ರಾಷ್ಟ್ರೀಯ ಅಧ್ಯಕ್ಷರಾಗಿ ಮೊದಲ ಜಯ ದಾಖಲಿಸಿದ ಜೆ ಪಿ ನಡ್ಡಾ ! ದೆಹಲಿ ಚುನಾವಣೆಗೆ ಕೆಲವು ದಿನಗಳ ಮುನ್ನ ಬಿಜೆಪಿ ಪಕ್ಷಕ್ಕೆ ಭರ್ಜರಿ ಸಿಹಿಸುದ್ದಿ ಏನು ಗೊತ್ತಾ?

ರಾಷ್ಟ್ರೀಯ ಅಧ್ಯಕ್ಷರಾಗಿ ಮೊದಲ ಜಯ ದಾಖಲಿಸಿದ ಜೆ ಪಿ ನಡ್ಡಾ ! ದೆಹಲಿ ಚುನಾವಣೆಗೆ ಕೆಲವು ದಿನಗಳ ಮುನ್ನ ಬಿಜೆಪಿ ಪಕ್ಷಕ್ಕೆ ಭರ್ಜರಿ ಸಿಹಿಸುದ್ದಿ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ದಿನಗಳ ಮುನ್ನವೇ ದೆಹಲಿಯ ವಿಧಾನಸಭಾ ಚುನಾವಣೆಯ ಬಗ್ಗೆ ಆಲೋಚನೆ ಮಾಡದ ಬಿಜೆಪಿ ಪಕ್ಷವು ಗೃಹ ಸಚಿವರಾಗಿ ಅಮಿತ್ ಶಾ ರವರು ಸಂಪೂರ್ಣವಾಗಿ ಅದರಲ್ಲಿಯೇ ನಿರತ ವಾಗಲು ಜೆ ಪಿ ನಡ್ಡಾ ರವರನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಗಿ ಘೋಷಣೆ ಮಾಡಿತ್ತು.

ಅಧಿಕಾರ ವಹಿಸಿಕೊಂಡ ನಂತರ ಇದೀಗ ಜೆ ಪಿ ನಡ್ಡಾ ರವರ ಸಂಪೂರ್ಣ ದೃಷ್ಟಿ ಕೇವಲ ದೆಹಲಿಯ ವಿಧಾನಸಭಾ ಚುನಾವಣೆ ಮೇಲೆ ಇಟ್ಟಿದ್ದಾರೆ. ದೆಹಲಿಯ ಗದ್ದುಗೆಯ ಮೇಲೆ ಕಣ್ಣಿಟ್ಟಿರುವ ಜೆ ಪಿ ನಡ್ಡಾ ಅವರು ಒಂದೇ ದಿನದಲ್ಲಿ ಬಿಜೆಪಿ ಪಕ್ಷಕ್ಕೆ ಎರಡೆರಡು ಸಿಹಿ ಸುದ್ದಿ ನೀಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಕೇವಲ ಬೆರಳೆಣಿಕೆಯ ಸೀಟುಗಳನ್ನು ಮಾತ್ರ ಪಡೆದು ಕೊಂಡಿತ್ತು, ಆದರೆ ಲೋಕಸಭಾ ಚುನಾವಣೆಯಲ್ಲಿ ಫೀನಿಕ್ಸ್ ಪಕ್ಷಿಯಂತೆ ಗೆದ್ದು ಬಂದು ಏಳಕ್ಕೆ ಏಳು ಕ್ಷೇತ್ರಗಳನ್ನು ಗೆದ್ದು ಬೀಗಿತ್ತು, ಈ ಫಲಿತಾಂಶದಿಂದ ದೆಹಲಿಯ ಗದ್ದುಗೆ ಮೇಲೆ ಕಣ್ಣಿಟ್ಟ ಬಿಜೆಪಿ ಪಕ್ಷಕ್ಕೆ ಆರಂಭ ದಲ್ಲಿಯೇ ದೆಹಲಿಯಲ್ಲಿ ತನ್ನದೇ ಆದ ಮತ ಬ್ಯಾಂಕ್ ಹೊಂದಿರುವ ಅಕಾಲಿ ದಳ ಪಕ್ಷವು ಬಿಜೆಪಿ ಪಕ್ಷದ ಮೈತ್ರಿ ತೊರೆದು ಕೊಂಡು ಹೊರ ನಡೆದಿತ್ತು.

ಇದೀಗ ಇದರ ಕುರಿತು ಗಮನ ಹರಿಸಿರುವ ಜೆ ಪಿ ನಡ್ಡಾ ರವರು ದೀರ್ಘ ಕಾಲದ ಮಿತ್ರ ಶಿರೋಮಣಿ ಅಕಾಲಿ ದಳದ ನಾಯಕರ ಜೊತೆ ಮಾತನಾಡಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನ ವೊಲಿಸಿದ್ದಾರೆ. ಇದೀಗ ಅಕಾಲಿದಳ ನಾಯಕರು ದೆಹಲಿಯಲ್ಲಿ ನಾಳೆಯಿಂದ ಬಿಜೆಪಿ ಪಕ್ಷದ ಪರವಾಗಿ ಪ್ರಚಾರಕ್ಕೆ ಇಳಿಯಲಿದ್ದಾರ. ಇದಾದ ಕೆಲವೇ ಗಂಟೆಗಳಲ್ಲಿ ಆಪ್ ಪಕ್ಷದ ಶಾಸಕ ಮನೋಜ್ ರವರನ್ನು ಬಿಜೆಪಿ ಪಕ್ಷಕ್ಕೆ ಕರೆ ತಂದಿರುವ ಜೆ ಪಿ ನಡ್ಡಾ ರವರು, ದೆಹಲಿಯಲ್ಲಿ ರಾಜನಾಥ್ ಸಿಂಗ್ ರವರ ಮೆರವಣಿಗೆಯ ವೇಳೆಯಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿ ಕೊಂಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಜನರಿಗೆ ಸುಳ್ಳು ಕನಸುಗಳನ್ನು ತೋರಿಸಿ ಮೋಸ ಮಾಡುತ್ತಿದ್ದಾರೆ ಐದು ವರ್ಷಗಳಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ, ಆದ ಕಾರಣ ಈ ಬಾರಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನೋಜ್ ಅವರು ಕರೆ ನೀಡಿದ್ದಾರೆ.