ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ ಇನ್ಫೋಸಿಸ್ ನಾರಾಯಣ ಮೂರ್ತಿ ! ರತನ್ ಟಾಟಾ ರವನ್ನು ಕಂಡ ಕೂಡಲೇ ಮೂರ್ತಿ ರವರು ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತೀಯ ಸಂಸ್ಕೃತಿಯ ಬಗ್ಗೆ ನಿಮಗೆ ಹೆಚ್ಚು ಹೇಳಬೇಕಾದ ಅವಶ್ಯಕತೆಯಿಲ್ಲ ಎಂದು ಕೊಂಡಿದ್ದೇವೆ. ಭಾರತ ಸಂಸ್ಕೃತಿಯು ಪ್ರಮುಖವಾಗಿ ಸಾರುವ ಸಂದೇಶವೇ ಪ್ರತಿಯೊಬ್ಬರನ್ನು ಗೌರವದಿಂದ ಕಾಣಿ ಹಾಗೂ ತಾವು ನಡೆದು ಬಂದ ಹಾದಿ ಹಾಗೂ ಹಿರಿಯರಿಗೆ ನೀಡಬೇಕಾದ ಗೌರವವನ್ನು ಎಂದಿಗೂ ಮರೆಯಬೇಡಿ ಎಂದು ಹೇಳುತ್ತದೆ.

ಇದೀಗ ಇದೇ ಸಂಸ್ಕೃತಿಯನ್ನು ಇನ್ಫೋಸಿಸ್ ಸಂಸ್ಥಾಪಕರಾಗಿರುವ ನಾರಾಯಣಮೂರ್ತಿ ರವರು ಸಾರಿ ಹೇಳಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ನಾರಾಯಣ ಮೂರ್ತಿಯವರು ಜೀವನದಲ್ಲಿ ಈಗಾಗಲೇ ಸಾಕಷ್ಟು ಸಾಧನೆಗಳನ್ನು ಮಾಡಿ, ಕೋಟ್ಯಂತರ ಯುವಕರಿಗೆ ಆದರ್ಶ ನಾಯಕ ರಾಗಿದ್ದಾರೆ. ಭಾರತದಲ್ಲಿ ಸಾಫ್ಟ್ವೇರ್ ಎಂಬ ಹೆಸರನ್ನು ಕೇಳದೆ ಇರುವ ಸಂದರ್ಭದಲ್ಲಿ ತನ್ನದೇ ಆದ ಕಂಪನಿಯನ್ನು ಸೃಷ್ಟಿಸಿ ಹಲವಾರು ಸವಾಲುಗಳನ್ನು ಎದುರಿಸಿ, ಇಡೀ ವಿಶ್ವದಲ್ಲಿಯೇ ದೊಡ್ಡ ಕಂಪನಿಗಳ ಸಾಲಿನಲ್ಲಿ ನಿಲ್ಲುವ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ರಾಗಿರುವ ನಾರಾಯಣಮೂರ್ತಿ ರವರು ಇತ್ತೀಚೆಗೆ ಇಡೀ ವಿಶ್ವದಲ್ಲಿಯೇ ಉದ್ಯಮ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರತನ್ ಟಾಟಾ ರವರನ್ನು ಕಂಡ ತಕ್ಷಣ ಮಾಡಿದ್ದಾದರು ಏನು ಗೊತ್ತಾ?? ತಿಳಿಯಲು ಸಂಪೂರ್ಣವಾಗಿ ಕೆಳಗಡೆ ಓದಿ.

ಕಳೆದ ಮಂಗಳವಾರ ಟೈಕಾನ್ ಮುಂಬೈ 2020 ರ ಕಾರ್ಯಕ್ರಮದಲ್ಲಿ ಉದ್ಯಮ ವಲಯದಲ್ಲಿ ಹೆಸರು ಗಳಿಸಿರುವ ರತನ್ ಟಾಟಾ ರವರಿಗೆ ಟೈಕಾನ್ ಸಂಸ್ಥೆಯು ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಎಂಬ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಈ ಪುರಸ್ಕಾರವನ್ನು ನೀಡಲು ಕಾರ್ಪೊರೇಟ್ ವಲಯದ ದಿಗ್ಗಜ ನಾರಾಯಣ ಮೂರ್ತಿ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ರತನ್ ಟಾಟಾ ಅವರಿಗೆ ಪ್ರಶಸ್ತಿ ನೀಡಿದ ನಂತರ ನಾರಾಯಣ ಮೂರ್ತಿ ರವರು ತನಗಿಂತ ಹಿರಿಯರಾಗಿರುವ ರತನ್ ಟಾಟಾರವರ ಕಾಲಿಗೆ ಎರಗಿ ಅತ್ಯಂತ ವಿನಮ್ರವಾಗಿ ನಮಸ್ಕಾರ ಮಾಡಿ ಆಶೀರ್ವಾದ ಪಡೆದು ಕೊಂಡರು. ಇಬ್ಬರು ದಿಗ್ಗಜರು ತಮ್ಮದೇ ಕ್ಷೇತ್ರಗಳಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದಾರೆ, ಆದರೂ ಕೂಡ ರತನ್ ಟಾಟಾರವರು ತನಗಿಂತ ಒಂಬತ್ತು ವರ್ಷಗಳ ಕಾಲ ಹಿರಿಯ ನಾಯಕರು ಎಂಬುದನ್ನು ಮನದಲ್ಲಿ ಇಟ್ಟುಕೊಂಡಿದ್ದ ನಾರಾಯಣ ಮೂರ್ತಿ ರವರ ಈ ನಡೆ ಇದೀಗ ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಇಂತಹ ಸಂಸ್ಕೃತಿ ಕೇವಲ ಭಾರತೀಯರಲ್ಲಿ ಮಾತ್ರ ನೀವು ಕಾಣಬಹುದು.

Facebook Comments

Post Author: RAVI