದೇಶಕ್ಕೆ ಭಾರಿ ಮುಜುಗರ ಉಂಟಾಗುವಂತೆ ಮಾಡಿದರು.

ಇದಾದ ಬಳಿಕ ಇದೀಗ ನೆದರ್ಲ್ಯಾಂಡ್, ಫಿಲಿಫೈನ್ಸ್ , ಉಕ್ರೇನ್ ಹಾಗೂ ಟರ್ಕಿ ದೇಶಗಳು ಚೀನಾ ದೇಶದ ವಿರುದ್ಧ ತೊಡೆ ತಟ್ಟಿದ್ದು ಲಕ್ಷಾಂತರ ಕೋಟಿ ಬೆಲೆ ಬಾಳುವ ವೈದ್ಯಕೀಯ ಸಾಮಗ್ರಿಗಳು ನಕಲಿಯೆಂದು ಪರೀಕ್ಷೆ ನಡೆಸಿ ಸಾಮಗ್ರಿಗಳನ್ನು ವಾಪಸ್ ಕಳುಹಿಸಲು ಮುಂದೆ ಹೋಗಿವೆ. ಈ ಮೂಲಕ ಚೀನಾ ದೇಶಕ್ಕೆ ಮತ್ತಷ್ಟು ನಷ್ಟ ಉಂಟಾಗುತ್ತಿದ್ದು, ವೈರಸ್ ಮೂಲಕ ಹಣ ಮಾಡುವ ಆಲೋಚನೆ ಇಟ್ಟು ಕೊಂಡಿದ್ದ ಚೀನಾ ದೇಶಕ್ಕೆ ಇದೀಗ ನಷ್ಟವೇ ಹೆಚ್ಚಾಗಿದೆ.

ಇದೆಲ್ಲಾ ನಡೆಯುತ್ತಿದ್ದರೂ ಕೂಡ ಚೀನಾ ದೇಶ ಭಾರತದ ಸಹಾಯ ನೆನಪು ಮಾಡಿಕೊಂಡು, ಭಾರತ ದೇಶ ನಮಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡಿದೆ, ಇದೀಗ ನಾವು ವೈದ್ಯಕೀಯ ಉಪಕರಣಗಳನ್ನು ರಫ್ತ್ ಮಾಡುತ್ತೇವೆ ಎಂದು ಮುಂದೆ ಬಂದಿತ್ತು. ಆದರೆ ಅಷ್ಟರಲ್ಲಾಗಲೇ ಭಾರತ ಮುಂದಾಲೋಚನೆ ನಡೆಸಿ ಒಪ್ಪಂದ ಮಾಡಿಕೊಂಡಿತ್ತು ಎಂಬುದು ತಿಳಿದು ಬಂದಿದೆ..

ಹೌದು, ಇದರ ಕುರಿತು ಮುಂದಾಲೋಚನೆ ನಡೆಸಿದ್ದ ಭಾರತ ಕೇಂದ್ರ ಆರೋಗ್ಯ ಇಲಾಖೆಯು ಸ್ವಿಜರ್ಲ್ಯಾಂಡ್ ದೇಶದ ರೋಚೆ ಕಂಪನಿಯ ಜೊತೆ ಮಾರ್ಚ್ 12ನೇ ತಾರೀಖಿನಂದು ಒಪ್ಪಂದ ಮಾಡಿಕೊಂಡಿದ್ದು, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮತ್ತಷ್ಟು ವೈದ್ಯಕೀಯ ಸಾಮಾಗ್ರಿಗಳನ್ನು ಭಾರತ ದೇಶ ಆಮದು ಮಾಡಿ ಕೊಳ್ಳಲಿದೆ. ಇನ್ನು ಭಾರತದಲ್ಲಿಯೇ ಶೇಕಡ ನೂರರಷ್ಟು ಖಚಿತ ವೈರಸ್ ಪತ್ತೆ ಮಾಡಬಹುದಾದ ಉಪಕರಣವನ್ನು ಕಂಡು ಹಿಡಿದಿರುವ ಮೈ ಲ್ಯಾಬ್ ಸಂಸ್ಥೆಯಿಂದ ಮತ್ತಷ್ಟು ಪರೀಕ್ಷಾ ಕಿಟ್ ಗಳನ್ನೂ ತಯಾರಿಸಿ ಬಳಸಿಕೊಳ್ಳಲು ಕೇಂದ್ರ ಆಲೋಚನೆ ನಡೆಸಿದೆ ಎಂಬುದು ತಿಳಿದು ಬಂದಿದೆ. ಈ ಮೂಲಕ ಭಾರತದಲ್ಲಿಯೂ ಲಕ್ಷಾಂತರ ಕೋಟಿ ವ್ಯವಹಾರ ಮಾಡಬಹುದು ಎಂದುಕೊಂಡಿದ್ದ ಚೀನಾ ದೇಶಕ್ಕೆ ಬಿಗ್ ಶಾಕ್ ಎದುರಾಗಿದೆ.

Facebook Comments

Post Author: Ravi Yadav