ರಣಜಿ ಕ್ವಾಟರ್ ಫೈನಲ್ ತಲುಪಿರುವ ಕರ್ನಾಟಕಕ್ಕೆ ಒಂದೆಡೆ ಗುಡ್ ನ್ಯೂಸ್ ! ಮತ್ತೊಂದೆಡೆ ನಿರಾಸೆ ! ಯಾಕೆ ಗೊತ್ತಾ?

ರಣಜಿ ಕ್ವಾಟರ್ ಫೈನಲ್ ತಲುಪಿರುವ ಕರ್ನಾಟಕಕ್ಕೆ ಒಂದೆಡೆ ಗುಡ್ ನ್ಯೂಸ್ ! ಮತ್ತೊಂದೆಡೆ ನಿರಾಸೆ ! ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕರ್ನಾಟಕ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸುವ ಮಹತ್ವಾಕಾಂಕ್ಷೆಯನ್ನು ಹೊತ್ತುಕೊಂಡು ಇದೀಗ ನಡೆಯುತ್ತಿರುವ ರಣಜಿ ಟ್ರೋಫಿಯ ಸರಣಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದೆ.

ಇದೀಗ ಜಮ್ಮು ಹಾಗೂ ಕಾಶ್ಮೀರ ದ ವಿರುದ್ಧ ರಣಜಿ ಟ್ರೋಫಿ ಕ್ವಾಟರ್ ಫೈನಲ್ ಪಂದ್ಯವಾಡಲು ಸಿದ್ಧವಾಗಿರುವ ತಂಡವನ್ನು ಆಯ್ಕೆ ಮಾಡಿದ್ದು, ನ್ಯೂಜಿಲೆಂಡ್ ಪ್ರವಾಸದಲ್ಲಿ ನಿರತವಾಗಿದ್ದ ಕೆ ಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಕರ್ನಾಟಕ ರಾಜ್ಯದ ತಂಡವನ್ನು ಸೇರಿಕೊಳ್ಳುತ್ತಾರೆ ಎಂಬ ಮಾಹಿತಿಗಳು ಕೇಳಿ ಬಂದಿದ್ದವು. ಹೀಗೆ ನಡೆದಿದ್ದರೇ, ಕರ್ನಾಟಕ ತಂಡ ಮತ್ತಷ್ಟು ಬಲಿಷ್ಠವಾಗುತಿತ್ತು. ಇದೀಗ ತಂಡ ಪ್ರಕಟಣೆ ಯಾಗಿದ್ದು ಬ್ಯಾಟ್ಸ್ಮನ್ ಕೋಟಾದಲ್ಲಿ ಮನೀಶ್ ಪಾಂಡೆ ರವರು ಕರ್ನಾಟಕ ತಂಡಕ್ಕೆ ವಾಪಸಾಗಿದ್ದಾರೆ, ಆದರೆ ರಾಹುಲ್ ರವರು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿಲ್ಲ.

ಅಷ್ಟಕ್ಕೂ ಕೆ ಎಲ್ ರಾಹುಲ್ ಯಾಕೆ ಆಯ್ಕೆ ಆಗಿಲ್ಲ?

ನ್ಯೂಜಿಲೆಂಡ್ ಪ್ರವಾಸದಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿ ಭಾರತ ತಂಡವನ್ನು ಗೆಲುವಿನ ದಡ ಮುಟ್ಟಿಸುವುದುರಲ್ಲಿ ಪ್ರಮುಖ ಪಾತ್ರವಹಿಸಿ, ಸೋಲುಂಡ ಪಂದ್ಯಗಳಲ್ಲಿಯೂ ಗಮನೀಯ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ರವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಭಾರತ ತಂಡದ ಪರವಾಗಿ ತರಬೇತಿಯಲ್ಲಿ ಭಾಗಿಯಾಗ ಬೇಕಾಗಿದ್ದ ಕಾರಣ ಕೊನೆಕ್ಷಣದಲ್ಲಿ ಕರ್ನಾಟಕ ತಂಡದ ಭಾಗವಾಗಿಲ್ಲ. ಇಲ್ಲಿಯವರೆಗೂ ಎಲ್ಲರೂ ಕೆ ಎಲ್ ರಾಹುಲ್ ರವರು ಕರ್ನಾಟಕ ತಂಡ ಸೇರಿಕೊಳ್ಳುತ್ತಾರೆ ಎಂದು ಲೆಕ್ಕಾಚಾರ ಹಾಕಿ ಕೊಂಡಿದ್ದರು. ಆದರೆ ದಿಡೀರ್ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ಧಾರ ತೆಗೆದುಕೊಂಡಿದ್ದು, ರಾಹುಲ್ ರವರು ಕರ್ನಾಟಕ ತಂಡದಿಂದ ಹೊರಗುಳಿದಿದ್ದಾರೆ.