ರಾಮಮಂದಿರಕ್ಕೆ ತನ್ನ ಮೂಲಕ ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸಲು ಮುಂದಾದ ಬಿಸಿ ಪಾಟೀಲ್ !

ನಮಸ್ಕಾರ ಸ್ನೇಹಿತರೇ, ಇದೀಗ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿರುವ ಬಿಸಿ ಪಾಟೀಲ್ ರವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ. ಯಾವ ಖಾತೆ ನೀಡುತ್ತಾರೆ ಎಂಬುದು ಇನ್ನೂ ಕಗ್ಗಂಟಾಗಿದ್ದರೂ ಯಾವುದೇ ಖಾತೆಯನ್ನು ಕೊಟ್ಟರೂ ನಿರ್ವಹಣೆ ಮಾಡಲು ಸಿದ್ಧನಿದ್ದೇನೆ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ.

ಇದೀಗ ಪತ್ರಿಕಾಗೋಷ್ಠಿ ನಡೆಸಿರುವ ಬಿಸಿ ಪಾಟೀಲ್ ರವರು, ನನ್ನನ್ನು ಕ್ಷೇತ್ರ ಜನರು ಮತ್ತೊಮ್ಮೆ ಶಾಸಕನಾಗಿ ಆಯ್ಕೆ ಮಾಡಿದ್ದೀರಿ, ಪ್ರತಿಯೊಬ್ಬರ ಪ್ರೀತಿ ವಿಶ್ವಾಸಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಇನ್ನೊಂದು ಜನ್ಮ ತಾಳಿದರೂ ಕೂಡ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಇನ್ನು ಇದೀಗ ನನಗೆ ಮಂತ್ರಿ ಪಟ್ಟ ಸಿಕ್ಕಿದೆ, ನನ್ನನ್ನು ಸನ್ಮಾನಿಸಲು ಹಲವಾರು ಜನ ಬರುತ್ತಿದ್ದಾರೆ, ಅಷ್ಟೇ ಅಲ್ಲದೆ ನಾನು ಹಲವಾರು ಸಭೆ-ಸಮಾರಂಭಗಳಿಗೆ ಭೇಟಿ ನೀಡಿದಾಗ ನನ್ನನ್ನು ಜನರು ಸನ್ಮಾನಿಸುವ ಜನರಲ್ಲಿ ನಾನು ಮನವಿ ಮಾಡುತ್ತಿದ್ದೇನೆ, ಯಾರು ನನಗೆ ಸನ್ಮಾನ ಮಾಡಲು ಹಣ ಖರ್ಚು ಮಾಡಬೇಡಿ.

ಆ ಹಣವನ್ನು ಪುಣ್ಯ ಭೂಮಿ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಶ್ರೀರಾಮನ ನೀಡಿ, ನೀವು ಸನ್ಮಾನ ಮಾಡುವ ಹಾರ, ಹೂವುಗಳು ಕೇವಲ ಒಂದು ದಿನದಲ್ಲಿ ಬಾಡಿ ಹೋಗುತ್ತವೆ. ಇನ್ನು ಶಾಲು, ನೆನಪಿನ ಕಾಣಿಕೆ ಎಂದರೆ ಸಭೆ-ಸಮಾರಂಭ ಖರ್ಚು ಹೆಚ್ಚಾಗುತ್ತದೆ. ಈ ಎಲ್ಲಾ ಹಣವನ್ನು ನಿಮ್ಮಿಂದ ನಾನು ಸಂಗ್ರಹಣೆ ಮಾಡಿ ಅಯೋಧ್ಯೆ ಮಂದಿರಕ್ಕೆ ಕಳುಹಿಸುತ್ತೇನೆ. ಹಣ ನೀಡಿದ ಪ್ರತಿಯೊಬ್ಬರಿಗೂ ರಸೀದಿ ನೀಡಲಾಗುತ್ತದೆ, ಆದ್ದರಿಂದ ನನ್ನ ಕ್ಷೇತ್ರದ ಜನತೆ ಹಾಗೂ ಇತರರು ಯಾರೇ ಆಗಲಿ ನನ್ನ ಸನ್ಮಾನಕ್ಕಾಗಿ ಒಂದು ರೂಪಾಯಿ ಖರ್ಚು ಮಾಡುವುದು ಬೇಡ, ಎಲ್ಲ ಹಣವನ್ನು ರಾಮ ಮಂದಿರಕ್ಕಾಗಿ ಒಟ್ಟಾಗಿ ನೀಡೋಣ ಎಂದಿದ್ದಾರೆ. ಇವರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರು ಪ್ರಶಂಸೆಗಳ ಸುರಿಮಳೆ ಸುರಿಸಿದ್ದಾರೆ.

Facebook Comments

Post Author: Ravi Yadav