CAA, NRC ನಂತರ ಮತ್ತೊಂದು ಐತಿಹಾಸಿಕ ನಡೆಯುತ್ತ ಮೋದಿ ! ಏನು ಗೊತ್ತಾ??

CAA, NRC ನಂತರ ಮತ್ತೊಂದು ಐತಿಹಾಸಿಕ ನಡೆಯುತ್ತ ಮೋದಿ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಎರಡನೇ ಬಾರಿ ಅಧಿಕಾರಕ್ಕೆ ಏರಿದ ಮೇಲೆ ನರೇಂದ್ರ ಮೋದಿ ಸರ್ಕಾರ ಫುಲ್ ಜೋಶ್ ನಲ್ಲಿ ಕೆಲಸ ಮಾಡುತ್ತಿದ್ದಂತೆ ಕಾಣುತ್ತಿದೆ. ಬಿಡುವಿಲ್ಲದೆ ಮಸೂದೆಗಳ ಮೇಲೆ ಮಸೂದೆಯನ್ನು ಮಂಡಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಐತಿಹಾಸಿಕ ನಿರ್ಣಯವನ್ನು ಮಂಡಿಸಲು ಮುಂದಾಗಿದೆ.

ಇದೀಗ ಚುನಾವಣಾ ಆಯೋಗದ ಬೇಡಿಕೆಗೆ ಅಸ್ತು ಎಂದಿರುವ ನರೇಂದ್ರ ಮೋದಿರವರ ಸರ್ಕಾರವು ಈ ಕುರಿತು ಇದೇ ತಿಂಗಳ ಕೊನೆಯ ದಿನ ಆರಂಭವಾಗುವ ಬಜೆಟ್ ಅಧಿವೇಶನದಲ್ಲಿ ನಕಲಿ ಮತದಾರರನ್ನು ತಡೆಯಲು ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಗಳನ್ನು ಜೋಡಿಸಲು ಮುಂದಾಗಿದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದಲ್ಲಿ ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು. ಅದೇ ರೀತಿ ಇದೀಗ ವೋಟರ್ ಐಡಿ ಗಳನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಲೇಬೇಕು ಎಂಬ ಕಾನೂನನ್ನು ಹೊರ ತರಲು ಸಿದ್ಧವಾಗಿದೆ. ಹಲವಾರು ವರ್ಷಗಳ ಹಿಂದೆ ಚುನಾವಣಾ ಆಯೋಗವು ಇದೇ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿತ್ತು.

ಕೆಲವು ಷರತ್ತುಗಳ ಮೇಲೆ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮನವಿಯನ್ನು ಒಪ್ಪಿಕೊಂಡಿದ್ದು ಇನ್ನು ಮುಂದೆ ಕೇಂದ್ರ ಚುನಾವಣಾ ಆಯೋಗವು ಆಧಾರ್ ಕಾರ್ಡ್ ನಲ್ಲಿರುವ ಪ್ರಮುಖ ಮಾಹಿತಿಗಳನ್ನು ಬಳಸಿಕೊಂಡು ನಕಲಿ ಮತದಾರರನ್ನು ಬಹಳ ಸುಲಭವಾಗಿ ಗುರುತಿಸಬಹುದು. ಇನ್ನು ಯಾವುದೇ ಮಾಹಿತಿ ಸೋರಿಕೆಯಾಗದಂತೆ ಹಲವಾರು ಸುರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಸೂಚನೆ ನೀಡಿ ಈ ಪ್ರಕ್ರಿಯೆಗೆ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ. ಈ ಮೂಲಕ ನಕಲಿ ಮತದಾನಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಹಲವಾರು ಪ್ರಶಂಸೆಗಳು ಕೇಳಿ ಬಂದಿವೆ.