ಐಸಿಸಿ ಶ್ರೇಯಾಂಕದಲ್ಲಿ ಅದ್ವಿತೀಯ ಸಾಧನೆ ಮಾಡಿದ ಕೆ ಎಲ್ ರಾಹುಲ್ ! ಟಾಪ್ 10 ರಲ್ಲಿ ಸ್ಥಾನ ಖಚಿತಪಡಿಸಿಕೊಂಡ 3 ಭಾರತೀಯರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗಾಗಿ ಭರ್ಜರಿ ಸಿದ್ಧತೆ ನಡೆಸಿದೆ. ಕ್ಯಾಪ್ಟನ್ ಕೊಹ್ಲಿ ಅವರು ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಹಲವಾರು ಪ್ರಯೋಗಗಳನ್ನು ನಡೆಸಿ ಮುಂದಿನ ವಿಶ್ವಕಪ್ ಗೆ ಬಲಾಡ್ಯ ತಂಡವನ್ನು ಕರೆದುಕೊಂಡು ಹೋಗಲು ಇನ್ನಿಲ್ಲದ ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾರೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ನಡೆಯುವ ಟಿ-ಟ್ವೆಂಟಿ ವಿಶ್ವಕಪ್ ಗು ಮುನ್ನ ನ್ಯೂಜಿಲೆಂಡ್ ನೆಲದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಐದಕ್ಕೆ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಬಲಾಡ್ಯ ತಂಡಗಳಿಗೆ ತಮ್ಮ ತಾಕತ್ತನ್ನು ಸಾರಿ ಹೇಳಿದೆ.

ಈ ಸರಣಿಯ ಬಳಿಕ ಐಸಿಸಿ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಇತರ ತಂಡಗಳಿಗೆ ಹೋಲಿಸಿ ಕೊಂಡರೆ ಹೆಚ್ಚು ಟಿ-ಟ್ವೆಂಟಿ ಪಂದ್ಯಗಳನ್ನು ಆಡದೆ ಇದ್ದರೂ 3 ಭಾರತೀಯ ಬ್ಯಾಟ್ಸ್ಮನ್ಗಳು ಟಾಪ್ 10 ರಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ. ಜೀವನ ಶ್ರೇಷ್ಠ ಸಾಧನೆ ಮಾಡಿರುವ ಕೆಎಲ್ ರಾಹುಲ್ ರವರು ಐಸಿಸಿ ಶ್ರೇಯಾಂಕದಲ್ಲಿ ಎರಡನೇ ಸ್ಥಾನ ಪಡೆದು ಕೊಂಡಿದ್ದು, ಕ್ಯಾಪ್ಟನ್ ಕಿಂಗ್ ಕೊಹ್ಲಿ ರವರು ಒಂಬತ್ತನೇ ಸ್ಥಾನದಲ್ಲಿ ಇದ್ದಾರೆ. ಇನ್ನು ಟಾಪ್ ಹತ್ತರ ಆಟಗಾರರ ಹೆಸರಿಗೆ ಹೊಸ ಹೆಸರು ಸೇರಿಕೊಂಡಿದ್ದು ರೋಹಿತ್ ಶರ್ಮಾ ರವರು 3 ಸ್ಥಾನಗಳು ಮೇಲೇರಿ 10ನೇ ಸ್ಥಾನ ಪಡೆದುಕೊಂಡು, ಟಾಪ್ 10ರಲ್ಲಿ ಇರುವ ಮೂರನೇ ಭಾರತೀಯ ಆಟಗಾರನಾಗಿ ಗುರುತಿಸಿ ಕೊಂಡಿದ್ದಾರೆ. ಏನೇ ಆಗಲಿ ಎಲ್ಲಾ ಆಟಗಾರರು ಇದೇ ರೀತಿ ಅದ್ಭುತ ಪ್ರದರ್ಶನವನ್ನು ನೀಡಿ ಭಾರತ ತಂಡಕ್ಕೆ ಮತ್ತೊಂದು ಟಿ ಟ್ವೆಂಟಿ ವಿಶ್ವಕಪ್ ಗೆಲ್ಲಿಸಿ ಕೊಡಲಿ ಎಂಬುದೇ ನಮ್ಮ ಆಶಯ.

Facebook Comments

Post Author: Ravi Yadav