ಶ್ರೀ ಮಂಜುನಾಥ ಸ್ವಾಮಿಯ ಲಿಂಗವು ಧರ್ಮಸ್ತಳದಲ್ಲಿಯೇ ನೆಲೆಸಲು ಕಾರಣವೇನು ನಿಮಗೆ ಗೊತ್ತೇ??

ಶ್ರೀ ಮಂಜುನಾಥ ಸ್ವಾಮಿಯ ಲಿಂಗವು ಧರ್ಮಸ್ತಳದಲ್ಲಿಯೇ ನೆಲೆಸಲು ಕಾರಣವೇನು ನಿಮಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನೀವೆಲ್ಲರೂ ಒಮ್ಮೆಯಾದರೂ ನೇತ್ರಾವತಿ ನದಿಯಲ್ಲಿ ಮುಳುಗಿ ಪುಣ್ಯ ಕ್ಷೇತ್ರವಾದ ಧರ್ಮಸ್ಥಳದಲ್ಲಿ ನೆಲೆಸಿರುವ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿರುತ್ತೀರಾ. ಈ ದೇವಾಲಯಕ್ಕೆ ನೀವಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆ ಇಂದ ಭಕ್ತಾದಿಗಳು ಆಗಮಿಸುತ್ತಾರೆ. ಇಂತಹ ಪುಣ್ಯಕ್ಷೇತ್ರದ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ ಮಾಹಿತಿಗಳನ್ನು ಇಂದು ನಾವು ತಿಳಿದುಕೊಳ್ಳೋಣ. ಅದರಲ್ಲಿಯೂ ಪ್ರಮುಖವಾಗಿ ಶ್ರೀ ಮಂಜುನಾಥ ಸ್ವಾಮಿಯ ಲಿಂಗವು ಧರ್ಮಸ್ಥಳದಲ್ಲಿಯೇ ನೆಲೆಯೂರಲು ಕಾರಣವೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಸುಮಾರು ಏಳು ನೂರು ವರ್ಷಗಳ ಇತಿಹಾಸವಿರುವ ಈ ದೇವಾಲಯವು ಕಷ್ಟ ಎಂದು ತೆರಳುವ ಎಲ್ಲ ಭಕ್ತರ ಆರಾಧ್ಯದೈವ. ವರ್ಷಪೂರ್ತಿ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುವ ಭಕ್ತರಿಗೆ ಅನ್ನ ಪ್ರದಾನ ಮಾಡಿ, ಆಶ್ರಯ ನೀಡುವ ದೇವಾಲಯದಲ್ಲಿ ನೆಲೆಸಿರುವ ಸ್ವಾಮಿಯನ್ನು ಮಂಗಳೂರು ಜಿಲ್ಲೆಯ ಕದ್ರಿ ಎಂಬ ಪ್ರದೇಶದಿಂದ ತಂದು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಇದರ ನಡುವೆ ಶ್ರೀ ಮಂಜುನಾಥ ಸ್ವಾಮಿಯ ಲಿಂಗವು ಇಲ್ಲಿ ನೆಲೆಸಲು ಕಾರಣವೇನು ಎಂಬುದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ತಿಳಿದುಕೊಳ್ಳಲು ನಿಮ್ಮ ಬಳಿ ಸಮಯವಿದ್ದರೇ ಎರಡು ನಿಮಿಷ ಸಂಪೂರ್ಣ ಓದಿ.

ಒಮ್ಮೆ ಜಗತ್ತನ್ನು ಕಾಯುತ್ತಿರುವ ಈಶ್ವರನಿಗೆ ಭೂಮಿಯ ಮೇಲೆ ಧರ್ಮ ಕೊನೆಗೊಳ್ಳುತ್ತಿದೆ ಎಂಬ ಭಾವನೆ ಮನದಲ್ಲಿ ಮೂಡುತ್ತದೆ. ಇದು ಸತ್ಯವೇ ಎಂದು ಪರೀಕ್ಷೆ ಮಾಡಲು ಸಿದ್ಧನಾಗಿ ಈಶ್ವರನು ನಾಲ್ವರು ಪ್ರಮಥ ಗಣಗಳನ್ನು ಭೂಲೋಕಕ್ಕೆ ಕಳುಹಿಸಿದನು. ಇವರೇ ಕಾಳರಾಹು, ಕುಮಾರಸ್ವಾಮಿ, ಕಾಳರ್ಕಾಯ್, ಕನ್ಯಾಕುಮಾರಿ. ಇವರೆಲ್ಲರೂ ಭೂಮಿಯ ಮೇಲೆ ಧರ್ಮದ ಬಗ್ಗೆ ಮೂಡಿರುವ ಭಾವನೆಯನ್ನು ಪರೀಕ್ಷಿಸಲು ಭೂಲೋಕದಲ್ಲಿ ತಿರುಗಾಡುತ್ತಾ, ಧರ್ಮ, ಕರ್ಮ ಹಾಗೂ ಮಾನವೀಯತೆ ಗಳನ್ನು ಮರೆತಿರುವಂತಹ ಜನರನ್ನು ಶಿಕ್ಷಿಸುತ್ತಾ ಎಲ್ಲರೂ ಒಟ್ಟಾಗಿ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯ ದಡಕ್ಕೆ ಬರುತ್ತಾರೆ. ಹೀಗೆ ದಾನ ಧರ್ಮಗಳ ಪರಿಶೀಲನೆ ನಡೆಸುತ್ತಿದ್ದ ಸಮಯದಲ್ಲಿ ನೇತ್ರಾವತಿ ನದಿಯ ದಡದಲ್ಲಿ ಅಲ್ಲಿನ ನೆಲ್ಯಾಡಿ ಬೀಡಿನ ಒಡೆಯರಾಗಿರುವ ಬಿರ್ಮಣ್ಣ ಹೆಗ್ಗಡೆ ಹಾಗೂ ಅಮ್ಮು ಬಲ್ಲಾಳ್ತಿ ದಂಪತಿಗಳನ್ನು ಪರೀಕ್ಷಿಸುತ್ತಾರೆ. ಈ ದಂಪತಿಗಳ ದಾನ, ಧರ್ಮಗಳನ್ನು ಕಂಡು ಬಹಳ ಸಂತೋಷದಿಂದ ನಾಲ್ವರು ಅಚ್ಚರಿ ವ್ಯಕ್ತಪಡಿಸುತ್ತಾರೆ. ತದ ನಂತರ ಅಂದು ರಾತ್ರಿ ನೆಲ್ಯಾಡಿ ಬೀಡಿನಲ್ಲಿ ಮಲಗಿ ಮರು ಮುಂಜಾನೆ ತಮ್ಮ ಕೆಲಸವನ್ನು ಮುಂದುವರಿಸಲು ನಿರ್ಧಾರ ಮಾಡುತ್ತಾರೆ.

ಅದೇ ದಿನ ರಾತ್ರಿ ಬಿರ್ಮಣ್ಣ ಹೆಗಡೆಯವರಿಗೆ ಒಂದು ಕನಸು ಬೀಳುತ್ತದೆ, ತಾವು ಮಹಾನ್ ಮಹದೇವನ ಪ್ರಮಥ ಗಣಗಳು, ನಮಗೆ ನೆಲ್ಯಾಡಿ ಬೀಡಿನಲ್ಲಿ ನೆಲೆಸಲು ಇಷ್ಟವಾಗಿದೆ. ನೀವು ನಿಮ್ಮ ಮನೆಯನ್ನು ಬಿಟ್ಟು ಕೊಟ್ಟು ಬೇರೆ ಮನೆ ಕಟ್ಟಿಕೊಳ್ಳಿ ಎಂದು ಕನಸಿನಲ್ಲಿ ಆದೇಶ ನೀಡುತ್ತಾರೆ. ಮರುದಿನ ಬೆಳಿಗ್ಗೆ ಮುಂಜಾನೆ ಎದ್ದು ಹೆಗಡೆಯವರು ನೋಡಿದಾಗ ಯಾವುದೇ ದೈವಗಳು ಅಲ್ಲಿ ಇರುವುದಿಲ್ಲ. ಆದರೆ ಕನಸನ್ನು ನಿರ್ಲಕ್ಷ ಮಾಡದ ಹೆಗ್ಡೆ ರವರು, ದೈವಗಳು ಕನಸಿನಲ್ಲಿ ಆದೇಶ ನೀಡಿದಂತೆ 4 ದೈವಗಳಿಗೆ ಪ್ರತ್ಯೇಕವಾದ ಗುಡಿ ಕಟ್ಟಿಸಿ, ತಮ್ಮ ಮನೆಯನ್ನು ತೊರೆದು ನೆಲ್ಯಾಡಿ ಬೀಡನ್ನು ದೈವಗಳಿಗೆ ಬಿಟ್ಟು ಕೊಡುತ್ತಾರೆ.

ಈ ನಾಲ್ಕು ಗಣಗಳನ್ನು ಹೊರತುಪಡಿಸಿ ಶಿವನ ಪ್ರಮಥಗಣ ಗಳಲ್ಲಿ ಒಬ್ಬರಾಗಿರುವಂತಹ ಗಣಮಣಿ ಎಂಬಾತನು ಶಿವನ ಆದೇಶದಂತೆ ಭೂಮಿಗೆ ಬಂದು ನೆಲ್ಯಾಡಿ ಬೀಡಿನಲ್ಲಿ ವೇಷ ಮರೆಸಿಕೊಂಡು ಅಣ್ಣಪ್ಪ ಎಂಬ ಹೆಸರಿನಲ್ಲಿ ನೆಲೆಸಿರುತ್ತಾನೆ. 4 ದೇವಾಲಯಗಳು ನಿರ್ಮಾಣವಾದ ಬಳಿಕ ಕೆಲವು ಶಿವಯೋಗಿಗಳು ಹೆಗಡೆರವರ ನೆಲ್ಯಾಡಿ ಬೀಡಿಗೆ ಭೇಟಿ ನೀಡಿ, ಇವರೆಲ್ಲರೂ ಶಿವಯೋಗಿಗಳು ಎಂದು ಹೇಳುತ್ತಾರೆ. ಆದರೆ ಅಂದು ಶಿವಪೂಜೆ ಇಲ್ಲದೇ ತಾವು ಭೋಜನ ಸ್ವೀಕರಿಸುವುದಿಲ್ಲ ಎಂದು ಶಿವಯೋಗಿಗಳು ಖಡಾ ಖಂಡಿತವಾಗಿ ಹೇಳಿದಾಗ, ಹೆಗಡೆ ರವರು ಸುತ್ತಮುತ್ತ ಎಲ್ಲಿಯೂ ಶಿವನ ಸಾನಿಧ್ಯವೇ ಇಲ್ಲ, ಏನು ಮಾಡುವುದು ಎಂಬ ಚಿಂತೆಯಲ್ಲಿ ರಾತ್ರಿ ಕಳೆಯಲು ನಿರ್ಧಾರ ಮಾಡಿ ಮಲಗುತ್ತಾರೆ.

ಆಗ ಮತ್ತೊಮ್ಮೆ ಧರ್ಮ ದೇವತೆಗಳು ಹೆಗ್ಗಡೆಯವರ ಕನಸಿನಲ್ಲಿ ಪ್ರತ್ಯಕ್ಷರಾಗಿ, ಬಿಲ್ಯಾಡಿ ಬೀಡಿನಲ್ಲಿ ನೆಲೆಸಿರುವ ಅಣ್ಣಪ್ಪ ರವರನ್ನು ಈ ಕೂಡಲೇ ಮಂಗಳೂರು ಜಿಲ್ಲೆಯ ಕದ್ರಿ ಪ್ರದೇಶಕ್ಕೆ ಕಳುಹಿಸಿ ಶಿವಲಿಂಗವನ್ನು ತರಿಸುವಂತೆ ಪ್ರೇರಣೆ ನೀಡುತ್ತಾರೆ. ಈ ಕನಸಿನಿಂದ ಪ್ರೇರಣೆಗೊಂಡ ಹೆಗಡೆಯವರು ಅಣ್ಣಪ್ಪ ನನ್ನು ಕದ್ರಿಗೆ ತೆರಳಿ ಶಿವಲಿಂಗ ತೆಗೆದುಕೊಂಡು ಬರುವಂತೆ ಮನವಿ ಮಾಡುತ್ತಾರೆ. ಆದರೆ ಕದ್ರಿಯಲ್ಲಿ ಈ ಶಿವಲಿಂಗಕ್ಕೆ ನೂರಾರು ಪ್ರಮಥ ಗಣಗಳು ಕಾವಲಿರುತ್ತಾರೆ, ಎಲ್ಲರೂ ಅಣ್ಣಪ್ಪ ನನ್ನು ತಡೆಯಲು ಪ್ರಯತ್ನ ಪಡುತ್ತಾರೆ. ಆದರೆ ಎಲ್ಲಾ ಗಣಗಳನ್ನು ಮೀರಿಸಿ ಅಣ್ಣಪ್ಪ ರವರು ಒಂದು ರಾತ್ರಿ ಕಳೆಯುವ ಹೊತ್ತಿಗೆ ಶಿವಲಿಂಗವನ್ನು ತಂದು ನೆಲ್ಯಾಡಿ ಬೀಡಿನಲ್ಲಿ ಪ್ರತಿಷ್ಠಾಪಿಸುತ್ತಾರೆ.

ಹಾಗೆಯೇ ಅಣ್ಣಪ್ಪ ತಂದ ಶಿವ ಲಿಂಗವೇ ಇಂದು ನಮ್ಮೆಲ್ಲರ ನೆಚ್ಚಿನ ಆರಾಧ್ಯದೈವ ಶ್ರೀ ಮಂಜುನಾಥ ಸ್ವಾಮಿ ಲಿಂಗ. ಸಾಕ್ಷಾತ್ ಮಹೇಶ್ವರನೇ ಕರ್ನಾಟಕದ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಬಂದು ನೆಲೆಸಲು ಅಣ್ಣಪ್ಪ ರವರನ್ನು ಸೇವಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು‌. ಇದೆಲ್ಲಾ ಆದ ಬಳಿಕ ಹೆಗಡೆಯವರು ಅಣ್ಣಪ್ಪ ಎಂಬುವವರು ಸಾಮಾನ್ಯರಲ್ಲ ಎಂಬುದನ್ನು ಅರಿತುಕೊಂಡು ಪ್ರಶ್ನೆ ಮಾಡಿದಾಗ, ಅಣ್ಣಪ್ಪ ರವರು ತಮ್ಮ ನಿಜರೂಪವನ್ನು ತೋರಿಸಿ ನಾನು ಶಿವನ ಪ್ರಮಥಗಣ ಗಣಮಣಿ. ಈಗ ನಾನು ನಿನಗೆ ನಿಜ ಸ್ವರೂಪವನ್ನು ತೋರಿಸಿದ್ದೇನೆ ನನಗೂ ಒಂದು ಗುಡಿಕಟ್ಟಿಸಿ ಕೊಡು, ನಾನು ನಿರಂತರವಾಗಿ ನೆಲ್ಯಾಡಿ ಬೀಡನ್ನೂ ಹಾಗೂ ಹೆಗ್ಗಡೆ ಅವರ ಕುಟುಂಬವನ್ನು ಕಾಪಾಡಿಕೊಂಡು ಬರುತ್ತೇನೆ ಎಂದು ಹೇಳುತ್ತಾರೆ. ಇವರ ಆದೇಶದಂತೆ ಬಿರ್ಮಣ್ಣ ಹೆಗಡೆಯವರು ಅಣ್ಣಪ್ಪ ರವರಿಗೂ ಪ್ರತ್ಯೇಕ ದೇವಸ್ಥಾನ ನಿರ್ಮಾಣ ಮಾಡಿ, ಪುಣ್ಯಕ್ಷೇತ್ರ ಶ್ರೀ ಧರ್ಮಸ್ಥಳದಲ್ಲಿ ನೆಲೆಸುವಂತೆ ಮಾಡುತ್ತಾರೆ.