ಚಪ್ಪಕ್ ರೇಟಿಂಗ್ ಗೆ ದೀಪಿಕಾ ಪ್ರತಿಕ್ರಿಯೆ ನೋಡಿ ಕುಪಿತಗೊಂಡ ನೆಟ್ಟಿಗರು ಮತ್ತೊಮ್ಮೆ ನೀಡಿದ ಎಚ್ಚರಿಕೆ ಸಂದೇಶ ಏನು ಗೊತ್ತಾ

ಚಪ್ಪಕ್ ರೇಟಿಂಗ್ ಗೆ ದೀಪಿಕಾ ಪ್ರತಿಕ್ರಿಯೆ ನೋಡಿ ಕುಪಿತಗೊಂಡ ನೆಟ್ಟಿಗರು ಮತ್ತೊಮ್ಮೆ ನೀಡಿದ ಎಚ್ಚರಿಕೆ ಸಂದೇಶ ಏನು ಗೊತ್ತಾ

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸದಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದ ದೀಪಿಕಾ ರವರ ಚಿತ್ರಗಳು ಒಮ್ಮೆ ಜೆಎನ್ಯು ಕಾಲೇಜಿನ ತುಕಡೆ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದು ಕೊಂಡಿರುವ ವಿದ್ಯಾರ್ಥಿಗಳ ಪರ ನಿಂತಿದ್ದ ಕ್ಕಾಗಿ ಸದ್ದು ಮಾಡುವುದನ್ನು ನಿಲ್ಲಿಸಿದ್ದವು.

ಲಕ್ಷಾಂತರ ಟಿಕೆಟ್ಗಳು ಕ್ಯಾನ್ಸಲ್ ಆಗಿದ್ದಾವೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು, ಹಲವಾರು ನೆಟ್ಟಿಗರು ಚಿತ್ರವನ್ನು ನಿಷೇಧಿಸುವಂತೆ ಕರೆ ನೀಡಿದ್ದರು, ಎಲ್ಲಾ ಅಭಿಯಾನ ಗಳಿಂದ ಚಪ್ಪಕ್ ಸಿನಿಮಾವೂ ಬಾಕ್ಸಾಫೀಸ್ ನಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿಯೇ ಬಾಕ್ಸಾಫೀಸ್ ನಲ್ಲಿ ಅತಿ ಕಡಿಮೆ ಸದ್ದು ಮಾಡಿದ ದೀಪಿಕ ರವರ ಚಿತ್ರ ಎಂಬ ಕುಖ್ಯಾತಿಗೆ ಒಳಗಾಗಿತ್ತು. ಇಷ್ಟೆಲ್ಲಾ ಆದ ಮೇಲೆ ನೆಟ್ಟಿಗರು ಮತ್ತೊಂದು ಅಭಿಯಾನವನ್ನು ಆರಂಭಿಸಿ ಐಎಮ್ಡಿಬಿ ರೇಟಿಂಗ್ ಕಡಿಮೆ ಕೊಡುವಂತೆ ಕರೆ ನೀಡಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಡಿಮೆ ರೇಟಿಂಗ್ ನೀಡಲು ಆರಂಭಿಸಿದರು, ಇದರ ಕುರಿತು ಇದೀಗ ದೀಪಿಕಾ ರವರು ಪ್ರತಿಕ್ರಿಯೆ ನೀಡಿದ್ದು ಅವರು ನನ್ನ ಸಿನಿಮಾದ ಐಎಮ್ಡಿಬಿ ರೇಟಿಂಗ್ ಬದಲಾಯಿಸಿರ ಬಹುದು ಆದರೆ ನನ್ನ ಮನಸ್ಸನ್ನು ಬದಲಾಯಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ದೀಪಿಕಾ ಪಡುಕೋಣೆ ರವರ ಈ ಪ್ರತಿಕ್ರಿಯೆಗೆ ಕೆಲವರು ಬಿಜೆಪಿ ಭಕ್ತರೇ ನೋಡಿ ಕೊಳ್ಳಿ ಇದೋ ನಿಮಗೆ ತಕ್ಕ ಪ್ರತಿಕ್ರಿಯೆ, ದೀಪಿಕಾ ರವರು ಬದಲಾಗುವುದಿಲ್ಲ ಸದಾ ನಮ್ಮ ಪರ ನಿಂತಿರುತ್ತಾರೆ ಎಂದು ನೀವು ಮುನ್ನುಗ್ಗಿ ದೀಪಿಕಾ ಎಂದಿದ್ದಾರೆ. ಮತ್ತೊಂದೆಡೆ ಎಂದಿನಂತೆ ಸಾವಿರಾರು ‌ಜನರು ಓ ಹೌದಾ, ನೀವು ಚಪ್ಪಕ್ ಸಿನಿಮಾದ ಸೋಲಿನ ನಂತರ ಬುದ್ಧಿ ಕಲಿಯುತ್ತೀರಾ ಎಂದು ಕೊಂಡಿದ್ದೆವು, ಆದರೆ ಕಲಿತಿಲ್ಲ. ಖಂಡಿತ ಮುಂದಿನ ಚಿತ್ರಗಳಲ್ಲಿ ನಿಮಗೆ ಬುದ್ಧಿ ಕಲಿಸಿಯೇ ತೀರುತ್ತೇವೆ, ಯಾವುದೇ ಕಾರಣಕ್ಕೂ ದೇಶ ವಿಭಜನೆ ಮಾಡಲು ಕರೆ ನೀಡಿರುವ ತುಕಡೆ ಗ್ಯಾಂಗ್ ಪರ ನಿಂತವರಿಗೆ ಬುದ್ಧಿ ಕಲಿಸದೆ ಬಿಡುವುದಿಲ್ಲ ಎಂದು ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ಮುಗಿಯಿತು ಎಂದು ಕೊಳ್ಳುವಷ್ಟರಲ್ಲಿ ದೀಪಿಕಾ ರವರ ಮಾತು ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸಿದೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.