ರಾಮಮಂದಿರ ದೇಣಿಗೆ ಕುರಿತು ಮಹತ್ವದ ನಿರ್ಣಯ ಘೋಷಿಸಿದ ನಿರ್ಮಾಣ ಟ್ರಸ್ಟ್ ! ಇಲ್ಲಿದೆ ಲೇಟೆಸ್ಟ್ ಅಪ್ಡೇಟ್ಸ್

ರಾಮಮಂದಿರ ದೇಣಿಗೆ ಕುರಿತು ಮಹತ್ವದ ನಿರ್ಣಯ ಘೋಷಿಸಿದ ನಿರ್ಮಾಣ ಟ್ರಸ್ಟ್ ! ಇಲ್ಲಿದೆ ಲೇಟೆಸ್ಟ್ ಅಪ್ಡೇಟ್ಸ್

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಪುಣ್ಯಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆರಂಭವಾಗಲಿದೆ. ಸುಮಾರು ಮೂರೂವರೆ ವರ್ಷಗಳ ಕಾಲ ನಿರ್ಮಾಣದ ಕಾರ್ಯ ನಡೆಯಲಿದ್ದು ಭವ್ಯವಾದ ರಾಮ ಮಂದಿರ ನಿರ್ಮಾಣ ಮಾಡಲು ಇಷ್ಟು ಸಮಯ ಸಾಕಾಗುವುದಿಲ್ಲ ಎಂಬ ಹೇಳಿಕೆಗಳು ಕೇಳಿಬಂದಿವೆ.

ಇದರ ಬೆನ್ನಲ್ಲೇ ದೇಣಿಗೆಯ ಕುರಿತು ಮಹತ್ವದ ಮಾತುಗಳನ್ನು ಆಡಿರುವ ರಾಮಮಂದಿರ ಟ್ರಸ್ಟ್ ಅಧ್ಯಕ್ಷ ಗೋಪಾಲದಾಸ್ ರವರು, ಯಾವುದೇ ರಾಜ್ಯಗಳು ತಮ್ಮ ಸರ್ಕಾರದ ಬೊಕ್ಕಸದಿಂದ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ಮುಂದಾದರೇ ನಾವು ಸ್ವೀಕರಣೆ ಮಾಡುವುದಿಲ್ಲ ಎಂಬ ಮಾಹಿತಿಯನ್ನು ಹೊರ ಹಾಕಿದ್ದಾರೆ. ನಿರ್ಮಾಣಕ್ಕೆ ಬೇಕಾದ ಪ್ರತಿಯೊಂದು ರೂಪಾಯಿ ಕೂಡ ಭಕ್ತರಿಂದ ದೇಣಿಗೆಯ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.

ಇನ್ನೂ ಯಾರೇ ಆಗಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಣೆ ಮಾಡುವಂತಿಲ್ಲ, ನಾವು ಒಂದು ಬ್ಯಾಂಕ್ ಖಾತೆ ತೆರೆದು ವೆಬ್ಸೈಟ್ ನಿರ್ಮಾಣ ಮಾಡಿ ಅದರಲ್ಲಿ ಸಂಪೂರ್ಣ ದಾಖಲೆಗಳನ್ನು ಒದಗಿಸುತ್ತೇವೆ. ನೀವು ನಮಗೆ ಕೊಡಿ, ನಾವು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತೇವೆ ಎಂದು ಯಾರಾದರೂ ಹಣ ಕೇಳಿದ್ದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು. ಇನ್ನು ಕೆಲವೇ ಕೆಲವು ದಿನಗಳಲ್ಲಿ ದೇಣಿಗೆ ಸಂಗ್ರಹ ಕಾರ್ಯ ಆರಂಭವಾಗಲಿದ್ದು ಬ್ಯಾಂಕುಗಳ ಜೊತೆ ಈಗಾಗಲೇ ಮಾತುಕತೆ ನಡೆಯುತ್ತಿದೆ, ಯಾಕೆಂದರೆ ಒಮ್ಮೆಲೆ ಹಣ ಹರಿದು ಬಂದರೇ ಬ್ಯಾಂಕಿನ ಸರ್ವರ್ ಡೌನ್ ಹಾಗೂ ಇನ್ನಿತರ ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾಗಬಾರದು ಎಂದು ಬಹಳ ಕಾಳಜಿ ವಹಿಸಿ ಮುಂದುವರೆಯ ಲಾಗುತ್ತಿದೆ ಎಂದು ತಿಳಿಸಿದ್ದಾರೆ.