ಮೋದಿ ಕಾರ್ಯಕ್ಕೆ ಬಂತು ಚೀನಾ ದೇಶದಿಂದ ಮೆಚ್ಚುಗೆ ! ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದ ಚೀನಾ ದೇಶ ! ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸದಾ ವಿಶ್ವ ಬ್ಯಾಂಕುಗಳ ಮುಂದೆ ಸಾಲ ಕೇಳಿ, ಇತರ ದೇಶಗಳ ಬಳಿ ಹಲವಾರು ರೀತಿಯ ಸಹಾಯ ಪಡೆದು ಕೊಳ್ಳುತ್ತಿದ್ದ ಭಾರತ ದೇಶ, ಇದೀಗ ಬದಲಾಗಿದೆ.

ಹೌದು, ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಬಾರಿ ಹೆಚ್ಚುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ರೀತಿಯ ಘಟನೆ ಇದೀಗ ನಡೆದಿದ್ದು ನೆರೆಯ ರಾಷ್ಟ್ರವಾದ ಚೀನಾ ದೇಶವು ಕೋರೋನ ವೈರಸ್ನಿಂದ ತತ್ತರಿಸಿದೆ, ಯಾವುದೇ ಅಧಿಕೃತ ಮಾಹಿತಿಗಳು ಚೀನಾ ದೇಶದಿಂದ ಹೊರ ಬೀಳುತ್ತಿಲ್ಲ, ಕೆಲವು ಲೆಕ್ಕಾಚಾರದ ಪ್ರಕಾರ 25ಕ್ಕೂ ಹೆಚ್ಚು ಸಾವಿರ ಜನ ಹೀಗಾಗಲೇ ಕೋರೋನ ವೈರಸ್ ಗೆ ಭೂಮಿಯನ್ನು ತೊರೆದಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಆದರೆ ಚೀನಾ ದೇಶವು ಇಲ್ಲಾ 900 ಕ್ಕೂ ಹೆಚ್ಚು ಜನ ಈಗಾಗಲೇ ಸಾವನ್ನಪ್ಪಿದ್ದು, ಇನ್ನು 45 ಸಾವಿರ ಜನ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳುತ್ತಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದ ನರೇಂದ್ರ ಮೋದಿ ಸರ್ಕಾರವು ಚೀನಾ ದೇಶಕ್ಕೆ ಅಗತ್ಯವಿರುವ ಸಹಾಯ ಮಾಡಲು ಭಾರತ ದೇಶ ಸಿದ್ಧವಾಗಿದೆ ಎಂದು ಹೇಳಿಕೆ ನೀಡಿ ಪತ್ರ ಬರೆದಿದ್ದರು.

ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಹೊಸ ಆದೇಶ ಹೊರಡಿಸಿದ ನರೇಂದ್ರ ಮೋದಿರವರು ಹಲವಾರು ವರ್ಷಗಳ ಹಿಂದೆ ಭಾರತ ದೇಶದಿಂದ ಮಾಸ್ಕ್ ಹಾಗೂ ಇತರ ವೈಯಕ್ತಿಕ ರಕ್ಷಣಾ ಪರಿಕರಗಳನ್ನು ಚೀನಾ ದೇಶಕ್ಕೆ ರಫ್ತು ಮಾಡುವ ಸಲುವಾಗಿ ಹೇರಿದ್ದ ನಿರ್ಬಂಧವನ್ನು ತೆಗೆದು ಹಾಕಿದರು. ಹಲವಾರು ದಿನಗಳಿಂದ ಚೀನಾ ದೇಶದಲ್ಲಿ ಮಾಸ್ಕ್, ಗ್ಲೋಸ್, ಶಸ್ತ್ರಚಿಕಿತ್ಸೆ ಮಾಡುವಾಗ ಉಪಯೋಗಿಸುವಂತಹ ಪರಿಕರಗಳ ಅಭಾವತೆ ಎದ್ದುಕಾಣುತ್ತಿತ್ತು. ನರೇಂದ್ರ ಮೋದಿ ಅವರು ಈ ನಿರ್ಬಂಧ ತೆಗೆದ ಕಾರಣ ಭಾರತ ದೇಶದ ಕಂಪನಿಗಳು ಚೀನಾ ದೇಶಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ರವಾನೆ ಮಾಡಿದ್ದಾರೆ, ಇದರ ಕುರಿತು ಇದೀಗ ಮಾತನಾಡಿರುವ ಚೀನಾ ದೇಶದ ವಿದೇಶಾಂಗ ಸಚಿವಾಲಯ ವಕ್ತಾರ ಗೆಂಗ್ ಶುವಾಂಗ್ ಅವರು, ಭಾರತ ದೇಶದ ಈ ಸದ್ಭಾವನೆಯ ಕಾರ್ಯ ಚೀನಾ ದೇಶದ ಜೊತೆಗಿನ ಸ್ನೇಹವನ್ನು ಅನಾವರಣಗೊಳಿಸಿದೆ. ಕೋರೋನ ವೈರಸ್ ವಿರುದ್ಧ ಚೀನಾ ದೇಶದ ಹೋರಾಟಕ್ಕೆ ಕೈಜೋಡಿಸಿದ್ದಕ್ಕಾಗಿ ನಾವು ಭಾರತ ದೇಶಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ, ಮತ್ತು ಪ್ರಶಂಸೆ ಮಾಡುತ್ತಿದ್ದೇವೆ ನಮ್ಮ ಸ್ನೇಹ ಹೀಗೆ ಮುಂದುವರೆಯಲಿ ಎಂದು ಹೇಳಿಕೆ ನೀಡಿದ್ದಾರೆ.

Facebook Comments

Post Author: Ravi Yadav