ಸೌತ್ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಹರ್ಷಲ್ ಗಿಬ್ಸ್ ರವರ ಎಲ್ಲಾ ಸಮಯದ ಫೆವರೇಟ್ ಭಾರತೀಯ ಕ್ರಿಕೆಟಿಗ ಯಾರು ಗೊತ್ತಾ??

ಸೌತ್ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಹರ್ಷಲ್ ಗಿಬ್ಸ್ ರವರ ಎಲ್ಲಾ ಸಮಯದ ಫೆವರೇಟ್ ಭಾರತೀಯ ಕ್ರಿಕೆಟಿಗ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ದಕ್ಷಿಣ ಆಫ್ರಿಕಾ ತಂಡದ ಖ್ಯಾತ ಆಟಗಾರರಲ್ಲಿ ಒಬ್ಬರಾಗಿದ್ದ ಹರ್ಷಲ್ ಗಿಬ್ಸ್ ರವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಭಾರತದ ಕ್ರಿಕೆಟ್ ಆಟಗಾರರ ಬಗ್ಗೆ ಮಾತನಾಡಿರುವ ಇವರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ಇದೀಗ ತಿಳಿದು ಕೊಳ್ಳೋಣ.

ಹರ್ಷಲ್ ಗಿಬ್ಸ್ ರವರು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಜೊತೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ವಿಶ್ವದ ಅತಿ ಶ್ರೀಮಂತ ಲೀಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಐಪಿಎಲ್ ಟೂರ್ನಿಯಲ್ಲಿ ಮುಂಬೈ ತಂಡದ ಪರವಾಗಿ ಬ್ಯಾಟ್ ಬೀಸಿದ್ದ ಹರ್ಷಲ್ ಗಿಬ್ಸ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ತನಗೆ ಭಾರತೀಯ ಅಭಿಮಾನಿಗಳ ಜೊತೆ ಅವಿನಾಭಾವ ಸಂಬಂಧವಿದೆ ಎಂದು ಹಲವಾರು ಬಾರಿ ಒಪ್ಪಿಕೊಂಡಿರುವ ಹರ್ಷಲ್ ಗಿಬ್ಸ್ ಅವರು ಭಾರತೀಯ ಅಭಿಮಾನಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಸದಾ ಉತ್ತರ ನೀಡುತ್ತಿರುತ್ತಾರೆ. ಅದೇ ರೀತಿ ಇದೀಗ ಭಾರತೀಯ ಅಭಿಮಾನಿಯೊಬ್ಬರು ನಿಮಗೆ 80 ರ ದಶಕದಿಂದ ಇಲ್ಲಿಯವರೆಗೂ ಆಡಿದ ಯಾವ ಭಾರತೀಯ ಆಟಗಾರ ಫೇವರೆಟ್ ಎಂದು ತಿಳಿಸಿ ಎಂದು ಕೇಳಿದಾಗ ಹರ್ಷಲ್ ಗಿಬ್ಸ್ ರವರ ಉತ್ತರ ಹೇಗಿತ್ತು ಗೊತ್ತಾ??

ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಹಾಗೂ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೀಗೆ ಹಲವಾರು ಕ್ರಿಕೆಟ್ ಆಟಗಾರರ ಜೊತೆ ಮೈದಾನದಲ್ಲಿ ಪಂದ್ಯಗಳನ್ನು ಆಡಿರುವ ಹರ್ಷಲ್ ಗಿಬ್ಸ್ ಅವರು ನಿಮ್ಮ ಎಲ್ಲಾ ವೇಳೆಯ ಫೇವರೆಟ್ ಭಾರತೀಯ ಕ್ರಿಕೆಟಿಗ ಯಾರು ಎಂದು ಪ್ರಶ್ನಿಸಿದಾಗ ಕಳೆದ 10 ವರ್ಷಗಳಲ್ಲಿ ಅದ್ವಿತೀಯ ಸಾಧನೆ ಮಾಡಿ ವಿಶ್ವದಲ್ಲಿಯೇ ಬಲಾಡ್ಯ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರ ಹೆಸರನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ಹೌದು, ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ರವರು ರನ್ ಮಿಷಿನ್ ಎಂದೇ ಖ್ಯಾತಿ ಪಡೆದು ಕೊಂಡಿರುವ ವಿರಾಟ್ ಕೊಹ್ಲಿ ರವರು ಹರ್ಷಲ್ ಗಿಬ್ಸ್ ರವರ ಎಲ್ಲಾ ವೇಳೆಯ ಫೇವರೆಟ್ ಭಾರತೀಯ ಕ್ರಿಕೆಟಿಗ. ಇದೀಗ ಇವರ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊಹ್ಲಿ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.