ಕಿಂಗ್ ಕೊಹ್ಲಿ, ಸ್ಮಿತ್, ಹಿಟ್ ಮ್ಯಾನ್ ಇವರ್ಯಾರೂ ಅಲ್ಲ ಬ್ರಿಯಾನ್ ಲಾರಾ ರವರ ಫೇವರಿಟ್ ಕ್ರಿಕೆಟಿಗ ಈ ಕನ್ನಡಿಗ ! ಕಾರಣಗಳ ಸಮೇತ ವಿವರಣೆ ನೀಡಿ ಬ್ರಿಯಾನ್ ಲಾರಾ ಹೇಳಿದ್ದೇನು ಗೊತ್ತಾ?

ಕಿಂಗ್ ಕೊಹ್ಲಿ, ಸ್ಮಿತ್, ಹಿಟ್ ಮ್ಯಾನ್ ಇವರ್ಯಾರೂ ಅಲ್ಲ ಬ್ರಿಯಾನ್ ಲಾರಾ ರವರ ಫೇವರಿಟ್ ಕ್ರಿಕೆಟಿಗ ಈ ಕನ್ನಡಿಗ ! ಕಾರಣಗಳ ಸಮೇತ ವಿವರಣೆ ನೀಡಿ ಬ್ರಿಯಾನ್ ಲಾರಾ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಬಹುಶಹ ವೆಸ್ಟ್ ಇಂಡೀಸ್ ದೇಶದ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ರವರ ಬಗ್ಗೆ ನಿಮಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಎನಿಸುತ್ತದೆ. ಕ್ರಿಕೆಟ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಸಚಿನ್, ದ್ರಾವಿಡ್, ಗಂಗೂಲಿ ರವರಂತಹ ದಿಗ್ಗಜ ನಾಯಕರ ಸಾಲಿನಲ್ಲಿ ಇವರು ಕಾಣಿಸಿಕೊಳ್ಳುತ್ತಾರೆ.

ಇದೀಗ ರಸ್ತೆ ಸುರಕ್ಷತೆಗಾಗಿ ನಡೆಯುತ್ತಿರುವ ವಿವಿಧ ದೇಶಗಳ ಕ್ರಿಕೆಟ್ ದಿಗ್ಗಜರ ಸರಣಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬ್ರಿಯಾನ್ ಲಾರಾ ಇಂದಿನ ಕ್ರಿಕೆಟ್ ನ ಬಗ್ಗೆ ಪ್ರತಿಕ್ರಿಯೆ ನೀಡಿ ತಮ್ಮದೇ ಆದ ಫೇವರೆಟ್ ಆಟಗಾರನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ರವರು ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಆಗಿರಬಹುದು, ಆದರೆ ಈ ಕನ್ನಡಿಗನೇ ನನ್ನ ಫೇವರೆಟ್ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಇವರು ಆಯ್ಕೆ ಮಾಡಿರುವ ಆಟಗಾರ ಮತ್ಯಾರು ಅಲ್ಲ ನಮ್ಮ ಕನ್ನಡಿಗ ಕೆಎಲ್ ರಾಹುಲ್. ಹೌದು ಕೆ ಎಲ್ ರಾಹುಲ್ ಅವರು ನನ್ನ ಫೇವರೆಟ್ ಕ್ರಿಕೆಟಿಗ, ವಿರಾಟ್ ಕೊಹ್ಲಿ ಅವರು ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮ್ಯಾನ್, ಆದರೆ ನಾನು ಕೆಎಲ್ ರಾಹುಲ್ ರವರ ಬ್ಯಾಟಿಂಗ್ ನೋಡಲು ಇಷ್ಟಪಡುತ್ತೇನೆ. ವಿರಾಟ್ ಕೊಹ್ಲಿ ರವರ ನಂತರ ತಂಡದಲ್ಲಿ ಮೊಟ್ಟ ಮೊದಲಾಗಿ ಕೆಎಲ್ ರಾಹುಲ್ ಸ್ಥಾನ ಪಡೆಯಬೇಕು ಎಂಬುದು ನನ್ನ ಅಭಿಪ್ರಾಯ. ಕೆ ಎಲ್ ರಾಹುಲ್ ಅವರು ಒಬ್ಬ ಕ್ಲಾಸ್ ಆಟಗಾರ, ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿಯೂ ಬ್ಯಾಟ್ ಬೀಸಬಲ್ಲ ಸರ್ವಶ್ರೇಷ್ಠ ಆಟಗಾರ, ತನ್ನ ಸಾಮರ್ಥ್ಯದ ಮೂಲಕ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುತ್ತಾನೆ ಎಂದು ಹೇಳಿಕೆ ನೀಡಿದ್ದಾರೆ.