ಕೊನೆಗೂ ಸಿಕ್ಕಿತು ವಿಡಿಯೋ: ತನ್ನನ್ನು ಯಾಕೆ ಲೇಡಿ ಸೆಹ್ವಾಗ್ ಎನ್ನುತ್ತಾರೆ ಎಂಬುದಕ್ಕೆ ಈ ಸಿಕ್ಸರ್ ಗಳ ಮೂಲಕ ಕಾರಣ ತಿಳಿಸಿದ ಶಫಾಲಿ ! ದಿಗ್ಗಜರೇ ಬೆರಗು ! ನೀವೇ ನೋಡಿ !

ಕೊನೆಗೂ ಸಿಕ್ಕಿತು ವಿಡಿಯೋ: ತನ್ನನ್ನು ಯಾಕೆ ಲೇಡಿ ಸೆಹ್ವಾಗ್ ಎನ್ನುತ್ತಾರೆ ಎಂಬುದನ್ನು ಸಾಬೀತುಪಡಿಸಿದ ಶಫಾಲಿ ! ಕ್ರಿಕೆಟ್ ರಂಗವೇ ಬೆಚ್ಚಿ ಬೀಳುವಂತಹ ಸಿಕ್ಸರ್ ಬಾರಿಸಿದ ವರ್ಮ ! ನೀವೇ ನೋಡಿ

ನಮಸ್ಕಾರ ಸ್ನೇಹಿತರೇ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಕಪ್ ತಂಡದ ವನಿತೆಯರ ಆರಂಭಿಕ ಆಟಗಾರ್ತಿಯಾಗಿರುವ ಶೆಫಾಲಿ ವರ್ಮ ರವರನ್ನು ಎಲ್ಲರೂ ಲೇಡಿ ಸೆಹ್ವಾಗ್ ಎನ್ನುತ್ತಿದ್ದಾರೆ.

ಕೆಲವರು ಹೋಲಿಕೆ ಬೇಡ ಎಂದರೇ ಇನ್ನೂ ಕೆಲವರು ಹೋಲಿಕೆ ಇರಲಿ ತಪ್ಪೇನಿದೆ ಎನ್ನುತ್ತಿದ್ದಾರೆ. ಇದರ ನಡುವೆಯೇ ನಿನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ
ಶೆಫಾಲಿ ವರ್ಮ ರವರ ಅದ್ಭುತ ಸಿಕ್ಸರ್ ಗಳು ಬಾರಿ ವೈರಲ್ ಆಗಿವೆ. ಇದೇ ಕಾರಣಕ್ಕೆ ನಾವು ಇವರನ್ನು ಲೇಡಿ ಸೆಹ್ವಾಗ್ ಎನ್ನುತ್ತೇವೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಹೌದು ನಿಮಗೆಲ್ಲರಿಗೂ ತಿಳಿದಿರುವಂತೆ ವನಿತೆಯರ ಕ್ರಿಕೆಟ್ ನಡೆಯುವಾಗ ಸಾಮಾನ್ಯ ಕ್ರೀಡಾಂಗಣದ ಅಳತೆಯನ್ನು ಕಡಿಮೆ ಮಾಡಿ ಸರಿ ಸುಮಾರು 20 ಅಥವಾ 30 ಮೀಟರ್ ಒಳಗಡೆ ಬೌಂಡರಿ ನಿರ್ಮಿಸಲಾಗಿರುತ್ತದೆ.

ಆದರೆ ಈ ಯಾವುದೇ ಅಳತೆಗಳು ಶೆಫಾಲಿ ವರ್ಮ ರವರಿಗೆ ಸರಿ ಹೊಂದುವಂತೆ ಕಾಣುತ್ತಿಲ್ಲ. ಯಾಕೆಂದರೆ ನೇರವಾಗಿ ಅವರು ಬಾಲುಗಳನ್ನು ಪೆವಿಲಿಯನ್ ಗಳಿಗೆ ಕಳುಹಿಸುತ್ತಿದ್ದಾರೆ. ಬಹಳ ಸರಾಗವಾಗಿ ಬ್ಯಾಟ್ ಬೀಸುವ ಶೆಫಾಲಿ ವರ್ಮ ರವರು ಬೌಂಡರಿ ಗೆರೆ ಗಿಂತ 20 ಅಥವಾ 30 ಮೀಟರ್ ಹೆಚ್ಚು ದೂರಕ್ಕೆ ಬಾಲುಗಳನ್ನು ಕಳುಹಿಸುತ್ತಿದ್ದಾರೆ. ನಿನ್ನೆ ಇದೇ ರೀತಿ ಎರಡು ಅದ್ಭುತ ಸಿಕ್ಸರ್ ಗಳನ್ನು ಹೊಡೆದ ಶೆಫಾಲಿ ವರ್ಮಾ ರವರ ವಿಡಿಯೋ ಇದೀಗ ವೈರಲ್ ಆಗಿದೆ. ಅದರಲ್ಲಿ ಮೊದಲನೆಯದು ಬೌಂಡರಿ ಗೆರೆಗಿಂತ ಬರೋಬ್ಬರಿ 30 ಮೀಟರ್ ದೂರವಿತ್ತು. ಆ ವಿಡಿಯೋ ಕೆಳಗಡೆ ಟ್ವೀಟ್ ನಲ್ಲಿ ಇದ್ದು ನೀವೇ ನೋಡಿ ಆನಂದಿಸಿ.