ಮೆಹಬೂಬ್ ಮುಫ್ತಿ ಗೆ ಬಾರಿ ಮುಖಭಂಗ ! ಪಿಡಿಪಿ ಪ್ರಮುಖ ನಾಯಕ ಆರ್ಟಿಕಲ್ 370 ರದ್ದತಿಯ ಬಳಿಕ ಕಾಶ್ಮೀರದ ಪರಿಸ್ಥಿತಿ ಕುರಿತು ಹೇಳಿದ್ದೇನು ಗೊತ್ತಾ??

ಮೆಹಬೂಬ್ ಮುಫ್ತಿ ಗೆ ಬಾರಿ ಮುಖಭಂಗ ! ಪಿಡಿಪಿ ಪ್ರಮುಖ ನಾಯಕ ಆರ್ಟಿಕಲ್ 370 ರದ್ದತಿಯ ಬಳಿಕ ಕಾಶ್ಮೀರದ ಪರಿಸ್ಥಿತಿ ಕುರಿತು ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದೆ ಉಗ್ರರ ಹೆಡೆ ಮುರಿಕಟ್ಟಲು ಹಾಗೂ ಜಮ್ಮು-ಕಾಶ್ಮೀರದ ಗತ ವೈಭವವನ್ನು ಮರಳಿ ತರಲು ಕೇಂದ್ರ ಸರ್ಕಾರಕ್ಕೆ ಜಮ್ಮು ಹಾಗೂ ಕಾಶ್ಮೀರ ಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದು ಅನಿವಾರ್ಯವಾಗಿತ್ತು.

ಅದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಈ ವಿಷಯ ಕೇವಲ ಕಾಶ್ಮೀರದಲ್ಲಿ ಮಾತ್ರ ಸದ್ದು ಮಾಡಲಿಲ್ಲ, ಬದಲಾಗಿ ಇಡೀ ಭಾರತದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗುರಿಯಾಗಿತ್ತು. ಇನ್ನು ಜಮ್ಮು ಹಾಗೂ ಕಾಶ್ಮೀರದ ರಾಜಕೀಯ ಪಕ್ಷಗಳು ಕೂಡ ವಿರೋಧ ವ್ಯಕ್ತಪಡಿಸಿದ್ದವು, ಅದರಲ್ಲಿಯೂ ಜಮ್ಮು ಹಾಗೂ ಕಾಶ್ಮೀರದ ಪಿಡಿಪಿ ಪಕ್ಷ ಕೇಂದ್ರ ಸರ್ಕಾರ ಈ ನಿರ್ಣಯ ಕೈಗೊಂಡರೆ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಸಾಧ್ಯವೇ ಇಲ್ಲ ಎಂದು ಕಿಡಿಕಾರಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದರು. ಅಂದು ಪಿಡಿಪಿ ಪಕ್ಷದ ಪ್ರಮುಖ ನಾಯಕ ಸೈಯದ್ ಅಲ್ತಾಫ್ ಬುಖಾರಿ ರವರು ಕೂಡ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಿಡಿಕಾರಿದ್ದರು. ಆದರೆ ಇಂದು ಇವರು ನೀಡಿದ ಹೇಳಿಕೆ ಕೇಳಿದರೇ ಎಲ್ಲರೂ ಬಾಯಿಗೆ ಬೀಗ ಹಾಕಿ ಕೊಳ್ಳಬೇಕಾಗುತ್ತದೆ.

ಹೌದು ಇದರ ಕುರಿತು ಇದೀಗ ಮಾತನಾಡಿರುವ ಸೈಯದ್ ಅಲ್ತಾಫ್ ಬುಖಾರಿ ರವರು, ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದ ಮೇಲೆ ಇಲ್ಲಿಯವರೆಗೂ ಒಬ್ಬರು ಸಾವನ್ನಪ್ಪಿಲ್ಲ, ಇದರ ಸಂಪೂರ್ಣ ಕ್ರೆಡಿಟ್ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ. ಕೇಂದ್ರ ಸರ್ಕಾರವು ಜಮ್ಮು ಹಾಗೂ ಕಾಶ್ಮೀರ ದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಹಳ ಮುತುವರ್ಜಿಯಿಂದ ನಿರ್ಣಯಗಳನ್ನು ಕೈಗೊಂಡು ಜಮ್ಮು ಹಾಗೂ ಕಾಶ್ಮೀರ ವನ್ನು ಶಾಂತಿಯುತವಾಗಿ ಇರಿಸಿದ್ದಾರೆ. ಇನ್ನು ಅಲ್ಲಿನ ಜನರು ಕೂಡ ಯಾವುದೇ ವಿರೋಧ ನಡೆಸದೇ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿ ಇಡೀ ಜಮ್ಮು ಹಾಗೂ ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಸಹಾಯ ಮಾಡಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರದ ಜೊತೆಗೆ ನಾವು ಕಾಶ್ಮೀರದ ಜನತೆಗೂ ಗೌರವವನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ. ಪಿಡಿಪಿ ಪಕ್ಷದ ಪ್ರಮುಖ ನಾಯಕ ಹೇಳಿಕೆ ನೀಡಿದ್ದರೂ ಕೂಡ ಒಂದು ಚಿಕ್ಕ ಕಲ್ಲು ತೂರಾಟ ನಡೆದರೂ ಗಂಟೆಗಟ್ಟಲೆ ಪ್ರೋಗ್ರಾಮ್ ನಡೆಸುವ ಮಾಧ್ಯಮಗಳು ಮಾತ್ರ ಇದರ ಕುರಿತು ಕಿಂಚಿತ್ತೂ ಗಮನ ಹರಿಸಿಲ್ಲ ಎಂಬುದೇ ವಿಪರ್ಯಾಸ.