ಬಿಗ್ ಬ್ರೇಕಿಂಗ್: ನೌಕಾಪಡೆಗೆ ಅತ್ಯಾಧುನಿಕ ವಿಶೇಷ ಬ್ರಹ್ಮಾಸ್ತ್ರ ಗಳು ಸೇರ್ಪಡೆ ! ಈ ಬ್ರಹ್ಮಾಸ್ತ್ರ ಗಳ ವಿಶೇಷತೆ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭಾರತ ದೇಶವೂ ತನ್ನ ಮೂರು ದಿಕ್ಕುಗಳ ಕಡೆಗೆ ಸಮುದ್ರವನ್ನು ಹೊಂದಿದೆ. ಆದ್ದರಿಂದ ಭಾರತೀಯ ನೌಕಾಪಡೆಯು ದೇಶದ ಭದ್ರತೆ ದೃಷ್ಟಿಯಿಂದ ಮಹತ್ವದ ಪಾತ್ರವಹಿಸುತ್ತವೆ.

ಇದೀಗ ಇದೇ ನೌಕಾಪಡೆಗೆ ಹೊಸ 24 ಬ್ರಹ್ಮಾಸ್ತ್ರ ಗಳು ಸೇರ್ಪಡೆಗೊಳ್ಳುವ ಮೂಲಕ ನೌಕಾಪಡೆಯು ಈ ಎಂದಿಗಿಂತಲೂ ಮತ್ತಷ್ಟು ಬಲಿಷ್ಠವಾಗಲಿದೆ. ಆದರೆ ಇಲ್ಲಿನ ವಿಪರ್ಯಾಸವೇನು ಗೊತ್ತಾ? ದಿನದ 24 ಗಂಟೆಗಳು ಸುದ್ದಿ ಪ್ರಸಾರ ಮಾಡುವ ಯಾವ ಮಾಧ್ಯಮಗಳಿಗೂ ಈ ಸುದ್ದಿ ಕಾಣಿಸುತ್ತಿಲ್ಲ. ನಮ್ಮ ಸೇನೆ ದಿನೇ ದಿನೇ ಬಲಿಷ್ಠ ಗೊಳ್ಳುತ್ತಿದೆ ಎಂದರೇ, ಅದಕ್ಕಿಂತ ಸಿಹಿ ಸುದ್ದಿ ಬೇರೆ ಏನು ಬೇಕು? ಅಲ್ಲವಾ?

ಒಟ್ಟಿನಲ್ಲಿ ಅದೇನೇ ಆಗಲಿ ಇದೀಗ ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿಯು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಒಟ್ಟು 2.6 ಬಿಲಿಯನ್ ಡಾಲರ್ಗಳ ಮೌಲ್ಯದ ಒಪ್ಪಂದ ಇದಾಗಿದ್ದು ಅತ್ಯಾಧುನಿಕ ಬಹುಪಯೋಗಿ ಎಂಎಚ್-60 ರೋಮಿಯೋ ಸೀಹಾಕ್ ಹೆಲಿಕ್ಯಾಪ್ಟರ್ ಗಳನ್ನು ಖರೀದಿಸಲು ಮುಂದಾಗಿದೆ. ಅಷ್ಟಕ್ಕೂ ಈ ವಿಶೇಷ ಹೆಲಿಕಾಪ್ಟರ್ಗಳ ವಿಶೇಷತೆ ಏನು ಗೊತ್ತಾ?? ತಿಳಿಯಲು ಕೆಳಗಡೆ ಓದಿ

ಈ ಹೆಲಿಕ್ಯಾಪ್ಟರ್ ಗಳು ಸಮುದ್ರದ ಆಳದಲ್ಲಿ ಎಷ್ಟೇ ಸಾವಿರಾರು ಅಡಿಗಳಲ್ಲಿ ಜಲಂತರ್ಗಾಮಿ ನೌಕೆಗಳು ಅಡಗಿ ಕುಳಿತಿದ್ದರೂ ಕ್ಷಣ ಮಾತ್ರದಲ್ಲಿ ಕಂಡು ಹಿಡಿದು ಉಡೀಸ್ ಮಾಡಿ ಬಿಡುತ್ತವೆ. ಸಮುದ್ರದಲ್ಲಿನ ಶೋಧ ಮತ್ತು ಯಾವುದೇ ರೀತಿಯ ರಕ್ಷಣಾ ಕಾರ್ಯಚರಣೆ ಗಳಿಗೆ ಇವುಗಳು ಬಹಳ ಉಪಯುಕ್ತವಾಗಿದೆ, ಅಷ್ಟೇ ಅಲ್ಲದೇ ಕಿಲೋಮೀಟರ್ ದೂರ ಗಳಲ್ಲಿ ಚಲಿಸುತ್ತಿರುವ ಚಿಕ್ಕ ಚಿಕ್ಕ ದೋಣಿಗಳನ್ನು ಕೂಡ ನಿಖರವಾಗಿ ಪತ್ತೆ ಮಾಡಿ ಉಡೀಸ್ ಮಾಡಲು ಉಪಯುಕ್ತವಾಗಿದೆ. ವಿಶೇಷವಾಗಿ ಅತ್ಯಾಧುನಿಕ ಕ್ಷಿಪಣಿಗಳು ಹಾಗೂ ಟಾರ್ಪಿಡೊ ಗಳನ್ನು ತನ್ನ ತೆಕ್ಕೆಯಲ್ಲಿ ಹೊತ್ತುಕೊಂಡು ಹಾರಬಲ್ಲದು, ಇದೇ ಹೆಲಿಕ್ಯಾಪ್ಟರ್ ಗಳನ್ನು ಅಮೆರಿಕ ನೌಕಾಪಡೆಯು ಜಲಂತರ್ಗಾಮಿ ಹಾಗೂ ಮೇಲ್ಮೈ ಹಡಗುಗಳನ್ನು ತಡೆಯಲು ಬಳಸುತ್ತದೆ ಎಂಬುದು ವಿಶೇಷ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಹೆಲಿಕ್ಯಾಪ್ಟರ್ ಗಳು ಇನ್ನು ಕೆಲವೇ ಕೆಲವು ದಿನಗಳಲ್ಲಿ ಭಾರತೀಯ ನೌಕಾಪಡೆಗೆ ಸೇರಿಕೊಳ್ಳಲಿವೆ. ನಮ್ಮ ದೇಶ, ನಮ್ಮ ಸೇನೆ ನಮ್ಮ ಹೆಮ್ಮೆ, ದಿನೇದಿನೇ ಇನ್ನಷ್ಟು ಬಲಿಷ್ಠವಾಗಿ ಎಂದು ಆಶಿಸೋಣ.

Facebook Comments

Post Author: RAVI