ಮತ್ತಷ್ಟು ಕಳೆಗುಂದಲಿದೆಯೇ ಐಪಿಎಲ್?? ಅಭಿಮಾನಿಗಳಿಗೆ ಮತ್ತಷ್ಟು ನಿರಾಸೆ ಮೂಡಿಸಿದ ಆಸ್ಟ್ರೇಲಿಯಾ ಪ್ರಧಾನಿ ನಿರ್ಧಾರ! ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೆ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕೊರೋನಾ ವೈರಸ್ ಪ್ರಭಾವದಿಂದ ಐಪಿಎಲ್ ಟೂರ್ನಿ 16 ದಿನಗಳ ಕಾಲ ಮುಂದೂಡಲ್ಪಟ್ಟಿದೆ.

ಮುಂದೂಡಿರುವ ಕಾರಣ ಟೂರ್ನಿಯು ಇದೀಗ ಕೆಲವು ಪಂದ್ಯಗಳನ್ನು ಕಳೆದು ಕೊಳ್ಳುವುದು ಬಹುತೇಕ ಖಚಿತವಾಗಿದೆ, ಆದರೆ ಎಷ್ಟು ಪಂದ್ಯಗಳನ್ನು ಕಡಿತ ಮಾಡಬೇಕು ಎಂದು ನಿರ್ಧಾರ ಮಾಡಿಲ್ಲ ಎಂದು ಕೇವಲ ಎರಡು ದಿನಗಳ ಹಿಂದಷ್ಟೇ ಸೌರವ್ ಗಂಗೂಲಿ ರವರು ಹೇಳಿಕೆ ನೀಡಿದ್ದಾರೆ. ಇದನ್ನು ಹೊರತು ಪಡಿಸಿದರೆ ಮಿನಿ ಐಪಿಎಲ್ ನಡೆಯುತ್ತದೆ, ಅಭಿಮಾನಿಗಳು ಇಲ್ಲದೆ ಪಂದ್ಯಗಳು ನಡೆಯುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ ಬಿಸಿಸಿಐ ಕಡೆಯಿಂದ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಆದರೆ ಕೆಲವು ಪಂದ್ಯಗಳನ್ನು ಕಡಿತಗೊಳಿಸುವುದು ಅನಿವಾರ್ಯ ಎಂದು ಈಗಾಗಲೇ ಗಂಗೂಲಿ ಹೇಳಿದ್ದಾರೆ.

ಇದರಿಂದ ಕೆಲವು ತಂಡಗಳ ವಿರುದ್ಧ ಕೆಲವು ತಂಡಗಳು ಎರಡು ಪಂದ್ಯಗಳನ್ನು ಆಡುವುದು ಸಾಧ್ಯವಾಗುವುದಿಲ್ಲ. ಇದರಿಂದ ಈಗಾಗಲೇ ಅಭಿಮಾನಿಗಳು ನಿರಾಸೆ ಗೊಂಡಿದ್ದಾರೆ, ಇದರ ಬೆನ್ನಲ್ಲೇ ಆಸ್ಟ್ರೇಲಿಯ ದೇಶದ ಪ್ರಧಾನಿ ಯಾವುದೇ ಕಾರಣಕ್ಕೂ ಮುಂದಿನ ಆದೇಶದವರೆಗೂ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರು ಯಾವುದೇ ಟೂರ್ನಿಯಲ್ಲಿ ಪಾಲ್ಗೊಳ್ಳುವಂತಿಲ್ಲ, ಕೊರೋನಾ ವೈರಸ್ ಬಗ್ಗೆ ಯಾವುದೇ ದೇಶವಾಗಲಿ ಹೆಚ್ಚು ಕಾಳಜಿ ವಹಿಸಿದರೂ ಕೂಡ ಯಾವುದೇ ಕಾರಣಕ್ಕೂ ಯಾರೊಬ್ಬರೂ ದೇಶ ಬಿಟ್ಟು ಹೋಗುವಂತಿಲ್ಲ ಎಂದು ಅನಿರ್ದಿಷ್ಟಾವಧಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಪ್ರತಿ ಐಪಿಎಲ್ ನಲ್ಲಿಯೂ ತಮ್ಮದೇ ಆದ ಪ್ರಭಾವ ಬೀರುತ್ತಿದ್ದ ಹಲವಾರು ಬಲಾಢ್ಯ ಆಟಗಾರರು ಈ ಬಾರಿ ಐಪಿಎಲ್ ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಅನುಮಾನವಾಗಿದೆ.

Facebook Comments

Post Author: RAVI