ಪಾಕಿಸ್ತಾನಕ್ಕೆ ಮರ್ಮಘಾತ ! ಕೊನೆ ಕ್ಷಣದಲ್ಲಿ ದೆಹಲಿಯಲ್ಲಿ ಕೂತು ಸೌದಿ ಅರೇಬಿಯಾದಲ್ಲಿ ಆಟ ಮುಗಿಸಿದ ಮೋದಿ ! ಮತ್ತೊಮ್ಮೆ ಭರ್ಜರಿ ಜಯ ! ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಜಮ್ಮು ಹಾಗೂ ಕಾಶ್ಮೀರವು ಭಾರತದ ಆಂತರಿಕ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ, ಯಾವುದೋ ಒಂದು ನೆರೆಯ ರಾಷ್ಟ್ರ ಬಾಯಿ ಬಡಿದುಕೊಂಡರೇ ಅಥವಾ ದೇಶದಲ್ಲಿ ಇರುವ ಕೆಲವು ಗಂಜಿ ಗಿರಾಕಿಗಳು ಹೇಳಿದ ಮಾತ್ರಕ್ಕೆ ಜಮ್ಮು ಹಾಗೂ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನವನ್ನು ಮೂಗು ತೂರಿಸಲು ಬಿಡಲು ಸಾಧ್ಯವೇ?

ಈ ವಿಚಾರದಲ್ಲಿ ಮೊದಲಿನಿಂದಲೂ ಹಲವಾರು ಬಾರಿ ನರೇಂದ್ರ ಮೋದಿ ರವರು ಪಾಕಿಸ್ತಾನ ದೇಶಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದರೂ ಕೂಡ, ಸುಖಾಸುಮ್ಮನೆ ಪಾಕಿಸ್ತಾನ ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯವನ್ನು ಕೆದಕಿ ಬಾರಿ ಮುಜುಗರಕ್ಕೆ ಒಳಗಾಗುತ್ತಿದೆ. ಇದೀಗ ಕೆಲವು ದಿನಗಳ ಹಿಂದಷ್ಟೇ ಇಸ್ಲಾಮಿಕ್ ಸಹಕಾರ ಸಂಘಟನೆಯ ಸಭೆಯಲ್ಲಿ ಜಮ್ಮು ಹಾಗೂ ಕಾಶ್ಮೀರ ದ ಕುರಿತು ಪ್ರಸ್ತಾವನೆ ಮಂಡಿಸಬೇಕು ಎಂದು ಇಮ್ರಾನ್ ಖಾನ್ ರವರು ಸೌದಿ ಅರೇಬಿಯಾ ದೇಶದ ಬಳಿ ಮನವಿ ಮಾಡಿದ್ದರು. ಇದಕ್ಕೆ ಸೌದಿ ಅರೇಬಿಯಾ ದೇಶ ಒಪ್ಪಿಕೊಂಡಿದೆ, ಇದು ಪಾಕಿಸ್ತಾನ ದೇಶಕ್ಕೆ ಸಿಕ್ಕ ಗೆಲುವು ಎಂದು ಇಮ್ರಾನ್ ಖಾನ್ ರವರು ಕೂಡ ಖಚಿತಪಡಿಸಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಇಸ್ಲಾಮಿಕ್ ಸಹಕಾರ ಸಂಘ ಟನೆಯಲ್ಲಿ ಭಾರತದ ವಿರುದ್ಧ ಪ್ರಸ್ತಾವನೆ ಮಂಡಿಸಲು ಪಾಕಿಸ್ತಾನ ದೇಶ ಎಲ್ಲ ತಯಾರಿ ನಡೆಸಿತ್ತು.

ಆದರೆ ಇದೀಗ ಸೌದಿ ಅರೇಬಿಯಾ ದೇಶವು ಇದ್ದಕ್ಕಿದ್ದ ಹಾಗೆ ಯು-ಟರ್ನ್ ಹೊಡೆದಿದ್ದು, ಪಾಕಿಸ್ತಾನ ದೇಶದ ಪ್ರಧಾನಿ ಇಮ್ರಾನ್ ಖಾನ್ ರವರು ಸಲ್ಲಿಸಿರುವ ಮನವಿಗೆ ಅಧಿಕೃತ ಆದೇಶ ಹೊರಡಿಸಿ ಯಾವುದೇ ಕಾರಣಕ್ಕೂ ಜಮ್ಮು ಹಾಗೂ ಕಾಶ್ಮೀರ ವಿಚಾರವನ್ನು ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ ಪ್ರಸ್ತಾವನೆ ಮಾಡುವುದಿಲ್ಲ ಎಂದು ಇಮ್ರಾನ್ ಖಾನ್ ರವರಿಗೆ ಶಾಕ್ ನೀಡಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪಾಕಿಸ್ತಾನ ದೇಶಕ್ಕೆ ಭಾರಿ ಮುಜುಗರ ಉಂಟಾಗಿದ್ದು, ದೆಹಲಿಯಲ್ಲಿ ಕೂತು ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ಅವರಿಗೆ ಮತ್ತೊಂದು ರಾಜತಾಂತ್ರಿಕ ಗೆಲುವು ದಕ್ಕಿದೆ. ಇಷ್ಟೆಲ್ಲಾ ಆದ ಬಳಿಕ ವಾದರೂ ಪಾಕಿಸ್ತಾನ ದೇಶ ಹಾಗೂ ಕೆಲವು ಗಂಜಿ ಗಿರಾಕಿಗಳು ಜಮ್ಮು ಹಾಗೂ ಕಾಶ್ಮೀರ ಭಾರತದ ಆಂತರಿಕ ವಿಚಾರ, ಕೇಂದ್ರದಲ್ಲಿ ಅಧಿಕಾರ ಇದ್ದ ಮೇಲೆ ಯಾವ ಸರ್ಕಾರ ಬೇಕಾದರೂ ಕೂಡ ಈ ಪ್ರದೇಶದ ಮೇಲೆ ಕಾನೂನು ಹೊರಡಿಸುವ ಹಕ್ಕಿದೆ ಎಂಬುದನ್ನು ಒಪ್ಪಿಕೊಂಡರೆ ಒಳಿತು.

Facebook Comments

Post Author: Ravi Yadav