ಬಿಹಾರದಲ್ಲಿ ಬಿಜೆಪಿಗೆ ಬಿಗ್ ರಿಲೀಫ್ ! CAA, NRC ವಿರುದ್ಧ ತೊಡೆತಟ್ಟಿ ದೀದಿ ಪರ ನಿಂತಿದ್ದ ತಂತ್ರಗಾರ ಪ್ರಶಾಂತ್ ಕಿಶೋರ್ ಕೈಬಿಟ್ಟ ನಿತೀಶ್ ಕುಮಾರ್ ! ಎಚ್ಚರಿಕೆಯ ಸಂದೇಶ ರವಾನೆ ಮಾಡಿ ಹೇಳಿದ್ದೇನು ಗೊತ್ತಾ??

ಬಿಹಾರದಲ್ಲಿ ಬಿಜೆಪಿಗೆ ಬಿಗ್ ರಿಲೀಫ್ ! CAA, NRC ವಿರುದ್ಧ ತೊಡೆತಟ್ಟಿ ದೀದಿ ಪರ ನಿಂತಿದ್ದ ತಂತ್ರಗಾರ ಪ್ರಶಾಂತ್ ಕಿಶೋರ್ ಕೈಬಿಟ್ಟ ನಿತೀಶ್ ಕುಮಾರ್ ! ಎಚ್ಚರಿಕೆಯ ಸಂದೇಶ ರವಾನೆ ಮಾಡಿ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಬಿಹಾರ ರಾಜ್ಯದಲ್ಲಿ ಬಿಜೆಪಿ ಹಾಗೂ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ ಪಾರ್ಟಿ ಅಧಿಕಾರ ನಡೆಸುತ್ತಿವೆ. ಮುಂದಿನ ಚುನಾವಣೆಯಲ್ಲಿಯೂ ಕೂಡ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಎರಡು ಪಕ್ಷಗಳು ನಿರ್ಧಾರ ಮಾಡಿ ಇತ್ತೀಚೆಗಷ್ಟೇ ಇದರ ಕುರಿತು ಅಧಿಕೃತವಾಗಿ ಘೋಷಣೆ ಮಾಡಿವೆ.

ಹೀಗಿರುವಾಗ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರವರು ತಟಸ್ಥ ನಿಲುವನ್ನು ತಾಳಿ ಬಿಜೆಪಿ ಪಕ್ಷಕ್ಕೆ ಬಿಹಾರದಲ್ಲಿ ಎರಡು ಯೋಜನೆಗಳನ್ನು ಜಾರಿಗೊಳಿಸಲು ಬಿಡುತ್ತಾರೋ ಇಲ್ಲವೋ ಎಂಬ ಅನುಮಾನ ಮನೆ ಮಾಡಿತ್ತು. ಇನ್ನು ಇದೇ ಪಕ್ಷದ ಉಪ ನಾಯಕ ರಾಗಿರುವ ಚುನಾವಣೆ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಮಮತಾ ದೀದಿ ಅವರ ನಿಲುವಿನ ಜೊತೆ ನಿಂತು ಯಾವುದೇ ದೇಶದ ಯಾವುದೇ ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳು ಜಾರಿಯಾಗಬಾರದು ಎಂದು ತಮ್ಮ ರಾಜಕೀಯ ತಂತ್ರಗಳ ಮೂಲಕ ಇತರ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನ ಪಡುತ್ತಿದ್ದರು.

ಒಂದೆಡೆ ಇದೇ ಪಕ್ಷದ ನಾಯಕರು ಬಿಜೆಪಿ ಪಕ್ಷಕ್ಕೆ ನಮ್ಮ ಬೆಂಬಲವಿದೆ, ಎರಡು ಮಸೂದೆಗಳನ್ನು ಈ ಕೂಡಲೇ ಬಿಹಾರದಲ್ಲಿ ಜಾರಿ ಮಾಡಿ ಎಂದರೇ ಪ್ರಶಾಂತ್ ಕಿಶೋರ್ ಅವರು ಮಾತ್ರ ತಮ್ಮ ಪಕ್ಷದ ಸ್ಥಾನಮಾನವನ್ನು ಬಳಸಿ ಕೊಂಡು ಪಕ್ಷಕ್ಕೆ ಮುಜುಗರ ವಾಗುವಂತಹ ಹಲವಾರು ಹೇಳಿಕೆಗಳನ್ನು ನೀಡಿದ್ದರು. ಇತರ ರಾಜ್ಯಗಳ ಮುಖ್ಯಮಂತ್ರಿಗ ಳಿಗೆ ಕರೆನೀಡಿ ದೇಶದ ಬಿಜೆಪಿಯೇತರ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಈ ಕೂಡಲೇ ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಾಗಬೇಕು ಎಂದು ಹೇಳಿಕೆ ನೀಡುವ ಮೂಲಕ ಸದ್ದು ಮಾಡಿದ್ದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರವರು ಮಾತ್ರ ತಟಸ್ಥ ನಿಲುವನ್ನು ತಾಳುವ ಮೂಲಕ ಬಿಜೆಪಿ ಪಕ್ಷಕ್ಕೆ ಆತಂಕ ಮೂಡಿಸಿದ್ದರು.

ಆದರೆ ಕೊನೆಗೂ ಕಠಿಣ ನಿಲುವನ್ನು ತಾಳಿರುವ ನಿತಿಶ್ ಕುಮಾರ್ ರವರು ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಕಾಯ್ದೆಗಳು ಕುರಿತು ಅಸಮಾಧಾನವಿದ್ದರೇ ಯಾವುದೇ ನಾಯಕರು ಪಕ್ಷದಲ್ಲಿ ಉಳಿಯ ಬಹುದು ಅಥವಾ ತಮಗೆ ಇಷ್ಟವಿಲ್ಲದಿದ್ದರೇ ಹೊರ ಹೋಗಬಹುದು ನಾವು ಯಾರನ್ನು ತಡೆಯುವುದಿಲ್ಲ ಎಲ್ಲರೂ ತಮ್ಮ ಹಕ್ಕುಗಳಿಗೆ ಮುಕ್ತರಾಗಿದ್ದಾರೆ ಎಂದು ಹೇಳಿ ಕೊಂಡಿದ್ದಾರೆ. ಇನ್ನು ಪ್ರಶಾಂತ್ ಕಿಶೋರ್ ಅವರ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಯಾವುದೇ ನಾಯಕರಾಗಲಿ ಪಕ್ಷದಲ್ಲಿ ಆ ನಾಯಕರು ಉಳಿಯಬೇಕು ಎಂದು ಕೊಂಡರೇ ನಮ್ಮ ಪಕ್ಷದ ಮೂಲ ರಚನೆಯನ್ನು ಅಳವಡಿಸಿ ಕೊಂಡು ಮುಂದೆ ಸಾಗಬೇಕು, ಇಲ್ಲವಾದಲ್ಲಿ ಅವರ ದಾರಿ ಅವರಿಗೆ ಬಿಟ್ಟದ್ದು ಎಂದು ಹೇಳುವ ಮೂಲಕ ಪ್ರಶಾಂತ್ ಕಿಶೋರ್ ಅವರಿಗೆ ಭಾರಿ ಮುಜುಗರ ಆಗುವಂತಹ ಹೇಳಿಕೆ ನೀಡಿದ್ದಾರೆ.