ಕೋರಾನಾ ಎಫೆಕ್ಟ್ ! ಮುಂಬೈನಲ್ಲಿ ಬಹಳ ವಿಚಿತ್ರವಾಗಿ ಪಂದ್ಯಗಳನ್ನು ನಡೆಸಲು ಮುಂದಾದ ಮಹಾರಾಷ್ಟ್ರ ! ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ದೇಶದಲ್ಲಿ ಚೀನಾ ದೇಶದ ವೈರಸ್ ಕಾಟ ಹೆಚ್ಚಾಗಿದೆ. ಇದರ ಬೆನ್ನಲ್ಲೇ ದೇಶದ ಹಲವಾರು ಪ್ರದೇಶಗಳಲ್ಲಿ ವೈರಸ್ ಇರುವ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿವೆ.

ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಸಹ ಇದೇ ಪರಿಸ್ಥಿತಿ, ಅದೇ ಕಾರಣಕ್ಕಾಗಿ ಐಪಿಎಲ್ ಪಂದ್ಯಗಳನ್ನು ಮುಂದೂಡುವಂತೆ ಮಹಾರಾಷ್ಟ್ರ ಬಿಸಿಸಿಐ ಬಳಿ ಮನವಿ ಮಾಡಿತ್ತು. ಆದರೆ ಐಪಿಎಲ್ ಪಂದ್ಯಗಳನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ಪಡೆದು ಕೊಂಡ ಬಳಿಕ ಮಹಾರಾಷ್ಟ್ರ ಕ್ಯಾಬಿನೆಟ್ ಹೊಸ ಆದೇಶ ಹೊರಡಿಸುವ ಕುರಿತು ಚರ್ಚೆ ನಡೆಸಿದೆ, ಅದುವೇ ಮುಂಬೈ ನಗರದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಆದರೆ ಕೇವಲ ಆಟಗಾರರು ಮಾತ್ರ ಮೈದಾನದಲ್ಲಿ ಇರಬೇಕು ಎಂಬ ಷರತ್ತಿನೊಂದಿಗೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಹೌದು ಮುನ್ನೆಚ್ಚರಿಕಾ ಕ್ರಮವಾಗಿ ನಾವು ರಾಜ್ಯದಲ್ಲಿ ಯಾವುದೇ ದೊಡ್ಡ ಕೂಟಕ್ಕೆ ಅವಕಾಶ ನೀಡುವುದಿಲ್ಲ, ಆದ ಕಾರಣ ಕ್ಯಾಬಿನೆಟ್ನಲ್ಲಿ ಐಪಿಎಲ್ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಹೇಗಿದ್ದರೂ ಐಪಿಎಲ್ ಪಂದ್ಯಾವಳಿಯ ಬಹುತೇಕ ಆದಾಯ ಟಿವಿ ಚಾನಲ್ ಗಳು, ವೆಬ್ಸೈಟ್ಗಳು ಮತ್ತು ಜಾಹೀರಾತುಗಳ ನೇರಪ್ರಸಾರ ದಿಂದ ಬರುತ್ತದೆ, ಆದಕಾರಣ ಯಾವುದೇ ಟಿಕೆಟ್ ಮಾರಾಟವಾಗದಿದ್ದರೆ ಬಿಸಿಸಿಐ ಸಂಸ್ಥೆಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ವರ್ಷ ಮುಂಬೈ ನಗರದಲ್ಲಿ ಒಂದು ಟಿಕೆಟ್ ಕೂಡ ಮಾರಾಟ ಮಾಡುವುದಿಲ್ಲ, ಪ್ರೇಕ್ಷಕರು ಇಲ್ಲದೇ ಐಪಿಎಲ್ ಪಂದ್ಯಗಳು ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿರ್ಣಯದ ಕುರಿತು ಇನ್ನು ಬಿಸಿಸಿಐ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಆಗಲಿ ಅಥವಾ ಆದೇಶವಾಗಲಿ ಹೊರಬಿದ್ದಿಲ್ಲ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

Facebook Comments

Post Author: RAVI