ಈತನೇ ವಿಶ್ವ ಶ್ರೇಷ್ಠ ಆಟಗಾರ ! ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಲಿಯಮ್ಸನ್ ಆಯ್ಕೆ ಮಾಡಿದ ಭಾರತೀಯ ಆಟಗಾರ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ತಿಂಗಳುಗಳಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಡೆಯುತ್ತಿದೆ. ಇದರಲ್ಲಿ ಭಾರತ ತಂಡವು ಅದ್ಭುತ ಪ್ರದರ್ಶನ ನೀಡಿ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿದೆ.

ವಿಶ್ವದ ಬಲಾಡ್ಯ ತಂಡಗಳಿಗೂ ಮಣ್ಣುಮುಕ್ಕಿಸಿ ಅಗ್ರಸ್ಥಾನದಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಭಾರತ ತಂಡವು ಎಲ್ಲಾ ವಿಭಾಗಗಳಲ್ಲೂ ಶಕ್ತಿಯುತವಾಗಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಮತ್ತೊಂದು ಸರಣಿ ಆರಂಭವಾಗಲಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ 2 ಟೆಸ್ಟ್ ಪಂದ್ಯಗಳು ನಡೆಯಲಿವೆ. ಇದೀಗ ಇದರ ಕುರಿತು ಮಾತನಾಡಿರುವ ನ್ಯೂಜಿಲೆಂಡ್ ತಂಡದ ಅಪ್ರತಿಮ ಆಟಗಾರರಲ್ಲಿ ಒಬ್ಬರಾಗಿರುವ ನಾಯಕ ಕೇನ್ ವಿಲಿಯಮ್ಸನ್ ರವರು ಪತ್ರಿಕಾಗೋಷ್ಠಿ ನಡೆಸಿದಾಗ ಪತ್ರಕರ್ತರೊಬ್ಬರು ಭಾರತ ತಂಡದ ಬಗ್ಗೆ ಹಾಗೂ ಯಾರು ವಿಶ್ವ ಶ್ರೇಷ್ಠ ಆಟಗಾರ ಎಂದು ಪ್ರಶ್ನೆ ಮಾಡಿದಾಗ ವಿಲಿಯಮ್ಸನ್ ರವರ ಆಯ್ಕೆ ಒಬ್ಬ ಭಾರತೀಯರಾಗಿದ್ದರು. ಅಷ್ಟಕ್ಕೂ ಅವರು ಯಾರು ಗೊತ್ತಾ ತಿಳಿಯಲು ಕೆಳಗಡೆ ಓದಿ !

ಮಾಧ್ಯಮದವರೊಂದಿಗೆ ಮಾತನಾಡಿದ ಕೇನ್ ವಿಲಿಯಮ್ಸನ್ ರವರು ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಅಗ್ರಸ್ಥಾನ ಪಡೆದು ಕೊಂಡಿದೆ. ಬೌಲಿಂಗ್ ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಆಟಗಾರರನ್ನು ತೆಕ್ಕೆಯಲ್ಲಿ ಇಟ್ಟಿಕೊಂಡಿದೆ. ಇನ್ನೂ ಮೂರು ಮಾದರಿಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ರವರು ಅತ್ಯುತ್ತಮ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ವಿಶ್ವದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಕುರಿತು ಯಾವುದೇ ಅನುಮಾನವಿಲ್ಲದೆ ನಾವು ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಬಹುದು ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಕೇನ್ ವಿಲಿಯಮ್ಸನ್ ರವರ ಮಾತುಗಳು ಭಾರಿ ಸದ್ದು ಮಾಡಿವೆ. ಇದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಮರೆಯಬೇಡಿ.

Facebook Comments

Post Author: RAVI