ಭಾರತ ತಂಡ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನಕ್ಕೆ ಹೋಗದೆ ಇದ್ದರೇ ಪಾಕಿಸ್ತಾನ ತಂಡ ಏನು ಮಾಡುತ್ತದಂತೆ ಗೊತ್ತಾ??

ಭಾರತ ತಂಡ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನಕ್ಕೆ ಹೋಗದೆ ಇದ್ದರೇ ಪಾಕಿಸ್ತಾನ ತಂಡ ಏನು ಮಾಡುತ್ತದಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ನೆರೆಯ ಪಾಕಿಸ್ತಾನದ ದೇಶದ ಬಗ್ಗೆ ನಿಮಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತೇವೆ. ಈಗಾಗಲೇ ಹಲವಾರು ವರ್ಷಗಳ ಕಾಲ ಪಾಕಿಸ್ತಾನ ದೇಶದಲ್ಲಿ ಭದ್ರತೆಯ ವಿಚಾರದಿಂದ ಕ್ರಿಕೆಟ್ ಸ್ಥಗಿತಗೊಳಿಸಲಾಗಿತ್ತು, ತದನಂತರ ಕೆಲವು ವರ್ಷಗಳು ಕಳೆದ ನಂತರ ಇತ್ತೀಚೆಗೆ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆರಂಭವಾಗಿದೆ.

ವಿಶ್ವದ ಯಾವುದೇ ರಾಷ್ಟ್ರಗಳು ಪಾಕಿಸ್ತಾನ ದೇಶಕ್ಕೆ ಕ್ರಿಕೆಟ್ ಆಡಲು ಹೋಗಲು ಹಿಂದೇಟು ಹಾಕುತ್ತವೆ, ಹೀಗಿರುವಾಗ ಇತ್ತೀಚೆಗೆ ಹಲವಾರು ಬಾಂಗ್ಲಾದೇಶ ಕ್ರಿಕೆಟಿಗರು ತಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದರೂ ಒಪ್ಪದ ಆಟಗಾರರನ್ನು ಕೈಬಿಟ್ಟು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಪಾಕಿಸ್ತಾನಕ್ಕೆ ತಂಡವೊಂದನ್ನು ಕ್ರಿಕೆಟ್ ಆಡಲು ಕಳುಹಿಸಿದೆ. ಇದಾದ ಬಳಿಕ ಪಾಕ್ ನೆಲದಲ್ಲಿ ಕೇವಲ ಎರಡೇ ಎರಡು ಟೆಸ್ಟ್ ಪಂದ್ಯಗಳು ನಡೆದಿವೆ, ಇದೇ ಅಂಶವನ್ನು ಮುಂದಿಟ್ಟು ಕೊಂಡಿರುವ ಪಾಕಿಸ್ತಾನ ದೇಶವು ಈ ಬಾರಿ ಏಷ್ಯಾಕಪ್ ಟೂರ್ನಿಯನ್ನು ಆಯೋಜಿಸುವ ಹೊಣೆ ಪಾಕಿಸ್ತಾನದ್ದಾಗಿದೆ, ಆದ ಕಾರಣದಿಂದ ಭಾರತ ತಂಡ ಪಾಕಿಸ್ತಾನದಲ್ಲಿ ಬಂದು ಕ್ರಿಕೆಟ್ ಆಡಬೇಕು ಎಂದು ಒತ್ತಾಯ ಮಾಡಿತ್ತು. ಆದರೆ ಇದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಒಪ್ಪದ ಕಾರಣ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೊಸದೊಂದು ಹೇಳಿಕೆ ನೀಡುವ ಮೂಲಕ ನಗೆಪಾಟಲಿಗೀಡಾಗಿದೆ.

ಹೌದು, ಇದೀಗ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜಿಸಿರುವ ಕಾರಣ ಭಾರತ ತಂಡ ಇಲ್ಲಿ ಬಂದು ಕ್ರಿಕೆಟ್ ಆಡಲೇಬೇಕು, ಇಲ್ಲವಾದಲ್ಲಿ ಮುಂಬರುವ ಟಿ-20ವಿಶ್ವಕಪ್ (2021) ಟೂರ್ನಿಯನ್ನು ಭಾರತ ಆಯೋಜಿಸುತ್ತಿದೆ, ಒಂದು ವೇಳೆ ನೀವು ಈಗ ಬರದೇ ಇದ್ದರೇ ನಾವು ಮುಂದಿನ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದೆ. ನಾವು ಯಾರೇ ಹೇಳಿದರೂ ಏಷ್ಯಾ ಕಪ್ ಟೂರ್ನಿಯ ಆಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಭಾರತದ ವಿರುದ್ಧ ವಿಶ್ವಕಪ್ ಪಂದ್ಯಗಳಲ್ಲಿ ಗೆಲ್ಲಲು ಪಾಕಿಸ್ತಾನ ತಂಡಕ್ಕೆ ಸಾಧ್ಯವೇ ಇಲ್ಲ, ಮತ್ತೊಮ್ಮೆ ಸೋತು ಮುಖಭಂಗ ಅನುಭವಿಸುವುದು ಯಾತಕ್ಕೆ ಎಂದು ಟೂರ್ನಿಗೆ ಬರಬಾರದು ಎಂದು ನಿಶ್ಚಯ ಮಾಡಿಕೊಂಡಂತೆ ಕಾಣುತ್ತದೆ ಎಂದು ವ್ಯಂಗ್ಯ ವಾಡಿದ್ದಾರೆ.