ಗುಡ್ ನ್ಯೂಸ್: ಕೊನೆ ಕ್ಷಣದಲ್ಲಿ ಏಷ್ಯಾ XI ತಂಡಕ್ಕೆ ಮತ್ತಿಬ್ಬರು ಭಾರತೀಯರು ! ಏಷ್ಯಾ XI ಹಾಗೂ ವಿಶ್ವ XI ತಂಡಗಳ ಘೋಷಣೆ ! ಯಾರೆಲ್ಲಾ ಆಟಗಾರರು ಆಟವಾಡಲಿದ್ದಾರೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಮೂರು ದಿನಗಳ ಹಿಂದೆ ಬಿಸಿಸಿಐ ಸಂಸ್ಥೆಯು ಏಷ್ಯಾ ತಂಡದ ಪರವಾಗಿ ಆಡಲು ಭಾರತ ತಂಡದಿಂದ ನಾಲ್ವರು ಆಟಗಾರರನ್ನು ಕಳುಹಿಸಲು ನಿರ್ಧಾರ ಮಾಡಿತ್ತು.

ಆದರೆ ಕೊನೆ ಕ್ಷಣದಲ್ಲಿ ಮತ್ತಿಬ್ಬರನ್ನು ಆಯ್ಕೆ ಮಾಡಿದ್ದು ಒಟ್ಟು 6 ಆಟಗಾರರನ್ನು ಏಷ್ಯಾ ಖಂಡದ ಪರವಾಗಿ ವಿಶ್ವ ಇಲೆವೆನ್ ತಂಡದ ನಡುವಿನ ಪಂದ್ಯದಲ್ಲಿ ಕಣಕ್ಕಿಳಿಸಲು ನಿರ್ಧಾರ ಮಾಡಿದೆ. ಆಟಗಾರರ ಪಂದ್ಯಗಳ ಸಮಯ ಹಾಗೂ ವಿಶ್ರಾಂತಿ ಇವೆಲ್ಲವನ್ನೂ ಗಮನದಲ್ಲಿಟ್ಟು ಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿದು ಬಂದಿದೆ. ಈ ಸುದ್ದಿಯನ್ನು ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಖಚಿತ ಪಡಿಸಿದ್ದು ಏಷ್ಯಾ ಇಲೆವೆನ್ ಹಾಗೂ ವಿಶ್ವ ಇಲೆವೆನ್ ತಂಡಗಳನ್ನು ಘೋಷಣೆ ಮಾಡಿದೆ. ಇದರಲ್ಲಿ 6 ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನದ ಕ್ರಿಕೆಟಿಗರು ಈ ತಂಡ ನೋಡಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಯಾಕೆಂದರೇ, ಬಿಸಿಸಿಐ ಸಂಸ್ಥೆಗೆ ಮಾತು ನೀಡಿದಂತೆ ಯಾವುದೇ ಪಾಕಿಸ್ತಾನಿ ಕ್ರಿಕೆಟಿಗರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ.

ಏಷ್ಯಾ ಇಲೆವೆನ್ ತಂಡ: ಕೆಎಲ್ ರಾಹುಲ್, ಶಿಖರ್ ಧವನ್, ತಮೀಮ್ ಇಕ್ಬಾಲ್, ವಿರಾಟ್ ಕೊಹ್ಲಿ(ನಾಯಕ), ಲಿಟಾನ್ ದಾಸ್, ರಿಷಭ್ ಪಂತ್, ಮುಶ್ಫಿಕುರ್ ರಹಮ್, ಥಿಸರಾ ಪೆರೆರಾ, ರಶೀದ್ ಖಾನ್, ಮುಸ್ತಾಫಿಜುರ್ ರಹಮಾನ್, ಸಂದೀಪ್ ಲಮಿಚಾನೆ(ನೇಪಾಳ), ಲಸಿತ್ ಮಾಲಿಂಗ, ಮೊಹಮ್ಮದ್ ಶಮೀ ಮತ್ತು ಉಲ್ಮಾನೇಜ್

ವಿಶ್ವ ಇಲೆವೆನ್ ತಂಡ: ಅಲೆಕ್ಸ್ ಹೇಲ್ಸ್, ಕ್ರಿಸ್ ಗೇಲ್, ಫ್ಯಾಫ್ ಡು ಪ್ಲೆಸಿಸ್ (ನಾಯಕ), ನಿಕೋಲಸ್ ಪೂರನ್, ಬ್ರೆಂಡನ್ ಟೇಲರ್, ಜಾನಿ ಬೈರ್‌ಸ್ಟೋವ್, ಕೀರನ್ ಪೊಲಾರ್ಡ್, ಆದಿಲ್ ರಶೀದ್, ಶೆಲ್ಡನ್ ಕಾಟ್ರೆಲ್, ಲುಂಗಿ ಎನ್‌ಜಿಡಿ, ಆಂಡ್ರ್ಯೂ ಟೈ, ಮಿಚೆಲ್ ಮೆಕ್‌ಕ್ಲೆನಾಘನ್.

Facebook Comments

Post Author: Ravi Yadav