CAA ವಿರೋಧಿಸಿ ಹೋರಾಟ ಮಾಡುತ್ತಿರುವ ರಾಜ್ಯಗಳಿಗೆ ಗಾಯದ ಮೇಲೆ ಬರೆ ಎಳೆದ ಶಶಿ ತರೂರ್ ! ಹೇಳಿದ್ದೇನು ಗೊತ್ತಾ??

CAA ವಿರೋಧಿಸಿ ಹೋರಾಟ ಮಾಡುತ್ತಿರುವ ರಾಜ್ಯಗಳಿಗೆ ಗಾಯದ ಮೇಲೆ ಬರೆ ಎಳೆದ ಶಶಿ ತರೂರ್ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಿದ ಮೇಲೆ ಹಲವಾರು ರಾಜ್ಯಗಳು ಇದರ ವಿರುದ್ಧ ಧ್ವನಿ ಎತ್ತಿವೆ, ದೇಶದ ಅಧಿಕೃತ ಕಾನೂನಾಗಿ ಮಾರ್ಪಟ್ಟ ಮೇಲೆ ರಾಜ್ಯಗಳು ಪಾಲಿಸಲೇಬೇಕು ಎಂಬ ಮಾಹಿತಿ ಇದ್ದರೂ ಕೂಡ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳು ಹಾಗೂ ಹಲವಾರು ಪ್ರಾದೇಶಿಕ ಪಕ್ಷಗಳು ಕೇಂದ್ರದ ವಿರುದ್ಧ ತೊಡೆ ತಟ್ಟಿವೆ.

ಇನ್ನು ಕೆಲವು ರಾಜ್ಯಗಳು ವಿಧಾನಸಭಾ ಕಲಾಪದಲ್ಲಿ ನಿರ್ಣಯವನ್ನು ಮಂಡಿಸಿ ಶಾಸಕರ ಮತ ಪಡೆದು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸ ಲಾಗುವುದಿಲ್ಲ ಎಂದು ಉದ್ಧಟತನ ಮೆರೆದಿವೆ. ಇಂದು ರಾಜಸ್ಥಾನ ಸರ್ಕಾರ ಕೂಡ ವಿಧಾನಸಭಾ ಕಲಾಪದಲ್ಲಿ ನಿರ್ಣಯ ಮಂಡಿಸಿ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಕಿಡಿಕಾರಿದೆ. ಆದರೆ ಈ ಎಲ್ಲಾ ರಾಜ್ಯಗಳಿಗೆ ಮಾಜಿ ರಾಜತಾಂತ್ರಿಕ ಅಧಿಕಾರಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಅವರು ಒಮ್ಮೆಲೆ ಶಾಕ್ ನೀಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕಪಿಲ್ ಸಿಬಲ್ ಅವರು ಕೂಡ ಇದೇ ರೀತಿ ಮಾತನಾಡಿದ್ದರು.

ಹೌದು ಇದೀಗ ಮಾತನಾಡಿರುವ ಶಶಿ ತರೂರ್ ಅವರು ದೇಶದಲ್ಲಿ ಯಾವುದೇ ಪ್ರಜೆಗೆ ಪೌರತ್ವ ಕೊಡುವ ಹಕ್ಕನ್ನು ಕೇಂದ್ರ ಸರ್ಕಾರ ಮಾತ್ರ ಪಡೆದು ಕೊಂಡಿದೆ. ಯಾವುದೇ ರಾಜ್ಯ ಸರ್ಕಾರಗಳು ಒಬ್ಬರಿಗೆ ಪೌರತ್ವ ನೀಡುವ ಅಧಿಕಾರವನ್ನು ಹೊಂದಿಲ್ಲ, ಯಾವುದೇ ರೀತಿಯ ಪೌರತ್ವದ ಕುರಿತು ನಿರ್ಣಯಗಳನ್ನು ಕೈಗೊಳ್ಳುವ ಹಕ್ಕು ರಾಜ್ಯಗಳಿಗೆ ಇಲ್ಲವೇ ಇಲ್ಲ. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರವು ರಾಜ್ಯಸಭಾ ಹಾಗೂ ಲೋಕಸಭಾ ಗಳಲ್ಲಿ ಮಸೂದೆಯನ್ನು ಮಂಡಿಸಿ ಬಿಲ್ ಪಾಸ್ ಮಾಡಿರುವುದರಿಂದ ಇದು ಇದೀಗ ದೇಶದ ಅಧಿಕೃತ ಕಾನೂನು ಆಗಿ ಮಾರ್ಪಟ್ಟಿದೆ. ಆದ ಕಾರಣದಿಂದ ಯಾವುದೇ ರಾಜ್ಯಗಳು ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಲು ಸಾಧ್ಯವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಸುಪ್ರೀಂಕೋರ್ಟ್ಗೆ ಹೋದರೂ ಕೂಡ ಯಾವುದೇ ಲಾಭವಿಲ್ಲ, ಇಷ್ಟೆಲ್ಲಾ ತಿಳಿದಿದ್ದರೂ ಕೂಡ ರಾಜ್ಯ ಸರ್ಕಾರಗಳು ಸುಖಾಸುಮ್ಮನೆ ಹೋರಾಟ ಮಾಡುತ್ತೀವೆ. ಇದು ಕೇವಲ ಒಂದು ರಾಜಕೀಯ ಸ್ಟೆಂಟ್ ಎಂದು ಅಭಿಪ್ರಾಯ ಪಟ್ಟಿದ್ದಾರೆ.