ಐಪಿಎಲ್ ಅಭಿಮಾನಿಗಳಿಗೆ ಭಾರೀ ನಿರಾಸೆ ? ಹಿಂದೆಂದೂ ತೆಗೆದುಕೊಳ್ಳದಂತಹ ನಿರ್ಧಾರ ತೆಗೆದುಕೊಳ್ಳಲು ಚರ್ಚೆ ಆರಂಭಿಸಿದ ಬಿಸಿಸಿಐ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಭಾರತದಲ್ಲಿ ವಿಶ್ವದ ಶ್ರೀಮಂತ ಲೀಗ್ ಎಂದು ಖ್ಯಾತಿ ಪಡೆದು ಕೊಂಡಿರುವ ಐಪಿಎಲ್ ಟೂರ್ನಿಯು ಆರಂಭವಾಗಲಿದೆ. ಕೋಟ್ಯಾಂತರ ಅಭಿಮಾನಿಗಳು ತಮ್ಮ ತಂಡದ ನೆಚ್ಚಿನ ಆಟಗಾರರ ಆಟವನ್ನು ನೋಡಲು ಕಾದು ಕುಳಿತಿದ್ದಾರೆ.

ಹೀಗಿರುವಾಗ ಬಿಸಿಸಿಐ ಕ್ರಿಕೆಟ್ ಸಂಸ್ಥೆಯು ಕ್ರಿಕೆಟಿಗರ ಆರೋಗ್ಯ ಹಾಗೂ ಮೈದಾನದಲ್ಲಿ ಸೇರುವ ಲಕ್ಷಾಂತರ ಅಭಿಮಾನಿಗಳ ಆರೋಗ್ಯದ ಕುರಿತು ಆಲೋಚನೆ ನಡೆಸಿ ದೇಶದಲ್ಲಿ ಕೊರೊನ ವೈರಸ್ ಭೀತಿ ಹೆಚ್ಚಾಗುತ್ತಿರುವ ಕಾರಣ ಪಂದ್ಯಗಳನ್ನು ಟಿಕೆಟ್ ಸೇಲ್ ಮಾಡದೇ ನಡೆಸಲು ಆಲೋಚನೆ ಮಾಡುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕೂಡ ಈ ಕುರಿತು ಗಮನಹರಿಸುವಂತೆ ಮನವಿ ಮಾಡಿಕೊಂಡಿದ್ದು, ಕೇವಲ ಟಿವಿ ಹಾಗೂ ವೆಬ್ಸೈಟ್ಗಳಲ್ಲಿ ಪಂದ್ಯಗಳನ್ನು ಪ್ರಸಾರ ಮಾಡಿ ಅಭಿಮಾನಿಗಳನ್ನು ಮೈದಾನದ ಒಳಗಡೆ ಬಿಟ್ಟುಕೊಳ್ಳದೆ ಇರಲು ನಿರ್ಧಾರ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಒಂದು ವೇಳೆ ಹೀಗೆ ನಡೆದಲ್ಲಿ ಐಪಿಎಲ್ ಪಂದ್ಯಾವಳಿ ಕಳೆಗುಂದಲಿವೆ ಎಂದು ಕೆಲವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರೇ, ಮತ್ತಷ್ಟು ಜನ ಒಂದು ವರ್ಷ ಐಪಿಎಲ್ ಟೂರ್ನಿ ನಿಲ್ಲಿಸಿದರೇ ಒಳಿತು ಎಂದಿದ್ದಾರೆ. ಮತ್ತಷ್ಟು ಜನ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿಕೆ ನೀಡಿದ್ದಾರೆ. ಈ ರೀತಿಯ ನಿರ್ಧಾರದ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ

Facebook Comments

Post Author: RAVI