ಪಾಕಿಸ್ತಾನಕ್ಕೆ ಮರ್ಮಾಘಾತ ! ಭಾರತಕ್ಕೆ ಐತಿಹಾಸಿಕ ವಿಜಯ !ಕಾಶ್ಮೀರದ ವಿಚಾರದಲ್ಲಿ ಅಜಿತ್ ದೋವಲ್ ರವರ ಜೊತೆ ಪ್ರತಿಕ್ರಿಯೆ ಹಂಚಿಕೊಂಡ ಯುರೋಪಿಯನ್ ಒಕ್ಕೂಟ ವರದಿ ನೀಡಿದ್ದೇನು ಗೊತ್ತಾ??

ಪಾಕಿಸ್ತಾನಕ್ಕೆ ಮರ್ಮಾಘಾತ ! ಭಾರತಕ್ಕೆ ಐತಿಹಾಸಿಕ ವಿಜಯ !ಕಾಶ್ಮೀರದ ವಿಚಾರದಲ್ಲಿ ಅಜಿತ್ ದೋವಲ್ ರವರ ಜೊತೆ ಪ್ರತಿಕ್ರಿಯೆ ಹಂಚಿಕೊಂಡ ಯುರೋಪಿಯನ್ ಒಕ್ಕೂಟ ವರದಿ ನೀಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭಾರತದ ಆಂತರಿಕ ವಿಚಾರವಾದ ಜಮ್ಮು ಹಾಗೂ ಕಾಶ್ಮೀರ ವಿಷಯದಲ್ಲಿ ಕೇಂದ್ರ ಸರ್ಕಾರವು ತೆಗೆದುಕೊಂಡ ನಿರ್ಣಯವನ್ನು ಪ್ರಶ್ನಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆ ನಡೆಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗ ಎದುರಾಗಿದೆ.

ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನ ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಮ್ಮು ಹಾಗೂ ಕಾಶ್ಮೀರ ದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎಗ್ಗಿಲ್ಲದಂತೆ ನಡೆಯುತ್ತಿದೆ, ಜಮ್ಮು ಹಾಗೂ ಕಾಶ್ಮೀರ ದ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪ ಮಾಡಿತ್ತು. ಅಷ್ಟೇ ಅಲ್ಲದೆ ಯುರೋಪಿಯನ್ ಒಕ್ಕೂಟದ ಹಲವಾರು ಸದಸ್ಯರನ್ನು ಜಮ್ಮು ಹಾಗೂ ಕಾಶ್ಮೀರ ಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ವಂತೆ ಮನವಿ ಮಾಡಿತ್ತು, ಇಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಇದೇ ರೀತಿ ಆರೋಪ ಮಾಡಿದ್ದವು. ಕೂಡಲೇ ಕೇಂದ್ರ ಸರ್ಕಾರವು ಯಾವ ನಿಯೋಗ ವಾದರೂ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಿ ಎಂದು ಅವಕಾಶ ಕಲ್ಪಿಸಿತ್ತು.

ಇದೀಗ ಎರಡು ದಿನಗಳ ಹಿಂದೆ ಜಮ್ಮು-ಕಾಶ್ಮೀರಕ್ಕೆ ಎರಡನೇ ಬಾರಿ ಬೇಟಿ ನೀಡಿದ 25 ವಿದೇಶಿ ರಾಯಭಾರಿಗಳು ತಮ್ಮ ವಿಮರ್ಶೆ ಹಾಗೂ ಪ್ರವಾಸದ ಅನುಭವಗಳನ್ನು ಹಂಚಿಕೊಂಡು ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಗಿರುವ ಅಜಿತ್ ದೋವಲ್ ಅವರ ಬಳಿ, ಜಮ್ಮು ಹಾಗೂ ಕಾಶ್ಮೀರ ದಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಬಳಿಕ ಸಾಮಾನ್ಯ ಸ್ಥಿತಿಯನ್ನು ಮರಳಿ ಸ್ಥಾಪಿಸಲು ಕೇಂದ್ರ ಸರ್ಕಾರ ತೆಗೆದುಕೊಂಡು ನಿರ್ಧಾರಗಳನ್ನು ಶ್ಲಾಘಿಸಿದೆ, ಗಂಭೀರವಾಗಿ ಭದ್ರತಾ ಕಾಳಜಿಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ, ಕೆಲವು ಕಡೆ ಕೆಲವು ನಿರ್ಬಂಧಗಳು ಇವೆ ಆದರೆ ಕೇವಲ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ನಿರ್ಬಂಧಗಳನ್ನು ಹೇರಲಾಗಿದೆ, ಇದರಲ್ಲಿ ಯಾವುದೇ ತಪ್ಪಿಲ್ಲ. ಕೇಂದ್ರ ಸರ್ಕಾರವು ತ್ವರಿತವಾಗಿ ಈ ನಿರ್ಬಂಧಗಳನ್ನು ಕೂಡ ತೆಗೆದರೆ ಒಳಿತು, ಆದರೆ ಪರಿಸ್ಥಿತಿಯನ್ನು ಅವಲೋಕಿಸಿ ನೋಡಿದರೇ ನಿರ್ಬಂಧ ಏರುವುದರಲ್ಲಿ ತಪ್ಪಿಲ್ಲ ಎಂದು ವರದಿ ನೀಡಿದೆ. ಈ ಮೂಲಕ ಮತ್ತೊಮ್ಮೆ ಪಾಕಿಸ್ತಾನ ದೇಶಕ್ಕೆ ಭಾರಿ ಮುಖಭಂಗ ಎದುರಾಗಿದ್ದು ಎರಡನೇ ಬಾರಿಗೆ ಕೂಡ ಯುರೋಪಿಯನ್ ಒಕ್ಕೂಟ ಭಾರತಕ್ಕೆ ಕ್ಲೀನ್ ಚಿಟ್ ನೀಡಿದೆ