ಜಗ್ಗೇಶ್, ದರ್ಶನ್ ಆಯ್ತು ! ಇಂದು ವೆಂಕಟೇಶ್ ಸಹಾಯಕ್ಕೆ ನಿಂತ ಮತ್ತೊಬ್ಬ ನಟ !

ಜಗ್ಗೇಶ್, ದರ್ಶನ್ ಆಯ್ತು ! ಇಂದು ವೆಂಕಟೇಶ್ ಸಹಾಯಕ್ಕೆ ನಿಂತ ಮತ್ತೊಬ್ಬ ನಟ !

ನಮಸ್ಕಾರ ಸ್ನೇಹಿತರೇ, ಕನ್ನಡದಲ್ಲಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ನಮ್ಮೆಲ್ಲರನ್ನು ರಂಜಿ ಸಿರುವ ವೆಂಕಟೇಶ್ ರವರ ಆರೋಗ್ಯಸ್ಥಿತಿ ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ಸರಿ ಇಲ್ಲ.

ವೆಂಕಟೇಶ್ ರವರ ಕುಟುಂಬವು ಆಸ್ಪತ್ರೆಯ ವೆಚ್ಚವನ್ನು ಭರಿಸಲಾಗಿದೆ ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ವಿಷಯ ತಿಳಿದ ಕೂಡಲೇ ನವರಸ ನಾಯಕ ಜಗ್ಗೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ತಮ್ಮ ಕೈಲಾದಷ್ಟು ಸಹಾಯ ಮಾಡಿ, ಚಿತ್ರರಂಗವೂ ವೆಂಕಟೇಶ್ ರವರ ಸಹಾಯಕ್ಕೆ ಬರಬೇಕು ಎಂದು ಸಾಮಾಜಿಕ ಜಾಲ ತಾಣಗಳ ಮೂಲಕ ಈ ಸುದ್ದಿಯನ್ನು ಹೊರಹಾಕಿದ್ದರು. ಅಂದುಕೊಂಡಂತೆ ಮೊದಲಿಗರಾಗಿ ಡಿ ಬಾಸ್ ಖ್ಯಾತಿಯ ದರ್ಶನ್ ರವರು ಜಗ್ಗೇಶ್ ಅವರಿಗೆ ಫೋನ್ ಮಾಡಿ ವೆಂಕಟೇಶ್ ರವರ ಆರೋಗ್ಯದ ಬಗ್ಗೆ ವಿಚಾರಿಸಿ 1 ಲಕ್ಷ ರೂ ಹಣ ನೀಡಿ ಇತರರಿಗೆ ಮಾದರಿಯಾಗಿದ್ದರು.

ಇದೀಗ ದರ್ಶನ್ ಹಾಗೂ ಜಗ್ಗೇಶ್ ರವರ ಬಳಿಕ ಕನ್ನಡದ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ರವರು ಮುಂದೆ ಬಂದಿದ್ದು, ತಮ್ಮದೇ ಆದ ಲೋಕೇಶ್ ಪ್ರೊಡಕ್ಷನ್ ಸಂಸ್ಥೆಯ ಮೂಲಕ 50,000 ರೂ ಧನಸಹಾಯ ಮಾಡಿದ್ದಾರೆ. ಈ ಮೂಲಕ ಸೃಜನ್ ಲೋಕೇಶ್ ರವರು ಮತ್ತೊಮ್ಮೆ ಜನರ ಮನಗೆದ್ದಿದ್ದು, ಮಾನವೀಯತೆ ಮೆರೆದಿದ್ದಾರೆ. ವೆಂಕಟೇಶ್ ರವರ ಸಹಾಯಕ್ಕೆ ನಿಂತ ಪ್ರತಿಯೊಬ್ಬರಿಗೂ ನಮ್ಮ ತಂಡದ ಪರವಾಗಿ ವಿಶೇಷ ವಿಶೇಷ ವಂದನೆಗಳು.