CAA ವಿರೋಧಿಸಿ ಹೋರಾಟ ಮಾಡುತ್ತಿರುವ ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿ ಒಮ್ಮೆಲೇ ಶಾಕ್ ನೀಡಿದ ಕಪಿಲ್ ಸಿಬಲ್ ! ಹೇಳಿದ್ದೇನು ಗೊತ್ತಾ?

CAA ವಿರೋಧಿಸಿ ಹೋರಾಟ ಮಾಡುತ್ತಿರುವ ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿ ಒಮ್ಮೆಲೇ ಶಾಕ್ ನೀಡಿದ ಕಪಿಲ್ ಸಿಬಲ್ ! ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಕಪಿಲ್ ಸಿಬಲ್ ರವರು ಎಂತಹ ವಕೀಲ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ. ಸುಪ್ರೀಂ ಕೋರ್ಟ್ ನಲ್ಲಿ ಹಲವಾರು ಪ್ರಕರಣಗಳನ್ನು ಒಮ್ಮೆಲೆ ನಿಭಾಯಿಸುವ ಹಿರಿಯ ವಕೀಲ ರಲ್ಲಿ ಇವರೂ ಒಬ್ಬರು. ಕಾಂಗ್ರೆಸ್ ಪಕ್ಷದ ನಾಯಕ ರಾಗಿರುವ ಇವರು ಹಲವಾರು ಪ್ರಕರಣಗಳಲ್ಲಿ ವಾದ ಮಂಡಿಸುತ್ತಿದ್ದಾರೆ.‌

ಇದೇ ವಕೀಲರು ಇದೀಗ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿರುವ ರಾಜ್ಯಗಳಿಗೆ ಶಾಕ್ ನೀಡಿದ್ದಾರೆ, ನಿಮಗೆಲ್ಲರಿಗೂ ತಿಳಿದಿರುವಂತೆ ಪಶ್ಚಿಮ ಬಂಗಾಳ, ಮಧ್ಯಪ್ರದೇಶ , ಕೇರಳ, ಪಂಜಾಬ್ ಸೇರಿದಂತೆ ಹಲವಾರು ರಾಜ್ಯಗಳು ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿಕೆ ನೀಡಿವೆ. ಕೇರಳ ಹಾಗೂ ಪಂಜಾಬ್ ರಾಜ್ಯಗಳು ಒಂದು ಹೆಜ್ಜೆ ಮುಂದೆ ಹೋಗಿ ವಿಧಾನ ಸಭೆಯಲ್ಲಿ ಬೆಂಬಲ ಮತ ಪಡೆದುಕೊಂಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ‌. ಈ ಎಲ್ಲಾ ರಾಜ್ಯಗಳ ವಕಾಲತ್ತು ಕಪಿಲ್ ಸಿಬಲ್ ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.  ಆದರೆ ಕಪಿಲ್ ಸಿಬಲ್ ಅವರು ಎಲ್ಲ ರಾಜ್ಯಗಳಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ ತಿಳಿಯಲು ಕೆಳಗಡೆ ಓದಿ.

ಹೌದು, ಪೌರತ್ವ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಂಡಿಸಿ ಬಿಜೆಪಿ ಪಕ್ಷವು ಅಂಗೀಕಾರ ಮಾಡಿಸಿ ಕೊಂಡಿದ್ದು, ಈಗ ಪೌರತ್ವ ತಿದ್ದುಪಡಿ ಹಾಗೂ ಎಂಆರ್ಸಿ ಯೋಜನೆಗಳು ಕೇವಲ ಮಸೂದೆಗಳ ಆಗಿ ಉಳಿದು ಕೊಂಡಿಲ್ಲ ಬದಲಾಗಿ ಕಾಯ್ದೆಗಳಾಗಿ ಬದಲಾಗಿವೆ. ಹೀಗಿರುವಾಗ ದೇಶದ ಪ್ರತಿಯೊಂದು ರಾಜ್ಯಗಳು ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸಲೇಬೇಕು, ಇಲ್ಲವಾದಲ್ಲಿ ಅದು ಭಾರತೀಯ ಸಂವಿಧಾನದ ಪ್ರಕಾರ ಅಸಂವಿಧಾನಿಕ ನಡೆಯಾಗುತ್ತದೆ. ಕೆಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ಸಹಕಾರ ನೀಡುವುದಿಲ್ಲ ಎಂದು ಪಟ್ಟು ಹಿಡಿದಿವೆ. ಆದರೆ ಇದು ಎಷ್ಟರ ಮಟ್ಟಿಗೆ ವಾಸ್ತವಿಕ ಎಂಬುದು ತಿಳಿದಿಲ್ಲ. ಕಾನೂನಿನ ಪ್ರಕಾರ ತೆಗೆದು ಕೊಂಡರೆ ಪ್ರತಿಯೊಂದು ರಾಜ್ಯಗಳು ಕೇಂದ್ರ ಸರ್ಕಾರದ ಕಾನೂನು ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರೇ ರಾಜ್ಯಗಳ ಪಾಲಿಗೆ ಕಷ್ಟವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಎಲ್ಲ ರಾಜ್ಯಗಳು CAA ಜಾರಿ ಮಾಡಲೇಬೇಕು ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.