ಶಹಬಾಸ್ ರಕ್ಷಣಾ ಸಚಿವರೇ ! ಮಸೂದೆಗಳಲ್ಲಿ ಧರ್ಮ ಎಳೆದುತಂದು ಅಪಪ್ರಚಾರ ಮಾಡುತ್ತಿದ್ದವರಿಗೆ ಕುರಿತು ರಾಜನಾಥ್ ಸಿಂಗ್ ಹೇಳಿದ್ದೇನು ಗೊತ್ತಾ

ಶಹಬಾಸ್ ರಕ್ಷಣಾ ಸಚಿವರೇ ! ಮಸೂದೆಗಳಲ್ಲಿ ಧರ್ಮ ಎಳೆದುತಂದು ಅಪಪ್ರಚಾರ ಮಾಡುತ್ತಿದ್ದವರಿಗೆ ಕುರಿತು ರಾಜನಾಥ್ ಸಿಂಗ್ ಹೇಳಿದ್ದೇನು ಗೊತ್ತಾ

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ದೇಶದ ಎಲ್ಲೆಡೆ ರಾಜಕೀಯ ವಿರೋಧ ಪಕ್ಷಗಳು ಹಾಗೂ ಹಲವಾರು ಸೆಲೆಬ್ರೇಟಿಗಳು ಸೇರಿದಂತೆ ಕೆಲವೊಂದು ಗಂಜಿ ಗಿರಾಕಿಗಳು ಭಾರತದಿಂದ ಮುಸ್ಲಿಮರನ್ನು ಹೊರ ದಬ್ಬಲು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಹಾಗೂ ಎನ್ಆರ್ಸಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳುತ್ತಿದ್ದಾರೆ.

ಆದರೆ ಈ ಎರಡು ಮಸೂದೆಗಳ ಬಗ್ಗೆ ಓದಿದಾಗ ಪೌರತ್ವ ತಿದ್ದುಪಡಿ ಮಸೂದೆಯು ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲಿ ಅಲ್ಪ ಸಂಖ್ಯಾತರು ಎಂದು ಗುರುತಿಸಿ ಕೊಂಡಿರುವ ಎಲ್ಲ ಧರ್ಮದವರಿಗೂ ಭಾರತೀಯ ಪೌರತ್ವ ನೀಡುವುದು (ಮೂಲ ರಾಷ್ಟ್ರಗಳಲ್ಲಿ ಮುಸ್ಲಿಂ ರು ಅಲ್ಪ ಸಂಖ್ಯಾತರಲ್ಲ) ಹಾಗೂ ಎನ್ಆರ್ಸಿ ಯೋಜನೆಯು ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿರುವ ಜನರನ್ನು ಹೊರ ದಬ್ಬುವುದು ಎಂದು ತಿಳಿದು ಬರುತ್ತದೆ. ಈ ಎರಡು ಕಾನೂನಿ ನಡಿಯಲ್ಲಿ ಯಾವುದೇ ಧರ್ಮದ ಭಾರತೀಯನಿಗೂ ಕಿಂಚಿತ್ತೂ ತೊಂದರೆ ಇಲ್ಲ ಎಂಬುದು ತಿಳಿದಿದ್ದರೂ ಕೂಡ ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಧರ್ಮಗಳನ್ನು ಎಳೆದು ತರುತ್ತಿದ್ದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಪಕ್ಷ ವಾದ ಮಂಡಿಸುತ್ತಿದೆ.

ಇದೀಗ ಇದರ ಕುರಿತು ಮಹತ್ವದ ಹೇಳಿಕೆ ನೀಡಿರುವ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು, ಕೇವಲ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳಲ್ಲ ಬದಲಾಗಿ ಯಾವುದೇ ಯೋಜನೆಗಳ ಮೂಲಕವೂ ಭಾರತದ ಒಬ್ಬ ಮುಸ್ಲಿಮರನ್ನು ಕೂಡ ಕೇಂದ್ರ ಸರ್ಕಾರ ಟಚ್ ಮಾಡುವುದಿಲ್ಲ, ಇದು ಕೇವಲ ಇತರ ದೇಶದ ನಾಗರಿಕರಿಗೆ ಸಂಬಂಧ ಪಟ್ಟದ್ದು. ದೇಶದಲ್ಲಿರುವ ಯಾವೊಬ್ಬ ಭಾರತೀಯ ಮುಸ್ಲಿಮನು ತನ್ನ ಭದ್ರತೆಯ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ, ಯಾರೊಬ್ಬರ ಪೌರತ್ವವನ್ನು ಕಸಿದು ಕೊಳ್ಳಲು ಸಾಧ್ಯವಿಲ್ಲ, ನಾವು ಪೌರತ್ವ ತಿದ್ದುಪಡಿ ಮಸೂದೆ ಯ ಮೂಲಕ ಪೌರತ್ವ ನೀಡುತ್ತಿದ್ದೇವೆ ಹೊರತು ಕಸಿದು ಕೊಳ್ಳುತ್ತಿಲ್ಲ, ಇದರಿಂದ ಯಾವೊಬ್ಬ ಭಾರತೀಯ ಮುಸ್ಲಿಮರಿಗೆ ತೊಂದರೆಯಾದರೂ ತಾನೇ ಜವಾಬ್ದಾರಿ ಹೊರುತ್ತೇನೆ ಎಂದು ಅಭಯ ನೀಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಇದರ ಕುರಿತು ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡಾ ಕರ್ನಾಟಕದ ಯಾವೊಬ್ಬ ಭಾರತೀಯ ಮುಸ್ಲಿಮರಿಗೆ ಈ ಮಸೂದೆ ಗಳಿಂದ ತೊಂದರೆಯಾದರೇ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಹೇಳಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.