ಬಿಗ್ ನ್ಯೂಸ್: ಪೌರತ್ವ ತಿದ್ದುಪಡಿ ಮಸೂದೆ ಕುರಿತು ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ತಮ್ಮ ಅಧಿಕಾರದ ಮೂಲಕ ಹಾಗೂ ಸಾಮಾಜಿಕ ಕಳಕಳಿಯ ಮೂಲಕ ಎಲ್ಲರ ಮನ ಗೆದ್ದಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ರವರು ಇದೀಗ ದೇಶದ ಎಲ್ಲೆಡೆ ಪರ ಹಾಗೂ ವಿರೋಧದ ಚರ್ಚೆ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಮಾತನಾಡಿದ್ದಾರೆ ಎನ್ನಲಾಗಿದೆ.

ಈ ವಿಷಯವನ್ನು ಪೋಸ್ಟ್ಕಾರ್ಡ್ ಸಂಸ್ಥೆ ಪ್ರಕಟಣೆ ಮಾಡಿದ್ದು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ರವರು ಪೌರತ್ವ ತಿದ್ದುಪಡಿ ಮಸೂದೆ ಕುರಿತು ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಇದೀಗ ಮಾತನಾಡಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ರವರು, ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಹಲವಾರು ದಿನಗಳ ಕಾಲ ಚರ್ಚೆ ಮಾಡಿ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ, ಈ ಎಲ್ಲಾ ಚರ್ಚೆ ನಡೆಯುವಾಗ ಯಾವುದೇ ರಾಜಕಾರಣಿಗಳು ತುಟಿ ಬಿಚ್ಚಿಲಿಲ್ಲ, ಆದರೆ ಈ ಮಸೂದೆಗಳು ಜಾರಿಯಾದ ಮೇಲೆ ಎಲ್ಲಾ ರಾಜಕಾರಣಿ ಗಳು ವಿರೋಧ ಮಾಡುತ್ತಿದ್ದಾರೆ. ಇನ್ನು ಪ್ರತಿಭಟಿಸುವವರ ಬಗ್ಗೆ ಮಾತನಾಡಿರುವ ಅಣ್ಣಮಲೈ ರವರು, ಪ್ರತಿಭಟನೆ ನಡೆಸುತ್ತಿರುವ ಜನರು ಪೌರತ್ವ ತಿದ್ದುಪಡಿ ಮಸೂದೆ ಕುರಿತು ಎಲ್ಲಿಯೂ ಓದಿ ತಿಳಿದು ಕೊಂಡಿಲ್ಲ. ಯಾವುದೋ ರಾಜಕಾರಣಿ ಮಾತು ಕೇಳಿ ತಪ್ಪು ದಾರಿ ಹಿಡಿದಿದ್ದಾರೆ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ ಎನ್ನಲಾಗಿದೆ.

ಈ ಮೂಲಕ ಪ್ರತಿಭಟನೆ ನಡೆಸುತ್ತಿರುವ ಎಷ್ಟೋ ಜನರಿಗೆ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಯಾವುದೇ ಜ್ಞಾನವಿಲ್ಲ ಎಂಬ ಬಿಜೆಪಿ ಪಕ್ಷದ ನಿಲುವಿಗೆ ಇದೀಗ ಮತ್ತೋಂದು ಅಸ್ತ್ರ ಸಿಕ್ಕಂತಾಗಿದೆ. ಯಾಕೆಂದರೇ ಹಲವಾರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ಹರಿದಾಡುತ್ತಿದ್ದು ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಪ್ರತಿಭಟನೆ ಮಾಡುತ್ತಿರುವವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ, ತಾವು ಯಾತಕ್ಕಾಗಿ ಬಂದಿದ್ದೇವೆ ಎಂಬುದನ್ನು ತಿಳಿದುಕೊಳ್ಳದೇ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಹಲವಾರು ಜನರು ಸಿಕ್ಕಿಬಿದ್ದಿದ್ದಾರೆ. ಕೆಲವರು ಮೋದಿ ಜಿಎಸ್ಟಿ ತೆಗೆದಿದ್ದಾರೆ, ಪೌರತ್ವ ತಿದ್ದುಪಡಿ ಮಸೂದೆಯು ಜನರ ಮೇಲೆ ತೆರಿಗೆಯ ಹೊಡೆತ ಇದರಿಂದ ಟ್ಯಾಕ್ಸ್ ಹೆಚ್ಚಾಗುತ್ತದೆ, ಹೀಗೆ ಇನ್ನೂ ಹಲವಾರು ರೀತಿಯ ತಮಾಷೆಯ ಪ್ರತಿಕ್ರಿಯೆಗಳು ಪ್ರತಿಭಟನೆ ಮಾಡುತ್ತಿರುವ ಅವರಿಂದ ಕೇಳಿಬಂದಿವೆ.

Facebook Comments

Post Author: Ravi Yadav