ಮುಂದಿನ ಟಿ20 ವಿಶ್ವಕಪ್ ನಲ್ಲಿ ಮೂರು ಬಲಾಡ್ಯ ತಂಡಗಳನ್ನು ಆಯ್ಕೆ ಮಾಡಿದ ಬ್ರಿಯಾನ್ ಲಾರಾ ! ಈ ತಂಡಗಳೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಗಳಂತೆ ! ಯಾವ್ಯಾವು ಗೊತ್ತಾ??

ನಮಸ್ಕಾರ ಸ್ನೇಹಿತರೇ, ವಿಶ್ವಕಪ್ ಕ್ರಿಕೆಟ್ ಸರಣಿಗೆ ಇನ್ನು ಎಂಟು ತಿಂಗಳು ಬಾಕಿ ಉಳಿದಿದ್ದರೂ ಕೂಡ ಈಗಾಗಲೇ ಪ್ರತಿಯೊಂದು ತಂಡಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ತಂಡಗಳ ಆಯ್ಕೆ ಮಾಡಲು ಕಸರತ್ತು ನಡೆಸುತ್ತಿವೆ.

ಐಪಿಎಲ್ ಟೂರ್ನಿಯ ಬಳಿಕ ಪ್ರತಿಯೊಂದು ತಂಡಗಳು ಮತ್ತಷ್ಟು ‌ಸಿದ್ಧತೆಯಲ್ಲಿ ತೊಡಗಿ ಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ, ಇದೀಗ ಇದರ ಪ್ರತಿಕ್ರಿಯೆ ನೀಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ರವರು ಮೂರು ತಂಡಗಳನ್ನು ಆಯ್ಕೆ ಮಾಡಿ, ಈ ಮೂರು ತಂಡಗಳು ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಆಯ್ಕೆಮಾಡುವ ಟಾಪ್ ತಂಡಗಳಾಗಿವೆ ಎಂದು ಹೇಳಿ ಆಯ್ಕೆ ಮಾಡಿದ್ದಾರೆ.

ಹೌದು, ಟಿ20 ವಿಶ್ವಕಪ್ ಟೂರ್ನಿಯ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಯಾನ್ ಲಾರಾ ರವರು, ಖಂಡಿತವಾಗಲೂ ಭಾರತ ದೇಶ ವಿಶ್ವಕಪ್ ಟೂರ್ನಿಯಲ್ಲಿ ಅಗ್ರಸ್ಥಾನದಲ್ಲಿ ಬಲಿಷ್ಠ ತಂಡವಾಗಿ ಪಾಲ್ಗೊಳ್ಳಲಿದೆ, ಆದರೆ ಆಸ್ಟ್ರೇಲಿಯಾ ದೇಶಕ್ಕೆ ತವರು ನೆಲ ಬೆಂಬಲಕ್ಕೆ ನಿಲ್ಲಬಹುದು, ಆಸ್ಟ್ರೇಲಿಯ ದೇಶವನ್ನು ತವರಿನಲ್ಲಿ ಮಣಿಸುವುದು ಸುಲಭದ ಕೆಲಸವಲ್ಲ, ಈ ಎರಡು ತಂಡಗಳನ್ನು ಹೊರತು ಪಡಿಸಿದಂತೆ ಮೂರನೇ ತಂಡವಾಗಿ ವೆಸ್ಟ್ ಇಂಡೀಸ್ ತಂಡ ಕಾಣಿಸಿಕೊಳ್ಳುತ್ತದೆ, ಎರಡು ಬಾರಿ ವಿಶ್ವಕಪ್ ಜಯಿಸಿರುವ ವೆಸ್ಟ್ ಇಂಡೀಸ್ ತಂಡವು ತನ್ನ ಅಸಂಗತೆಯನ್ನು ನಿವಾರಣೆ ಮಾಡಿಕೊಂಡಲ್ಲಿ ಖಂಡಿತವಾಗಲೂ ವಿಶ್ವಕಪ್ ಟೂರ್ನಿಯಲ್ಲಿ ಪ್ರಾಬಲ್ಯ ಸ್ಥಾಪಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.

Facebook Comments

Post Author: RAVI