ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಭಕ್ತರದ್ದು ಫುಲ್ ಹವಾ ! ಫುಲ್ ತಲೆ ಕೆಡಿಸಿಕೊಂಡ ಕುಮಾರಸ್ವಾಮಿ ! ಮಾಡಿದ್ದಾದರೂ ಏನು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಭಕ್ತರದ್ದು ಫುಲ್ ಹವಾ ! ಫುಲ್ ತಲೆ ಕೆಡಿಸಿಕೊಂಡ ಕುಮಾರಸ್ವಾಮಿ ! ಮಾಡಿದ್ದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ನೀವು ಫೇಸ್ಬುಕ್ ಅಥವಾ ಟ್ವಿಟರ್ ಅನ್ನು ಓಪನ್ ಮಾಡಿದಾಗ ಇದು ಸಾಮಾಜಿಕ ಜಾಲತಾಣಗಳ ಅಥವಾ ಬಿಜೆಪಿ ಪಕ್ಷದ ಕಾರ್ಯಕರ್ತರ ಆಫೀಸ್ಸಾ ಎಂಬ ಅನುಮಾನ ಬರುವುದು ಸಹಜ.

ಯಾಕೆಂದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಇತರ ಪಕ್ಷದ ಬೆಂಬಲಿಗರಿಗೆ ಹೋಲಿಸಿದರೇ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಭಕ್ತರದ್ದೇ ಹೆಚ್ಚು ಹವಾ. ನರೇಂದ್ರ ಮೋದಿರವರು ಈ ಬಾರಿ 300ಕ್ಕೂ ಹೆಚ್ಚು ಸೀಟುಗಳ ಮೂಲಕ ಗೆಲುವು ಕಾಣಲು ಈ ಭಕ್ತರದ್ದೇ ಸಿಂಹ ಪಾಲು ಎಂಬುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ನರೇಂದ್ರ ಮೋದಿರವರ ಪ್ರತಿಯೊಂದು ಕಾರ್ಯವನ್ನು ಹಾಗೂ ವಿರೋಧ ಪಕ್ಷ ಹಾಗೂ ಅದರ ನಾಯಕರುಗಳಿಗೆ ಯಾಕೆ ಮತ ನೀಡಬಾರದು ಎಂದು ಮೂಲೆ ಮೂಲೆ ಮೂಲೆಗೂ ತಲುಪಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇಷ್ಟೆಲ್ಲಾ ಮಾಡುವ ಬಿಜೆಪಿ ಕಾರ್ಯಕರ್ತರು ಕೇವಲ ರಾಜಕೀಯದಲ್ಲಿ ಮುಳುಗಿ ಮನರಂಜನೆಯನ್ನು ಮರೆಯುವುದಿಲ್ಲ. ಯಾವುದಾದರೂ ವಿರೋಧ ಪಕ್ಷದ ನಾಯಕರು ಒಂದು ಹೇಳಿಕೆ ನೀಡಿದ್ದಲ್ಲಿ ಎಲ್ಲರಲ್ಲಿನ ಕ್ರಿಯೇಟಿವಿಟಿ ಒಮ್ಮೆಲೆ ಹೊರ ಬರುತ್ತದೆ. ಟ್ರೊಲ್ ಪೇಜ್ ಗಳು ಕೂಡಲೇ ಸಕ್ರಿಯರಾಗುತ್ತಾರೆ.

ಹೌದು,ಈ ಭಕ್ತರು ವಿರೋಧ ಪಕ್ಷದ ನಾಯಕರನ್ನು ಟ್ರೋಲ್ ಮಾಡುವುದರಲ್ಲಿ ಪ್ರಸಿದ್ಧರು. ಅದರಲ್ಲಿಯೂ ಕುಮಾರಸ್ವಾಮಿ ಅವರ ಹೇಳಿಕೆಗಳನ್ನು ಹೆಚ್ಚು ವೈರಲ್ ಮಾಡಿ ಕೇವಲ ನಮ್ಮ ದೇಶದಲ್ಲಿ ಅಲ್ಲದೆ ವಿದೇಶಗಳಲ್ಲಿಯೂ ಕೂಡ ಸದ್ದು ಮಾಡುವಂತೆ ಮಾಡುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆಗಳೆಂದರೆ ಮೊದಲನೆಯದು ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಡೈಲಾಗ್ ವೈರಲ್ ಆಗಿದ್ದು ಹಾಗೂ ಇತ್ತೀಚೆಗೆ ಮಿಣಿ ಮಿಣಿ ಎಂಬ ಡೈಲಾಗ್ ವೈರಲ್ ಮಾಡಿದ್ದು. ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಮಿಣಿ ಮಿಣಿ ಎಂಬ ಪದ ಕೇಳಿ ಬರುತ್ತಿದೆ. ಇದನ್ನು ಕಂಡ ಕುಮಾರಸ್ವಾಮಿ ರವರು ತಮ್ಮ ಮಿಣಿ ಮಿಣಿ ಹೇಳಿಕೆಗೆ ವ್ಯಕ್ತವಾಗುತ್ತಿರುವ ವ್ಯಂಗ್ಯದಿಂದ ಬೇಸರಗೊಂಡು ಸಿಡಿಮಿಡಿಗೊಂಡಿದ್ದಾರೆ. ಆದ್ದರಿಂದ ಬಿಜೆಪಿ ಭಕ್ತರಿಗೆ ಮೂಗುದಾರ ಹಾಕಲು ಬೆಂಗಳೂರಿನ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ಕುಮಾರಸ್ವಾಮಿ ರವರು ಮಿಣಿ ಮಿಣಿ ಪೌಡರ್ ಟ್ರೋಲ್ ಆಗದಂತೆ ತಡೆಯಲು ನಿರ್ಬಂಧ ಏರುವಂತೆ ಮನವಿ ಸಲ್ಲಿಸಿದ್ದಾರೆ.