CAA, NRC, ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುತ್ತಿರುವ ದೇಶಗಳಿಗೆ ಹಂಗೇರಿಯನ್ ವಿದೇಶಿ ಸಚಿವ ಖಡಕ್ಕಾಗಿ ಪ್ರತಿಕ್ರಿಯೆ ಕೊಟ್ಟಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಒಂದು ದೇಶದಲ್ಲಿ ಯಾರಿಗೆ ಪೌರತ್ವ ನೀಡಬೇಕು ಹಾಗೂ ಯಾರಿಗೆ ಪೌರತ್ವ ನೀಡಬಾರದು ಎಂಬ ಸಂಪೂರ್ಣ ಅಧಿಕಾರ ಆ ದೇಶದ ಕೇಂದ್ರ ಸರ್ಕಾರದ ಕೈಯಲ್ಲಿ ಇರುತ್ತದೆ. ಇದೇ ವಿಷಯವನ್ನು ಭಾರತದ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳನ್ನು ವಿರೋಧಿಸುತ್ತಿರುವ ದೇಶಗಳಿಗೆ ಸ್ಪಷ್ಟವಾಗಿ ಭಾರತ ಈಗಾಗಲೇ ಸಂದೇಶ ರವಾನಿಸಿದೆ.

ಇಷ್ಟಾದರೂ ಕೆಲವು ರಾಷ್ಟ್ರಗಳು ಸುಖಾ ಸುಮ್ಮನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶದ ಆಂತರಿಕ ವಿಚಾರಗಳಾದ ಪೌರತ್ವ ತಿದ್ದುಪಡಿ ಮಸೂದೆ, ಎನ್ಆರ್ಸಿ ಹಾಗೂ ಜಮ್ಮು ಹಾಗೂ ಕಾಶ್ಮೀರ ಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ಧತಿಯ ಬಗ್ಗೆ ಈಗಲೂ ಬಾಯಿ ಬಡೆದು ಕೊಳ್ಳುತ್ತವೆ. ಪಾಕಿಸ್ತಾನ ದೇಶದ ಪರ ನಿಂತ ಟರ್ಕಿ, ಚೀನಾ ಹಾಗೂ ಯುರೋಪಿಯನ್ ಸಂಸತ್ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳು ಭಾರತ ಈ ಕೂಡಲೇ ಈ ಎಲ್ಲಾ ನಿರ್ಣಯಗಳನ್ನು ವಾಪಸ್ಸು ತೆಗೆದುಕೊಂಡರೇ ಒಳಿತು ಎಂಬ ಸಂದೇಶ ರವಾನೆ ಮಾಡಿದ್ದಾರೆ. ಭಾರತದ ಪರವಾಗಿಯೂ ಹಲವಾರು ರಾಷ್ಟ್ರಗಳು ನಿಂತು ಇದು ಭಾರತದ ಆಂತರಿಕ ವಿಚಾರ ಎಂದು ಈಗಾಗಲೇ ಹೇಳಿಕೆ ನೀಡಿವೆ.

ಇದೀಗ ಕೆಲವೇ ಕೆಲವು ದಿನಗಳ ಹಿಂದಷ್ಟೇ ಯುರೋಪಿಯನ್ ಸಂಸತ್ತು ಭಾರತದ ಆಂತರಿಕ ವಿಚಾರಗಳ ಬಗ್ಗೆ ಮೂಗು ತೋರಿಸಿ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ ಬಗ್ಗೆ ಮಾತನಾಡಿರುವ ಹಂಗೇರಿಯಾದ ವಿದೇಶಿ ಸಚಿವ ಪೀಟರ್ ರವರು, ಮೋದಿ ಸರ್ಕಾರದ ಇತ್ತೀಚಿನ ಕಾನೂನುಗಳು ಭಾರತ ದೇಶದ ಆಂತರಿಕ ವಿಚಾರಗಳು. ಇದರ ಕುರಿತು ಬೇರೆ ಯಾವುದೇ ದೇಶಗಳು ಮೂಗು ತೂರಿಸಬಾರದು, ಜನರು ಒಳ್ಳೆಯ ಕೆಲಸ ಮಾಡಿದ್ದರೇ ನಾಯಕನನ್ನು ಮತ್ತೊಮ್ಮೆ ಆಯ್ಕೆ ಮಾಡುತ್ತಾರೆ. ಅಲ್ಲಿನ ಜನರು ಆಯ್ಕೆ ಮಾಡಿದ್ದಾರೆ ಎಂದರೆ ಒಂದು ಅರ್ಥವಿರುತ್ತದೆ. ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ವಿಚಾರಗಳಲ್ಲಿ ನಾವು ಭಾರತದ ಪರ ನಿಲ್ಲುತ್ತೇವೆ. ಇನ್ನು ಜಮ್ಮು-ಕಾಶ್ಮೀರಕ್ಕೆ ನಮ್ಮ ದೇಶದ ಪರವಾಗಿ ಯಾವುದೇ ರಾಯಭಾರಿಗಳು ತೆರಳುವುದಿಲ್ಲ. ಯಾವ ಕಾರಣಕ್ಕೆ ಇತರ ದೇಶಗಳ ರಾಯಭಾರಿಗಳು ಕಾಶ್ಮೀರಕ್ಕೆ ತೆರಳಿ ತಪಾಸಣೆ ನಡೆಸಬೇಕು ಎಂದು ಭಾರತಕ್ಕೆ ಭೇಟಿ ನೀಡುತ್ತೇವೆ ಎನ್ನುತ್ತಿರುವ ರಾಯಭಾರಿಗಳಿಗೆ ಕೂಡ ಟಾಂಗ್ ನೀಡಿದ್ದಾರೆ.