ಕೊಟ್ಟ ಮಾತನ್ನು ಉಳಿಸಿಕೊಂಡ ನಿತಿನ್ ಗಡ್ಕರಿ, ದಶಕಗಳ ಕನ್ನಡಿಗರ ಕನಸು ನನಸು ! ಕನ್ನಡಿಗರು ಫುಲ್ ಖುಷ್ !

ಕೊಟ್ಟ ಮಾತನ್ನು ಉಳಿಸಿಕೊಂಡ ನಿತಿನ್ ಗಡ್ಕರಿ, ದಶಕಗಳ ಕನ್ನಡಿಗರ ಕನಸು ನನಸು ! ಕನ್ನಡಿಗರು ಫುಲ್ ಖುಷ್ !

ನಮಸ್ಕಾರ ಸ್ನೇಹಿತರೇ, ಇದೀಗ ನಿತಿನ್ ಗಡ್ಕರಿ ರವರು ತಾವು ನೀಡಿದ ಮಾತನ್ನು ಉಳಿಸಿ ಕೊಂಡಿದ್ದಾರೆ, ಸದಾ ಪಕ್ಷಾತೀತವಾಗಿ ರಾಜಕೀಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ವಿರೋಧ ಪಕ್ಷಗಳ ನಾಯಕರು ಹೊಗಳುವಂತೆ ಆಡಳಿತ ನಡೆಸುವ ನಿತಿನ್ ಗಡ್ಕರಿ ರವರು ಇದೀಗ ಕನ್ನಡಿಗರ ದಶಕದ ಕನಸಿಗೆ ಅಡಿಪಾಯ ಹಾಕಿದ್ದಾರೆ.

ಕಳೆದು ಕೆಲವು ದಿನಗಳ ಹಿಂದೆ ಇದೇ ಸುದ್ದಿಯನ್ನು ನಾವು ಪ್ರಕಟಣೆ ಮಾಡಿದ್ದೆವು, ಆದರೆ ಅಂದು ಹಲವಾರು ಜನ ಇದೊಂದು ಸುಳ್ಳು ಸುದ್ದಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರ ಕಾಲದಿಂದಲೂ ಈ ರೀತಿಯ ಸುದ್ದಿಗಳು ಕೇಳಿ ಬರುತ್ತಿವೆ. ಅದೆಷ್ಟೋ ನಾಯಕರು ಹೋರಾಟ ಮಾಡಿದರೂ ಕೂಡ ಅಭಿವೃದ್ಧಿ ಕಾರ್ಯ ಆರಂಭಗೊಂಡಿಲ್ಲ ಎಂದಿದ್ದರು. ಹೌದು ಈಗಾಗಲೇ ನಿಮಗೆ ತಿಳಿದಿರುತ್ತದೆ, ನಾವು ಮಾತನಾಡುತ್ತಿರುವುದು ಸಿಗಂದೂರು ಸೇತುವೆಯ ಬಗ್ಗೆ. ಅಂದು ಸೇತುವೆ ಆರಂಭ ಮಾಡುವುದೇ ಅನುಮಾನ ವಾಗಿತ್ತು. ಆದರೆ ಇದೀಗ ಸಿಗಂದೂರು ಸೇತುವೆ ಸಾಮಾನ್ಯ ಸೇತುವೆಯಾಗಿ ಉಳಿದು ಕೊಳ್ಳುವುದಿಲ್ಲ ಬದಲಾಗಿ ಅತ್ಯಾಧುನಿಕ ಸೇತುವೆ ಯಾಗಲಿದೆ. ಇದೀಗ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು ಬರೋಬ್ಬರಿ 420 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

ದೇಶದಲ್ಲಿಯೇ ಅತಿ ದೊಡ್ಡ ಹಾಗೂ ಲೇಟೆಸ್ಟ್ ಟೆಕ್ನಾಲಜಿ ಬಳಸಿ ನಿರ್ಮಾಣ ಮಾಡಲಾಗಿರುವ ಕೆಲವೇ ಕೆಲವು ಸೇತುವೆಗಳ ಸಾಲಿಗೆ ಸಿಗಂದೂರು ಸೇತುವೆ ಸೇರಿಕೊಳ್ಳಲಿದೆ. ಈ ಸೇತುವೆ ನಿರ್ಮಾಣದ ಮೂಲಕ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರಯಾಣದ ಸಮಯ ಬಹಳ ಕಡಿಮೆ ಆಗಲಿದ್ದು, ಕೇವಲ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೇ ಉದ್ಯೋಗ ವಕಾಶಗಳು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಯಾಗಲಿವೆ. ಅಂದು 2009ರಲ್ಲಿ ಇದೇ ಕಾರಣಕ್ಕಾಗಿ ಬಿಎಸ್ ಯಡಿಯೂರಪ್ಪನವರು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಅಷ್ಟರಲ್ಲಿ ಅವರು ರಾಜೀನಾಮೆ ನೀಡಿದ ಕಾರಣ ಕಾಮಗಾರಿ ಮುಂದಕ್ಕೆ ಹೋಗಿರಲಿಲ್ಲ. ಇದು ಕೇವಲ ಶಿವಮೊಗ್ಗ ಜನತೆಯ ಕನಸಾಗಿ ಇರಲಿಲ್ಲ ಬದಲಾಗಿ ಸಿಗಂದೂರು ಚೌಡೇಶ್ವರಿ ತಾಯಿಯ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರ ಕನಸಾಗಿತ್ತು. ಒಟ್ಟಿನಲ್ಲಿ ಅದೇನೇ ಆಗಲಿ ನಮ್ಮೆಲ್ಲರ ಕನಸನ್ನು ನನಸು ಮಾಡುತ್ತಿರುವ ನಿತಿನ್ ಗಡ್ಕರಿ ಅವರಿಗೆ ನಮ್ಮ ತಂಡದ ಪರವಾಗಿ ವಂದನೆಗಳು.