ಬಾಲಕೋಟ್ ನಲ್ಲಿ ಮಿರಾಜ್ ಯುದ್ಧ ವಿಮಾನದಷ್ಟೇ ಪ್ರಮುಖ ಪಾತ್ರ ವಹಿಸಿದ ಸೇನೆಯ ಅಸ್ತ್ರಗಳು ಯಾವುವು ಗೊತ್ತಾ??

ಬಾಲಕೋಟ್ ನಲ್ಲಿ ಮಿರಾಜ್ ಯುದ್ಧ ವಿಮಾನದಷ್ಟೇ ಪ್ರಮುಖ ಪಾತ್ರ ವಹಿಸಿದ ಸೇನೆಯ ಅಸ್ತ್ರಗಳು ಯಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ಬಾಲಕೋಟ್ ನಲ್ಲಿ ಮಿರಾಜ್ ಯುದ್ಧ ವಿಮಾನಗಳ ಆರ್ಭಟದ ಬಗ್ಗೆ ತಿಳಿದೇ ಇದೆ. ಅಂದು ನವ ಭಾರತದ ತಂಟೆಗೆ ಬಂದರೇ, ಏನಾಗುತ್ತದೆ ಎಂದು ಕೇವಲ ಪಾಕಿಸ್ತಾನಕ್ಕೆ ಅಲ್ಲಾ ಇಡೀ ವಿಶ್ವಕ್ಕೆ ಸಾರಿದಂತೆ ಇತ್ತು. ಕೇವಲ ೨೧ ನಿಮಿಷಗಳಲ್ಲಿ ತನಗೆ ನೀಡಲಾಗಿದ್ದ ಟಾರ್ಗೆಟ್ ಗಳನ್ನು ಭಾರತೀಯ ವಾಯುಪಡೆ ಬಹಳ ಸುಲಭವಾಗಿ ಮುಗಿಸಿಕೊಂಡು ಯಾವುದೇ ಪ್ರತಿದಾಳಿಯನ್ನು ನೋಡದೆ ವಾಪಸ್ಸಾಗಿತ್ತು.

ಯಾವ ಸಮಯದಲ್ಲಿ ಏನು ಆಗುತ್ತದೆ ಎಂಬುದು ಯಾರಿಗೂ ಅರಿವಿರಲಿಲ್ಲ. ಪ್ರತಿದಾಳಿ ನಡೆಸುವ ಯೋಜನೆಯು ಸಹ ಎಲ್ಲಿಯೂ ಬಹಿರಂಗಗೊಂಡಿರಲಿಲ್ಲ. ಅಷ್ಟೇ ಯಾಕೇ ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಪೈಲೆಟ್ ಗಳಿಗೂ ಸಹ ವಿಷಯ ತಿಳಿದಿರಲಿಲ್ಲ. ಕೇವಲ ಯುದ್ಧ ಅಭ್ಯಾಸ ಎಂದು ರಾಜಸ್ತಾನದ ವಾಯುನೆಲೆಯಲ್ಲಿ ಅಭ್ಯಾಸ ನಡೆಸಲಾಗಿತ್ತು. ಇಷ್ಟೆಲ್ಲಾ ನಡೆದು ಒಂದು ವರ್ಷ ಕಳೆದಿದೆ. ಈ ಸಮಯದಲ್ಲಿ ಏರ್ ಸ್ಟ್ರೈಕ್ ನಲ್ಲಿ ಮಿರಾಜ್ ಯುದ್ಧ ವಿಮಾನದಷ್ಟೇ ಪ್ರಮುಖ ಪಾತ್ರ ವಹಿಸಿದ ಸೇನೆಯ ಇತರ ಅಸ್ತ್ರಗಳ ಬಗ್ಗೆ ತಿಳಿದುಕೊಳ್ಳೋಣ.

ಭಾರತೀಯ ಸೈನ್ಯ ಮುಂಜಾನೆಯ ಸಮಯದಲ್ಲಿ ದಾಳಿ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಭಾರತೀಯ ವಾಯುಪಡೆಗೆ ಸಹಾಯ ಮಾಡಿದ್ದು ಎರಡು ಪ್ರಮುಖ ಡ್ರೋನ್ ಗಳು ಎಂದರೆ ನೀವು ನಂಬಲೇಬೇಕು. ಮೊದಲು ಉಗ್ರರ ಅಡಗು ತಾಣಗಳ ಮಾಹಿತಿಯನ್ನು ಕಲೆಹಾಕಿ ಭಾರತೀಯ ವಾಯುಪಡೆಗೆ ಸಂಪೂರ್ಣ ಸಹಾಯ ಮಾಡಿದ ಈ ಡ್ರೋನ್ ಗಳು ದಾಳಿ ನಡೆಯುವಾಗ ಯಾವ ರೀತಿ ಸಹಾಯ ಮಾಡಿದವು ಗೊತ್ತಾ?? ಎರಡು ನಿಮಿಷ ಸಮಯವಿದ್ದರೇ ಸಂಪೂರ್ಣ ಓದಿ ಬಿಡಿ.

ಐ ಇನ್ ದ ಸ್ಕೈ ಎಂದೇ ಖ್ಯಾತವಾಗಿರುವ ಸ್ವದೇಶಿ ನಿರ್ಮಿತ ನೇತ್ರಾ ಹಾಗೂ ಇಸ್ರೇಲ್ ನಿರ್ಮಿತ ಹೆರಾನ್ ಎಂಬ ಡ್ರೋನ್ ಗಳ ನೆರವಿನಿಂದ ಭಾರತೀಯ ವಾಯುಪಡೆಯು ಯಶಸ್ವಿಯಾಗಿ ಮತ್ತು ಯಾವುದೇ ಪ್ರತಿದಾಳಿಗೆ ಅವಕಾಶವಿಲ್ಲದಂತೆ ತನ್ನ ಕೆಲಸ ಮುಗಿಸಿಕೊಂಡು ವಾಪಸಾಗಿತ್ತು.

ನೇತ್ರ ಎಂಬ ಸ್ವದೇಶಿ ನಿರ್ಮಿತ ಡ್ರೋನ್ ಇತರ ದೇಶಗಳ ಯುದ್ಧ ವಿಮಾನಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತದೆ. ಯಾವುದೇ ಚಲನವಲನ ಕಂಡು ಬಂದರೂ ಸಹ ಕ್ಷಣ ಮಾತ್ರದಲ್ಲಿ ಸೂಚನೆ ರವಾನಿಸಿ, ರಾಡಾರ್ ಗಳನ್ನು ಎಚ್ಚರಿಸಿ ಪ್ರತಿ ದಾಳಿಯಾಗುವ ಯಾವುದೇ ಸಂಭಾವ್ಯತೆ ಇದ್ದರೇ ಬಹುಬೇಗನೇ ಎಚ್ಚೆತ್ತುಕೊಂಡು ಸಿದ್ದರಾಗಲು ಸಹಾಯ ಮಾಡುತ್ತದೆ.

ಇನ್ನು ಭಾರತದ ಆಪ್ತ ರಾಷ್ಟ್ರಗಳಲ್ಲಿ ಪ್ರಮುಖವೆನಿಸಿ ಕೊಂಡಿರುವ ಇಸ್ರೇಲ್ ನಿರ್ಮಿತ ಹೆರಾನ್ ಎಂಬ ಡ್ರೋನ್ ಭಾರತೀಯ ವಾಯುಪಡೆಯ ಸಹಾಯಕ್ಕೆ ನಿಂತಿತ್ತು. ಯಾವುದೇ ರಾಡಾರ್ ಗಳ ಕಣ್ಣಿಗೆ ಬೀಳದ ಹಾಗೆ ಕೆಲಸ ನಿರ್ವಹಿಸುವ ಈ ಡ್ರೋನ್ ಮಧ್ಯಮ ಎತ್ತರದಲ್ಲಿ ಹಾರುತ್ತದೆ ಹಾಗೂ ಮಾನವರಹಿತ ವೈಮಾನಿಕ ವಾಹನದಂತೆ ಕೆಲಸ ನಿರ್ವಹಿಸುವ ಈ ಡ್ರೋನ್ 10.5 ಕಿಲೋ ಮೀಟರ್ ಎತ್ತರದವರೆಗೂ ಹಾರಬಲ್ಲದು ಹಾಗೂ ಸತತವಾಗಿ 52 ಗಂಟೆಗಳ ಕಾಲ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಒಂದು ವೇಳೆ ಭೂಮಿಯಿಂದ ಸಂಪರ್ಕ ಕಡಿ ತಗೊಂಡರೇ ತಾನಾಗಿಯೇ ಭೂಮಿಗೆ ಇಳಿಯುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಎಲ್ಲಾ ರೀತಿಯ ವಾತಾವರಣ ದಲ್ಲಿಯೂ ಸಹ ಕೆಲಸ ಮಾಡುವ ತಾಕತ್ತು ಹೆರಾನ್ ಡ್ರೋನ್ ಗೆ ಇದೆ.

ಈ ಎರಡು ಡ್ರೋನ್ ಗಳ ನೆರವಿನಿಂದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿಸಿಕೊಂಡು ಮಿರಾಜ್ ಯುದ್ಧ ವಿಮಾನಗಳು ಮೊದಲೇ ಖಚಿತಪಡಿಸಿದ ಟಾರ್ಗೆಟ್ ಗಳ ಮೇಲೆ ದಾಳಿ ಮಾಡಿ ವಾಪಸ್ಸಾಗಿವೆ. ಅಷ್ಟೇ ಅಲ್ಲದೇ ಈ ಎರಡು ಡ್ರೋನ್ ಗಳು ಪಾಕ್ ಆರ್ಮಿ ಗೆ ತಿಳಿಯದಂತೇ ಮಾಹಿತಿ ಕಲೆಹಾಕಿ ರೇಡಾರ್ ಕಣ್ಣು ತಪ್ಪಿಸಿ ಗಡಿ ದಾಟಲು ಸಹಾಯ ಮಾಡಿವೆ. ಒಟ್ಟಿನಲ್ಲಿ ಈ ದಾಳಿಯಲ್ಲಿ ಪ್ರತಿಯೊಂದು ಚಿಕ್ಕ ಚಿಕ್ಕ ಅಂಶಗಳು ಸಹ ಬಹಳ ಮಹತ್ವವನ್ನು ಪಡೆದು ಕೊಂಡಿರುತ್ತವೆ. ಅದರಲ್ಲಿ ಈ ಎರಡು ಡ್ರೋನ್ ಗಳ ಪಾತ್ರಗಳು ಸಹ ಬಹಳ ಪ್ರಮುಖವೆನಿಸುತ್ತದೆ.