ಬಿಗ್ ನ್ಯೂಸ್: ಮೋದಿ ಸರ್ಕಾರದ ವಿರುದ್ಧವೇ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ ಸ್ವಾಮಿ ! ಯಾಕೆ ಗೊತ್ತಾ?

ಬಿಗ್ ನ್ಯೂಸ್: ಮೋದಿ ಸರ್ಕಾರದ ವಿರುದ್ಧವೇ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ ಸ್ವಾಮಿ ! ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನರೇಂದ್ರ ಮೋದಿ ರವರ ಸರ್ಕಾರ ಎರಡನೇ ಅವಧಿಯಲ್ಲಿ ಬಹಳ ವೇಗವಾಗಿ ತನ್ನ ನಿರ್ಧಾರಗಳನ್ನು ತೆಗೆದುಕೊಂಡು ಮೊದಲೇ ಯೋಜನೆ ಮಾಡಿದಂತೆ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡು ಮುನ್ನುಗ್ಗುತ್ತಿದೆ. ಹಲವಾರು ಕ್ಷೇತ್ರಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಿರುವ ಕೇಂದ್ರವು ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಹಲವಾರು ವರ್ಷಗಳಿಂದ ನಿಮಗೆಲ್ಲರಿಗೂ ತಿಳಿದಿರುವಂತೆ ಖಾಸಗಿ ಏರ್ಲೈನ್ಸ್ ಗಳಿಗೆ ಸೆಡ್ಡು ಹೊಡೆಯಲು ವಿಫಲವಾಗಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಉಂಟು ಮಾಡಿರುವ ಏರ್ ಇಂಡಿಯಾ ಏರ್ಲೈನ್ಸ್ ಅನ್ನು ಇದೀಗ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ನಿರ್ಧಾರ ಮಾಡಿದೆ. ಇದೇ ಸುದ್ದಿಯನ್ನು ಮನದಲ್ಲಿ ಇಟ್ಟುಕೊಂಡು ಪಿಯೂಷ್ ಗೋಯಲ್ ರವರು ಅಂತಾರಾಷ್ಟ್ರೀಯ ದಾವೂಸ್ ಆರ್ಥಿಕ ಸಮ್ಮೇಳನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪ ಮಾಡಿ, ಹೂಡಿಕೆ ಮಾಡಿ ಎಂದು ಹೇಳಿಕೆ ನೀಡಿದ್ದರು. ಈ ಸಮ್ಮೇಳನ ಮುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದು ಇದೀಗ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದೆ.

ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಒಂದೆಡೆ ವಿರೋಧ ಮಾಡುತ್ತಿದ್ದರೇ, ಸುಬ್ರಮಣಿಯನ್ ಸ್ವಾಮಿ ಇದರ ಬಗ್ಗೆ ಮಾತನಾಡಿ, ಕೇಂದ್ರ ಸರ್ಕಾರದ ನಿರ್ಧಾರ ಸರಿ ಇಲ್ಲ. ಸರ್ಕಾರ ಸ್ವಾಮ್ಯದ ಏರ್ಲೈನ್ಸ್ ಅನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು, ಕೇಂದ್ರ ಸರ್ಕಾರವು ಈಗಾಗಲೇ ತನ್ನ ಹೂಡಿಕೆಯನ್ನು ವಾಪಸ್ಸು ತೆಗೆದುಕೊಳ್ಳಲು ಆರಂಭಿಸಿದೆ, ಇದು ಒಂದು ದೇಶ ದ್ರೋಹ ಇದ್ದಂತೆ. ಇದರ ವಿರುದ್ಧ ನಾನು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷದ ನಡೆಯ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಅದೇ ನಡೆದಲ್ಲಿ ವಿಪಕ್ಷಗಳ ಮುಂದೆ ಬಿಜೆಪಿ ಪಕ್ಷಕ್ಕೆ ಬಾರಿ ಮುಜುಗರ ಉಂಟಾಗುವುದು ಖಚಿತ.