ಕೊಹ್ಲಿ ನಂಬಿಕೆ ಉಳಿಸಿಕೊಂಡ ರಾಹುಲ್ ! ಭರ್ಜರಿ ಅಜೇಯ ಆಟ ! ಅದರಲ್ಲೂ ಈ ಸಿಕ್ಸರ್ ಅಂತೂ ಅಧ್ಭುತ ! ನೀವೇ ಒಮ್ಮೆ ನೋಡಿ ! ಭಾರತದ 360 ಆಟಗಾರ !!

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ತಂಡದಲ್ಲಿ ಫುಲ್ ಸದ್ದು ಮಾಡುತ್ತಿರುವ ಆಟಗಾರ ರಾಹುಲ್ ರವರ ಫಾರ್ಮ್ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಆರಂಭಿಕನಾಗಿ, ಮಧ್ಯಮ ಕ್ರಮಾಂಕದಲ್ಲಿ, ವಿಕೆಟ್ ಕೀಪರ್ ಆಗಿ, ಕೊನೆಯ ಟಿ-20 ಪಂದ್ಯದಲ್ಲಿ ಕ್ಯಾಪ್ಟನ್ ಆಗಿ(ರೋಹಿತ್ ಗಾಯಗೊಂಡು ನಿವೃತ್ತಿ ಆದಮೇಲೆ) ಹೀಗೆ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ರಾಹುಲ್ ಸದ್ದು ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಒಂದು ಮಾತಿನಲ್ಲಿ ಹೇಳುವುದಾದರೆ ಇದೀಗ ಯಾವ ಸ್ಥಾನದಲ್ಲಿ ಬೇಕಾದರೂ ಮಿಂಚಬಲ್ಲೆನು ಹಾಗೂ ಜವಾಬ್ದಾರಿಯುತ ಆಟ ಆಡಬಲ್ಲೆನು ಎಂಬುದನ್ನು ಸಾರಿ ಹೇಳಿದ್ದಾರೆ. ಇಷ್ಟೆಲ್ಲ ಆದ ಬಳಿಕ ನೆನ್ನೆ ಪತ್ರಿಕಾ ಘೋಷ್ಠಿ ನಡೆಸಿದ ಕ್ಯಾಪ್ಟನ್ ಕಿಂಗ್ ಕೊಹ್ಲಿ ರವರು, ರಾಹುಲ್ ಮುಂದಿನ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಮಾಧ್ಯಮ ದವರು ರಾಹುಲ್ ಆರಂಭಿಕರಾಗಿ ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದಾರೆ, ಯಾಕೆ 5 ನೇ ಕ್ರಮಾಂಕ ಎಂದು ಕೇಳಿದಾಗ, ರಾಹುಲ್ ರವರು ಯಾವ ಕ್ರಮಾಂಕದಲ್ಲಿ ಬೇಕಾದರೂ ಆಡುವ ಶಕ್ತಿ ಹೊಂದಿದ್ದಾರೆ, ಈಗಾಗಲೇ ಅದನ್ನು ಸಾಭೀತು ಮಾಡಿದ್ದಾರೆ, ಅಷ್ಟೇ ಅಲ್ಲದೇ ಇಬ್ಬರು ಹೊಸ ಆರಂಭಿಕ ಆಟಗಾರರು ತಂಡಕ್ಕೆ ಕಾಲಿಟ್ಟಿದ್ದಾರೆ, ಅದಕ್ಕೆ ಅವರಿಗಾಗಿ 5 ನೇ ಕ್ರಮಾಂಕ ಎಂದಿದ್ದರು.

ಕ್ಯಾಪ್ಟನ್ ರವರ ಈ ನಂಬಿಕೆಯನ್ನು ಉಳಿಸಿ ಕೊಂಡಿರುವ ರಾಹುಲ್ ರವರು ಇಂದು ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಭರ್ಜರಿ ಬ್ಯಾಟ್ ಬೀಸಿದ್ದಾರೆ. 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ರಾಹುಲ್ ರವರು, ಕೊಹ್ಲಿ ರವರ ನಂಬಿಕೆಯನ್ನು ಹುಸಿ ಮಾಡದೇ, ಕೇವಲ 64 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 6 ಸಿಕ್ಸರ್ ಗಳನ್ನೂ ಹೊಡೆದು 88 ರನ್ ಕಲೆಹಾಕಿ ಅಜೇಯರಾಗಿ ಉಳಿದಿದ್ದಾರೆ. ಅದರಲ್ಲೂ ಜೇಮ್ಸ್ ನಥೇಮ್ ರವರು ಎಸೆದ ಬಾಲ್ ಅನ್ನು ರಿವರ್ಸ್ ಸ್ಕೋಪ್ ಮಾಡುವ ಮೂಲಕ ಸಿಕ್ಸರ್ ಹೊಡೆದದ್ದು ಇದೀಗ ವೈರಲ್ ಆಗಿದೆ. ಆ ಶಾಟ್ ಕೆಳಗಡೆ ಇದೆ ಒಮ್ಮೆ ನೋಡಿ.

Facebook Comments

Post Author: Ravi Yadav