CAA ವಿರೋಧ ಮಾಡುತ್ತಿರುವವರಿಗೆ ಸ್ಪಷ್ಟ ಸಂದೇಶ ನೀಡಿದ ಅಮಿತ್ ಶಾ ! ಹೊರಡಿಸಿದ ಸಂದೇಶ ಏನು ಗೊತ್ತಾ?

CAA ವಿರೋಧ ಮಾಡುತ್ತಿರುವವರಿಗೆ ಸ್ಪಷ್ಟ ಸಂದೇಶ ನೀಡಿದ ಅಮಿತ್ ಶಾ ! ಹೊರಡಿಸಿದ ಸಂದೇಶ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೇ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಕಾಯ್ದೆಗಳ ವಿಚಾರದಲ್ಲಿ ಪರ ಹಾಗೂ ವಿರೋಧದ ಚರ್ಚೆಗಳು ಬಹಳ ನಡೆಯುತ್ತೀವೆ. ಒಂದು ಕಡೆ ವಿರೋಧದ ಚರ್ಚೆಗಳು ಹಾಗೂ ರ್ಯಾಲಿಗಳು ನಡೆಯುತ್ತಿದ್ದರೇ, ಜನರು ಕೇಂದ್ರ ಸರ್ಕಾರದ ಪರವಾಗಿ ಇದ್ದೇವೆ ಎಂಬುದನ್ನು ನಿರೂಪಿಸಲು ಹಲವಾರು ಜನ ಬೆಂಬಲಿತ ರ್ಯಾಲಿಗಳನ್ನು ಕೂಡ ಮಾಡುತ್ತಿದ್ದಾರೆ.

ಈ ಎಲ್ಲಾ ಪರ-ವಿರೋಧದ ಚರ್ಚೆಗಳ ನಡುವೆ ಕೇಂದ್ರ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ನಮೂನೆ ಮಾಡಿರುವ ಕಾರಣ ಯಾವುದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಮಸೂದೆ ಯಾಗಲಿ ಅಥವಾ ಎನ್ಆರ್ಸಿ ಕಾಯ್ದೆಗಳನ್ನು ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಈ ಹಿಂದೆ ಹೇಳಿದೆ. ಇನ್ನೂ ಇದೇ ಸಂದರ್ಭದಲ್ಲಿ ಮಿತ್ರ ಪಕ್ಷಗಳು ಹಾಗೂ ಹಲವಾರು ರಾಜ್ಯಗಳು ಈ ಕಾಯ್ದೆಗಳನ್ನು ವಿರೋಧ ಮಾಡುತ್ತಿರುವ ಕಾರಣ ಕೇಂದ್ರ ಸರ್ಕಾರ ಒತ್ತಡದಿಂದ ವಾಪಸ್ ತೆಗೆದುಕೊಳ್ಳುತ್ತದೆ ಎಂದು ಪ್ರತಿಪಕ್ಷಗಳು ಅಂದುಕೊಂಡಿದ್ದೆವು. ಅಷ್ಟೇ ಅಲ್ಲದೇ ದೆಹಲಿಯಲ್ಲಿ ಪ್ರತಿಭಟನೆ ನಡೆದ ಕಾರಣ ದೆಹಲಿಯ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಇರುವ ಸಮಯದಲ್ಲಿ ಆಪ್ ಪಕ್ಷವು ಇದನ್ನೇ ಅಸ್ತ್ರವಾಗಿ ಬಳಸಿ ಕೊಳ್ಳುತ್ತಿರುವ ಕಾರಣ ಬಿಜೆಪಿ ಪಕ್ಷ ಹಿಂಪಡೆಯುವ ಸಾಧ್ಯತೆಗಳು ಇದೆ ಎಂದು ಹಲವಾರು ರಾಜ್ಯಗಳು ಹೋರಾಟವನ್ನು ಮತ್ತಷ್ಟು ಹೆಚ್ಚು ಮಾಡಿದ್ದವು.

ಆದರೆ ಇದೀಗ ಮಾತನಾಡಿರುವ ಅಮಿತ್ ಶಾ ರವರು, ಪ್ರತಿ ಪಕ್ಷಗಳ ನಾಯಕರಿಗೆ ಬಹಿರಂಗ ಸವಾಲು ಎಸೆಯುತ್ತೇನೆ, ಎಲ್ಲರೂ ಒಂದು ಕಡೆ ಕೂತು ಚರ್ಚೆ ಮಾಡೋಣ. ಬಳಿಕ ಯಾವ ನಿರ್ಣಯ ಹೊರ ಬರುತ್ತದೆಯೋ ಅದೇ ನಿರ್ಣಯವನ್ನು ಘೋಷಿಸೋಣ, ಅಂತಿಮವಾಗಿ ನ್ಯಾಯ ಗೆಲ್ಲಲಿದೆ. ಯಾವ ವಿರೋಧ ಪಕ್ಷಗಳು, ಯಾವ ರಾಜ್ಯಗಳು ಹೋರಾಟ ಮಾಡುತ್ತಾರೆ ಎಂಬುದು ನಮಗೊಂದು ವಿಚಾರವೇ ಅಲ್ಲ, ಯಾರೇ ವಿರೋಧ ಮಾಡಲಿ ಕಾಯಿದೆಯನ್ನು ಹಿಂಪಡೆಯುವ ಪ್ರಶ್ನೆಯೇ ಬರುವುದಿಲ್ಲ. ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷಗಳು ಸುಳ್ಳು ಹರಡುವುದರಲ್ಲಿ ನಿರತವಾಗಿವೆ, ಪೌರತ್ವವನ್ನು ಕಿತ್ತುಕೊಳ್ಳ ಲಿರುವ ಒಂದು ಅಂಶವನ್ನು ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ತೋರಿಸಿ. ನಾವೇ ಕಾಯ್ದೆಯನ್ನು ಹಿಂಪಡೆಯುತ್ತೇವೆ. ಪ್ರತಿ ಪಕ್ಷದವರಿಗೆ ವಾಸ್ತವಾಂಶ ತಿಳಿದಿಲ್ಲ, ಈ ಹೋರಾಟದ ಸುತ್ತ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಅಡಗಿಕೊಂಡಿದೆ. ಯಾರು ಹೋರಾಟ ಮಾಡುತ್ತಾರೋ ಬಿಡುತ್ತಾರೋ ನಾವಂತೂ ಕಾಯ್ದೆಯನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.